ಬ್ರೇಕಿಂಗ್ ನ್ಯೂಸ್
04-08-21 04:10 pm Headline Karnataka News Network ಕರ್ನಾಟಕ
ಬೆಂಗಳೂರು, ಆಗಸ್ಟ್ 4: ಸಿಎಂ ಆಗುತ್ತಾರೆಂದು ರೇಸಿನಲ್ಲಿದ್ದ ಅರವಿಂದ ಬೆಲ್ಲದ ಹೆಸರು ಸಚಿವ ಸ್ಥಾನದಿಂದಲೂ ತಪ್ಪಿದ್ದು ಬಿಜೆಪಿ ಒಳಗೇ ಮುಜುಗರ ಸೃಷ್ಟಿಸಿದೆ. ಸಿಎಂ ರೇಸಿನಲ್ಲಿದ್ದ ವ್ಯಕ್ತಿಗೆ ಸಚಿವ ಸ್ಥಾನವೂ ತಪ್ಪಿದ್ದು ಹೇಗೆ ಎನ್ನುವ ಬಗ್ಗೆ ಚರ್ಚೆ ಆರಂಭಗೊಂಡಿದೆ. ಮಾಹಿತಿ ಪ್ರಕಾರ, ಅರವಿಂದ ಬೆಲ್ಲದಗೆ ಸಚಿವ ಸ್ಥಾನ ತಪ್ಪಲು ಜಗದೀಶ್ ಶೆಟ್ಟರ್ ಕಾರಣವಂತೆ.
ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಆಯ್ಕೆಯಾಗುತ್ತಿದ್ದಂತೆ, ತಾನು ಸಚಿವನಾಗುವುದಿಲ್ಲ ಎಂದು ದೂರ ಉಳಿದಿದ್ದು ಜಗದೀಶ ಶೆಟ್ಟರ್. ಹುಬ್ಬಳ್ಳಿ, ಬೆಳಗಾವಿ ಭಾಗದಲ್ಲಿ ಪ್ರಭಾವಿಯಾಗಿರುವ ಶೆಟ್ಟರ್ ಪ್ರಬಲ ಲಿಂಗಾಯತ ಸಮುದಾಯದ ನಾಯಕ. ಹಿಂದೆ ಬೊಮ್ಮಾಯಿ ಜನತಾ ಪರಿವಾರದಲ್ಲಿದ್ದಾಗ, ಅವರನ್ನು ಸೋಲಿಸಿ ಗೆಲುವು ಕಂಡಿದ್ದ ಶೆಟ್ಟರ್ ಗೆ ಬೊಮ್ಮಾಯಿ ಸಿಎಂ ಆಗಿದ್ದು ಇರಿಸು ಮುರಿಸು ತಂದಿತ್ತು. ತನಿಗಿಂತ ಕಿರಿಯನಾಗಿರುವ ಬೊಮ್ಮಾಯಿ ಅಡಿಯಲ್ಲಿ ಹೇಗೆ ಕೆಲಸ ಮಾಡುವುದು ಎಂಬ ನೋವಿನಲ್ಲಿ ಸಚಿವನಾಗಲ್ಲ ಎಂದಿದ್ದರು.
ಇದೇ ವೇಳೆ, ಹುಬ್ಬಳ್ಳಿಯವರೇ ಆಗಿರುವ ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಖಚಿತ ಎನ್ನಲಾಗಿತ್ತು. ತಂದೆ ಚಂದ್ರಕಾಂತ ಬೆಲ್ಲದ ಮಾಜಿ ನಾಯಕ ಮತ್ತು ಆರೆಸ್ಸೆಸ್ ನಲ್ಲಿ ಪ್ರಭಾವ ಹೊಂದಿರುವುದರಿಂದ ಕ್ಲೀನ್ ಇಮೇಜ್ ನೆಲೆಯಲ್ಲಿ ಬೆಲ್ಲದ ಹೆಸರು ಸಚಿವ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ, ಹುಬ್ಬಳ್ಳಿ- ಧಾರವಾಡದ ವ್ಯಕ್ತಿ ಅರವಿಂದ ಬೆಲ್ಲದ ಸಚಿವನಾಗಿ ಈ ಭಾಗದಲ್ಲಿ ಉಸ್ತುವಾರಿಯಾದರೆ, ಅದರ ಪ್ರಭಾವ ತನ್ನ ಮೇಲಾಗುತ್ತದೆ ಎನ್ನುವ ಅಳುಕು ಶೆಟ್ಟರ್ ಗಿತ್ತು. ಹಾಗಾಗಿ ಅರವಿಂದ ಬೆಲ್ಲದ ಸಚಿವನಾಗಬಾರದು. ಬದಲಿಗೆ, ತನ್ನದೇ ಬೆಂಬಲಿಗ ನವಲಗುಂದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಹೆಸರನ್ನು ಶೆಟ್ಟರ್ ಸೂಚಿಸಿದ್ದರು.
ಹಾಗಿದ್ದರೂ, ಕ್ಲೀನ್ ಇಮೇಜ್ ಮತ್ತು ಭವಿಷ್ಯದ ನಾಯಕ ಎಂದು ಬಿಂಬಿಸುವ ನಿಟ್ಟಿನಲ್ಲಿ ಆರೆಸ್ಸೆಸ್ ನಾಯಕರು ಅರವಿಂದ ಬೆಲ್ಲದ ಹೆಸರನ್ನು ಬೆಂಬಲಿಸಿದ್ದರು. ಬೆಲ್ಲದ ಸಿಎಂ ಆಗಬೇಕಿತ್ತು. ಕನಿಷ್ಠ ಸಚಿವ ಸ್ಥಾನವೂ ಸಿಗದಿದ್ದರೆ, ಅದು ರಾಜ್ಯದಲ್ಲಿ ಮೈನಸ್ ಸಂದೇಶ ಹೋಗುತ್ತದೆ ಎನ್ನುವ ನೆಲೆಯಲ್ಲಿ ಸಚಿವ ಸ್ಥಾನ ಸಿಗಲೇಬೇಕು ಎನ್ನುವ ಒತ್ತಡವನ್ನು ಆರೆಸ್ಸೆಸ್ ಮಾಡಿತ್ತು. ಆದರೆ, ಆರೆಸ್ಸೆಸ್ ಮಾತು ಕೇಳಿದರೆ, ಅತ್ತ ಜಗದೀಶ ಶೆಟ್ಟರ್ ಅವರನ್ನು ಎದುರು ಹಾಕ್ಕೊಳ್ಳಬೇಕಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿಯಾಗಿರುವ ಶೆಟ್ಟರ್ ಅವರ ಮಾತನ್ನು ಕೇಳುವುದು ಬಿಜೆಪಿಗೆ ಆ ಭಾಗದಲ್ಲಿ ಚುನಾವಣೆ ಗೆಲ್ಲಲು ಅನಿವಾರ್ಯ. ಹಾಗಾಗಿ ಕೊನೆಯ ಕ್ಷಣದಲ್ಲಿ ಶೆಟ್ಟರ್ ಮಾತು ಗೆದ್ದಿತ್ತು. ಅವರು ಸೂಚಿಸಿದ್ದ ಶಂಕರ ಪಾಟೀಲ್ ಮುನೇನಕೊಪ್ಪ ಸಚಿವರಾಗಿದ್ದಾರೆ. ಕೊನೆಯ ಕ್ಷಣದ ವರೆಗೂ ಸಚಿವ ಸ್ಥಾನ ಖಾತ್ರಿಯಾಗಿದ್ದ ಬೆಲ್ಲದ ಹೆಸರು ಪಟ್ಟಿಯಿಂದ ಹಿಂದಕ್ಕೆ ಸರಿದಿದೆ.
ಯಡಿಯೂರಪ್ಪ ವಿರುದ್ಧ ಯೋಗೀಶ್ವರ್ ಜೊತೆ ಸೇರಿ ದೆಹಲಿ ಮಟ್ಟದಲ್ಲಿ ದೂರು ಒಯ್ದಿದ್ದವರಲ್ಲಿ ಅರವಿಂದ ಬೆಲ್ಲದ್ ಕೂಡ ಒಬ್ಬರು. ಸಹಜವಾಗಿಯೇ ತನ್ನ ವಿರುದ್ಧ ಕೆಲಸ ಮಾಡಿದವರು ಸಚಿವರಾಗಬಾರದು ಎಂದು ಹಠ ಹಿಡಿದಿದ್ದ ಯಡಿಯೂರಪ್ಪ ಬೆಲ್ಲದ ಆಯ್ಕೆ ವಿಚಾರದಲ್ಲಿ ತನ್ನ ಮಾತು ನಡೆಯುವಂತೆ ನೋಡಿಕೊಂಡಿದ್ದಾರೆ. ಅದಕ್ಕೆ ದಾಳವಾಗಿದ್ದು ಮಾತ್ರ ಶೆಟ್ಟರ್.
ಲಿಂಗಾಯತ ಸಮುದಾಯದ ಅರವಿಂದ ಬೆಲ್ಲದ್ ಸಚಿವನಾದರೆ, ಹುಬ್ಬಳ್ಳಿ ಭಾಗದಲ್ಲಿ ಪಕ್ಷದಲ್ಲಿ ಗಟ್ಟಿ ಮಾಡಿಕೊಂಡಿರುವ ಪ್ರಭಾವ ಕಡಿಮೆಯಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಾಲಿಗೆ ದೊಡ್ಡ ನಾಯಕ ಶೆಟ್ಟರ್. ಸದ್ಯಕ್ಕೆ ವಯಸ್ಸಿನಲ್ಲಿ ಹಿರಿಯರಾಗಿರುವ ಶೆಟ್ಟರ್ ಹಿಡಿತ ತಪ್ಪಿದರೆ, ಅರವಿಂದ ಬೆಲ್ಲದ ಕೈಮೇಲಾಗುತ್ತದೆ ಎನ್ನುವ ದೂರಾಲೋಚನೆ ಇತ್ತು. ಶಂಕರ ಪಾಟೀಲ್ ಸಚಿವನಾದರೂ, ಶೆಟ್ಟರ್ ಅಡಿಯಲ್ಲೇ ಅಧಿಕಾರ ಕೇಂದ್ರ ಇರುತ್ತದೆ ಎನ್ನುವ ಭಾವನೆ ಅವರಲ್ಲಿತ್ತು.
Hubli Dharwad MLA Arvind Bellad who was in CM race not seen even in the new cabinet
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm