ಬ್ರೇಕಿಂಗ್ ನ್ಯೂಸ್
29-07-21 10:22 pm Headline Karnataka News Network ಕರ್ನಾಟಕ
ಶಿವಮೊಗ್ಗ, ಜುಲೈ 29: ಮಾಜಿ ಸಿಎಂ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗಲಾರೆ ಎಂದು ಎಂದು ಹೇಳಿದ ಬೆನ್ನಲ್ಲೇ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮದೇ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಬೊಮ್ಮಾಯಿ ಆಯ್ಕೆ ಶ್ರೀಕೃಷ್ಣನ ತಂತ್ರಗಾರಿಕೆ. ಹಾಗೆಂದು ನಾನೇನೂ ಸಚಿವನಾಗಲ್ಲ ಎನ್ನುವುದಿಲ್ಲ. ಪಕ್ಷ ನನಗೆ ಯಾವ ಹುದ್ದೆಯನ್ನು ನೀಡುತ್ತದೋ ಅದನ್ನು ಪಡೆಯಲು ಸಿದ್ಧನಿದ್ದೇನೆ. ಡಿಸಿಎಂ ಆಗಬೇಕು ಎಂದ್ರೂ ಪಡೆಯುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಪಕ್ಷದಲ್ಲಿ ಸಾವಿರಾರು ಕಾರ್ಯಕರ್ತರ ರೀತಿ ನಾನು ಕೂಡ. ಪಕ್ಷದಲ್ಲಿ ಸಿಎಂ ಆಗುವ ಅರ್ಹತೆಯಿದ್ದ ಹಲವು ಹಿರಿಯರಿದ್ದರು. ಬೊಮ್ಮಾಯಿ ಆಯ್ಕೆ ರಾಜಕೀಯ ದಾಳ ಅಷ್ಟೇ. ಈಗ ಸಿಎಂ ಆಗಿದ್ದಾರೆ. ಅದನ್ನು ಎಲ್ಲರೂ ಒಪ್ಪಿದ್ದಾರೆ. ಯಡಿಯೂರಪ್ಪ ಅವರು ಬೊಮ್ಮಾಯಿ ಹೆಸರನ್ನು ಸೂಚಿಸಿದಾಗ ನಾನೇ ಅನುಮೋದಿಸಿದ್ದೆ. ಬಿಜೆಪಿಯಲ್ಲಿ ನಾನೇ ಪ್ರವೀಣ ಎನ್ನುವ ಸಂಸ್ಕೃತಿ ಇಲ್ಲ. ಸಿಎಂ ಸ್ಥಾನಕ್ಕೆ ನನಗಿಂತ ಹಿರಿಯರಿದ್ದಾರೆ. ನಾನು ಯಾವುದೇ ಹುದ್ದೆಗಾಗಿ ಲಾಬಿ ಮಾಡುವುದಿಲ್ಲ. ಪಕ್ಷ ಏನು ಕೊಡುತ್ತದೆಯೋ ಅದನ್ನು ಪಡೆಯುತ್ತೇನೆ. ಡಿಸಿಎಂ ಸ್ಥಾನ ಕೊಟ್ಟರೆ ತಗೋತೀನಿ. ನಾನು ಡಿಸಿಎಂ ಆಗಬೇಕೆಂದು ಹಿಂದುಳಿದ ವರ್ಗದ ಸ್ವಾಮೀಜಿಗಳು, ಸಂಘಟನೆಗಳು ಆಸೆ ಪಟ್ಟಿದ್ದಾರೆ. ನಾನು ಯಾವುದಕ್ಕೂ ಲಾಬಿ ಮಾಡಲ್ಲ. ಹಾಗೆಂದು ನಾವು ಸನ್ಯಾಸಿಗಳಲ್ಲ ಎಂದರು.
ಬಿಜೆಪಿಯಲ್ಲಿ ಶ್ರೀರಾಮ ಆಡಳಿತ, ಶ್ರೀಕೃಷ್ಣನ ತಂತ್ರಗಾರಿಕೆ ಗೊತ್ತಿದೆ. ನಾವು ರಾಜಕೀಯ ಮಾಡುತ್ತಿದ್ದೇವೆ. ಶ್ರೀಕೃಷ್ಣನ ತಂತ್ರಗಾರಿಕೆಯಲ್ಲಿ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಮುಂದೆ ಬಹುಮತ ಬಂದಾಗ ಶ್ರೀರಾಮನ ಆಡಳಿತ ಮಾಡುತ್ತೇವೆ. ಆಡಿಯೋ, ವಿಡಿಯೋ ಬಹಳಷ್ಟು ನೋಡಿದ್ದೇವೆ. ಯಾವುದಕ್ಕೂ ಜಗ್ಗುವುದಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಕ್ಯಾಬಿನೆಟ್ ರಚನೆ ಆಗಲಿದೆ. ಹಳಬರೋ, ಹೊಸಬರೋ ಹಿರಿಯ ನಾಯಕರು ನಿರ್ಧಾರ ಮಾಡಲಿದ್ದಾರೆ ಎಂದು ಹೇಳಿದರು.
ಬೊಮ್ಮಾಯಿ ಸಂಪುಟಕ್ಕೆ ಸೇರಲ್ಲ ಎನ್ನುವ ಶೆಟ್ಟರ್ ನಿರ್ಧಾರ ಅವರ ವೈಯಕ್ತಿಕ. ಅದರ ಬಗ್ಗೆ ಕಮೆಂಟ್ ಮಾಡಲ್ಲ. ಅವರಂತೆಯೇ ನಾನು ಕೂಡ ಸಂಪುಟದಿಂದ ದೂರವಿರುತ್ತೇನೆ ಎಂದು ಮಾಧ್ಯಮಗಳಲ್ಲಿ ಬಂದಿದ್ದನ್ನು ಗಮನಿಸಿದೆ. ಹಾಗೇನಿಲ್ಲ. ಸಚಿವ ಪದವಿ ಸಾಕು ಎನ್ನಲು ವೈರಾಗಿಯಲ್ಲ. ಪಕ್ಷದ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಈಶ್ವರಪ್ಪ ಸುದ್ದಿಗೋಷ್ಠಿ ಕರೆದು ಹೇಳಿಕೊಂಡಿದ್ದಾರೆ.
Senior BJP leader K.S. Eshwarappa has said he is ready to join the cabinet led by Chief Minister Basavaraj Bommai, making it clear that he would not follow in the footsteps of another senior leader Jagadish Shettar. Mr. Shettar has made it clear that he is not in the race for a berth in the ministry.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm