ಜುಲೈ 25ರಿಂದ ದೇಗುಲಗಳಲ್ಲಿ ಪ್ರಸಾದ ಇನ್ನಿತರ ಸೇವೆಗಳಿಗೆ ಅವಕಾಶ

24-07-21 02:23 pm       Headline Karnataka News Network   ಕರ್ನಾಟಕ

ದೇವರ ದರ್ಶನಕ್ಕೆ ಮಾತ್ರ ಅವಕಾಶ, ಪ್ರಸಾದ ಇನ್ನಿತರ ಸೇವೆಗಳಿಗೆ ಅವಕಾಶ ಇರಲಿಲ್ಲ. ಇದೀಗ ಜುಲೈ 25ರಿಂದ ಎಲ್ಲ ರೀತಿಯ ಸೇವೆಗಳಿಗೂ ಅನುಮತಿ ನೀಡಿ ರಾಜ್ಯ ಸರಕಾರ ಆದೇಶ ಮಾಡಿದೆ.

ಮಂಗಳೂರು, ಜುಲೈ 24: ಕೋವಿಡ್ ಎರಡನೇ ಅಲೆಯ ಬಳಿಕ ಈಗಾಗ್ಲೇ ದೇವಸ್ಥಾನ, ಚರ್ಚ್ ಸೇರಿ ಧಾರ್ಮಿಕ ಕೇಂದ್ರಗಳಿಗೆ ತೆರಳಲು ಅನುಮತಿ ನೀಡಲಾಗಿತ್ತು. ಆದರೆ, ದೇವರ ದರ್ಶನಕ್ಕೆ ಮಾತ್ರ ಅವಕಾಶ, ಪ್ರಸಾದ ಇನ್ನಿತರ ಸೇವೆಗಳಿಗೆ ಅವಕಾಶ ಇರಲಿಲ್ಲ. ಇದೀಗ ಜುಲೈ 25ರಿಂದ ಎಲ್ಲ ರೀತಿಯ ಸೇವೆಗಳಿಗೂ ಅನುಮತಿ ನೀಡಿ ರಾಜ್ಯ ಸರಕಾರ ಆದೇಶ ಮಾಡಿದೆ.

ಈ ಬಗ್ಗೆ ಇಂದು ಧಾರ್ಮಿಕ ದತ್ತಿ ಇಲಾಖೆಯಿಂದ ಅಧಿಕೃತ ಆದೇಶ ಮಾಡಲಾಗಿದೆ. ಆದರೆ, ಮೆರವಣಿಗೆ, ಉತ್ಸವ ನಡೆಸಲು ಅವಕಾಶ ಇರುವುದಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಕೋವಿಡ್ ನಿಯಮಗಳನ್ನು ಅನುಸರಿಸಿ ಸೇವೆ, ದರ್ಶನಕ್ಕೆ ಅನುಮತಿ ನೀಡಲಾಗಿದೆ. ಆಯಾ ದೇವಸ್ಥಾನ, ಚರ್ಚ್, ಮಸೀದಿ ಆಡಳಿತಗಳು ಭಕ್ತರ ದಟ್ಟಣೆ ಆಗದಂತೆ ಮತ್ತು ಕೋವಿಡ್ ನಿಯಮಗಳನ್ನು ಅನುಸರಿಸುವಂತೆ ನೋಡಿಕೊಳ್ಳಬೇಕಾಗಿದೆ.

ಇದೇ ವೇಳೆ, ಅಮ್ಯೂಸ್ ಮೆಂಟ್ ಪಾರ್ಕ್ ಇನ್ನಿತರ ಅದಕ್ಕೆ ಸಂಬಂಧಿತ ಚಟುವಟಿಕೆಗಳಿಗೂ ಅವಕಾಶ ನೀಡಲಾಗಿದೆ. ಆದರೆ ವಾಟರ್ ಸ್ಪೋರ್ಟ್ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿಲ್ಲ. ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಮತ್ತು ಮುಜರಾಯಿ ಖಾತೆಯನ್ನೂ ಹೊಂದಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಪ್ರಸಾದ ಇನ್ನಿತರ ಸೇವೆಗಳಿಗೆ ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

The state government, which had allowed devotees to visit temples, mosques, churches and other centres of worship and pay obeisance after the unlocking of rules relating to covid second wave, had continued to ban offering of services. distribution of Prasadam etc inside these centres. Now the state government has lifted the restriction.