ಬ್ರೇಕಿಂಗ್ ನ್ಯೂಸ್
22-07-21 04:37 pm Headline Karnataka News Network ಕರ್ನಾಟಕ
ತುಮಕೂರು, ಜುಲೈ 22: ಮುಖ್ಯಮಂತ್ರಿ ಬದಲಾವಣೆ ಕುರಿತು ಹೈಕಮಾಂಡ್ ಪದೇ ಪದೇ ಹೇಳಿಕೆ ಕೊಟ್ಟಿದ್ದಾರೆ. ಇದರಿಂದ ರಾಜ್ಯದ ಆಡಳಿತ ಯಂತ್ರ ಕುಸಿಯುತ್ತದೆ. ಯಾರೋ ಕಾಣದ ಕೈಗಳ ಕೈವಾಡದಿಂದ ಇದೆಲ್ಲ ನಡೆಯುತ್ತಿದೆ ಎಂದು ಲಿಂಗಾಯತ ಮಠಗಳ ಸ್ವಾಮೀಜಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಗುಬ್ಬಿಯ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಲಿಂಗಾಯತ ಸ್ವಾಮೀಜಿಗಳ ಸಭೆಯ ಬಳಿಕ ಬೆಟ್ಟದಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ ಈ ಹೇಳಿಕೆ ನೀಡಿದ್ದಾರೆ. ಇಡೀ ನಾಡಿನ ಸಮಸ್ತ ಜನತೆ ಯಡಿಯೂರಪ್ಪ ನೇತೃತ್ವ ಬಯಸುತ್ತಿದೆ, ನಾವು ಕೂಡ ಅದನ್ನೇ ಬಯಸುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಉನ್ನತ ಅಧಿಕಾರ ಹಿಡಿದವರ ಮಕ್ಕಳು ಮತ್ತು ಕುಟುಂಬ ಸೇವೆ ಮಾಡಲು ರಾಜಕೀಯ ಹೊರತುಪಡಿಸಿ ಬೇರೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಇದು ಮಹತ್ವದ ವಿಚಾರವಾಗಿದ್ದು ರಾಜಕಾರಣಿಗಳ ಮಕ್ಕಳಿಗೆ ಬಹಳ ಮುಖ್ಯವಾಗುತ್ತದೆ. ದೇಶದ ಜನ, ರಾಜ್ಯದ ಜನ ಗಮನಿಸುತ್ತಿರುತ್ತಾರೆ. ಮಕ್ಕಳು ಕುಟುಂಬದವರು ಅಧಿಕಾರದಲ್ಲಿದ್ದವರ ಹತ್ರಕ್ಕೆ ಹೋಗ್ಬಾರ್ದು. ಮಕ್ಕಳು ತಮಗೆ ತಾವೇ ಸ್ವಯಂ ಪ್ರತಿಬಂಧನೆ ಹಾಕಿಕೊಳ್ಳಬೇಕು ಎನ್ನುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಸರೆತ್ತದೆ ರಾಜಕೀಯ ಮತ್ತು ಮಕ್ಕಳ ಹಸ್ತಕ್ಷೇಪದ ಬಗ್ಗೆ ಮಾತನಾಡಿದ್ದಾರೆ.
ಅಧಿಕಾರದಲ್ಲಿದ್ದವರ ಮಕ್ಕಳನ್ನ ಬೇರೆಯವರು ಎದುರುಗಡೆ ಹೊಗಳಬಹುದು. ಆದರೆ ಇಡೀ ದೇಶದ ಜನ 90 ಭಾಗದ ಜನ ಆಡಳಿಯ ಯಂತ್ರದ ವ್ಯವಸ್ಥೆಯನ್ನ ಗಮನಿಸ್ತಿರ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಸಿಎಂ ಪುತ್ರ ವಿಜಯೇಂದ್ರ ಆಡಳಿತ ಯಂತ್ರದಿಂದ ದೂರ ಇರಬೇಕು ಎಂದು ಚಂದ್ರಶೇಖರ ಸ್ವಾಮಿಜಿ ಹೇಳಿಕೆ ನೀಡಿದ್ದಾರೆ.
ಹೈಕಮಾಂಡ್ ಯಾವ ತಪ್ಪುಗಳನ್ನ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಬದಲಾವಣೆ ಮಾಡುತ್ತಿದ್ಯೋ ಗೊತ್ತಿಲ್ಲ. ತಪ್ಪುಗಳಿದ್ದರೆ ಕ್ಷಮಿಸಿ, ಯಡಿಯೂರಪ್ಪನವರನ್ನು ಮುಂದುವರೆಸಬೇಕು ಎಂದು ಇದೇ ವೇಳೆ ದೊಡ್ಡಗುಣಿ ಮಠ ರೇವಣ ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಯಡಿಯೂರಪ್ಪ 60 ವರ್ಷಗಳಿಂದ ಬಿಜೆಪಿಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಜಾತಿ ಮತ ಪಂಥ ಬಿಟ್ಟು ಸರ್ವರಿಗೂ ಒಳಿತನ್ನು ಮಾಡಿದ್ದಾರೆ. ಮೊರಾರ್ಜಿ ದೇಸಾಯಿ 85 ವರ್ಷ ವಯಸ್ಸಿನಲ್ಲಿ ಪ್ರಧಾನಿಯಾಗಿದ್ದರು. ಯಡಿಯೂರಪ್ಪನರಿಗೆ ಅಷ್ಟೇನು ವಯಸ್ಸಾಗಿಲ್ಲ. ಯಾವ ಜಾತಿ ಎನ್ನದೇ ಪ್ರತಿ ಮಠಮಾನ್ಯ, ಧರ್ಮಪೀಠಗಳಿಗೆ ಅನುದಾನ ಕೊಟ್ಟಿದ್ದಾರೆ. ಅಂಥವರನ್ನು ಬದಲಾಯಿಸಬಾರದು ಎಂದು ಹೇಳಿದರು.
Karnataka CM Yediyurappa hints at stepping down after July 26 Chandrashekar Swamiji makes some shocking statements.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm