ಬ್ರೇಕಿಂಗ್ ನ್ಯೂಸ್
02-07-21 04:44 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 2: ದಕ್ಷಿಣ ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಭಾರೀ ಶಬ್ದ ಕೇಳಿಬಂದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಏನೋ ದೊಡ್ಡ ಕಟ್ಟಡ ಕುಸಿದು ಬಿದ್ದ ರೀತಿ ಅಥವಾ ಏನೋ ಸ್ಫೋಟ ಆಗಿರುವ ರೀತಿ ಐದು ಸೆಕೆಂಡು ಕಾಲ ಶಬ್ದ ಕೇಳಿಸಿದ್ದು, ಈ ಬಗ್ಗೆ ಜನರು ಆತಂಕಗೊಂಡಿದ್ದರೂ ಜಿಲ್ಲಾಡಳಿತದಿಂದ ಯಾವುದೇ ಸ್ಪಷ್ಟನೆ ನೀಡಲಾಗಿಲ್ಲ.
ಅಪಾರ್ಟ್ಮೆಂಟ್ ಒಳಗಿದ್ದವರು, ಹೊರಗೆ ಅಂಗಡಿ ಇನ್ನಿತರ ವಾಣಿಜ್ಯ ಸಂಕೀರ್ಣದಲ್ಲಿ ಇದ್ದವರು ವಿಚಿತ್ರ ರೀತಿಯ ಸದ್ದನ್ನು ಕೇಳಿದ್ದಾರೆ. ಏನೋ ಶಬ್ದ ಕೇಳಿದ್ದು, ಭೂಕಂಪ ಆಗಿದೆಯೋ ಎನ್ನುವಂತೆ ಭಯ ಆಗಿದ್ದಾಗಿ ಜನರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಎಚ್ಎಎಲ್ ಅಧಿಕಾರಿಗಳಲ್ಲಿ ಕೇಳಿದರೆ, ನಮ್ಮಲ್ಲಿ ಎಂದಿನಂತೆ ವಿಮಾನಗಳ ಪರೀಕ್ಷೆಗಳು ನಡೆಯುತ್ತಿವೆ. ಅದು ಬಿಟ್ಟರೆ ವಿಶೇಷ ಶಬ್ದವೇನೂ ನಮ್ಮಲ್ಲಿ ಬಂದಿಲ್ಲ ಎಂದಿದ್ದಾರೆ.
ಇದೇ ವೇಳೆ, ಇದು ಭೂಕಂಪದಿಂದ ಆಗಿರುವ ಶಬ್ದ ಅಲ್ಲ ಎಂದು ವಿಪತ್ತು ನಿರ್ವಹಣಾ ಪಡೆ ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಇದೇ ರೀತಿ ಶಬ್ದ ಕೇಳಿಬಂದಿತ್ತು. ಆನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ರಕ್ಷಣಾ ಇಲಾಖೆಯ ಎಚ್ಎಎಲ್ ಅಧಿಕಾರಿಗಳು, ಅದು ಸೂಪರ್ ಸಾನಿಕ್ ವಿಮಾನದಿಂದ ಆಗಿರುವ ಶಬ್ದ ಎಂದು ಹೇಳಿದ್ದರು.
ಇದೀಗ ಒಂದು ವರ್ಷದ ಬಳಿಕ ಅದೇ ಸಮಯದಲ್ಲಿ ಅದೇ ರೀತಿಯ ವಿಚಿತ್ರ ಶಬ್ದ ಕೇಳಿಬಂದಿದ್ದು, ಜಯನಗರ, ಕುಮಾರಸ್ವಾಮಿ ಲೇಔಟ್, ಮಡಿವಾಳ, ಪರಪ್ಪನ ಅಗ್ರಹಾರ, ಆನೇಕಲ್, ಮಾಗಡಿ ರಸ್ತೆ, ಬಸವೇಶ್ವರ ನಗರ, ಚಂದ್ರಾ ಲೇಔಟ್ ಹೀಗೆ ಬೆಂಗಳೂರಿನ ಹಲವೆಡೆ ಜನರು ಶಬ್ದ ಕೇಳಿದ್ದಾಗಿ ಹೇಳಿಕೊಂಡಿದ್ದಾರೆ. ಅಧಿಕಾರಿಗಳು ಯಾವುದೇ ರೀತಿಯ ದೃಢೀಕರಣ ನೀಡದೇ ಇರುವ ಹಿನ್ನೆಲೆಯಲ್ಲಿ ವಿಚಿತ್ರ ಶಬ್ದ ಬಂದಿದ್ದರ ಬಗ್ಗೆ ಜನರಲ್ಲಿ ಭಾರೀ ಕುತೂಹಲ ಎದ್ದಿದೆ.
Boom Sound 🤔
— MALIK K (@MALIK_K_IYC) May 20, 2020
Anyone is aware what happened in #Bangalore #sonicboom
ಭಯಾನಕ ಶಬ್ಧ !!! ಏನದು......? pic.twitter.com/LtkMswCkZA
A loud sound was heard in South Bengaluru on Friday afternoon, bringing back memories of the sonic boom of last year. Hindustan Aeronautics Ltd (HAL) has said that there was no unusual activity on its part that may have caused the bang.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm