ಬ್ರೇಕಿಂಗ್ ನ್ಯೂಸ್
24-06-21 03:19 pm Mangalore Correspondent ಕರ್ನಾಟಕ
ಮಂಗಳೂರು, ಜೂನ್ 24: ಎಂಆರ್ ಪಿಎಲ್ ಕಂಪೆನಿ ಸ್ಥಳೀಯ ತುಳುನಾಡಿನ ಜನರಿಗೆ ಉದ್ಯೋಗ ನೀಡದೆ, ವಂಚಿಸುತ್ತಿದೆ. ತುಳುನಾಡಿನ ಮಣ್ಣು ಪಡೆದು 2800 ಎಕ್ರೆ ಪ್ರದೇಶದಲ್ಲಿ ಹರಡಿಕೊಂಡಿರುವ ಎಂಆರ್ ಪಿಎಲ್ ಈ ಭಾಗದ ಜನರಿಗೆ ಉದ್ಯೋಗ ನೀಡದೆ, ಉತ್ತರ ಭಾರತೀಯರನ್ನು ಕರೆದು ಕೆಲಸ ನೀಡುತ್ತಿರುವುದು ಉಂಡ ಮನೆಗೆ ದ್ರೋಹ ಬಗೆದಂತೆ. ಈ ವಿಚಾರದಲ್ಲಿ ತುಳುನಾಡಿನ ಯುವಕರೊಂದಿಗೆ ಜೆಡಿಎಸ್ ಸದಾ ನಿಲ್ಲಲಿದೆ. ಈ ಹೋರಾಟ ಇನ್ನಷ್ಟು ತೀವ್ರವಾಗಿ ಮುಂದುವರಿಯಲಿದೆ ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಯುವ ಘಟಕದ ವತಿಯಿಂದ ಸಂಸದ ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ಸುರತ್ಕಲ್ ಎಂಆರ್ ಪಿಎಲ್ ಗೇಟ್ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿ, ಕಂಪನಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಅವರು, ಎಂಆರ್ ಪಿಎಲ್ ಕಂಪನಿಯಲ್ಲಿ ತುಳುನಾಡಿನ ಯುವಕರಿಗೆ ಉದ್ಯೋಗ ನೀಡಬೇಕು ಎಂದು ಈ ಹಿಂದೆಯೇ ನಾನು ಟ್ವೀಟ್ ಮೂಲಕ ಆಗ್ರಹಿಸಿದ್ದೆ. ಆಗ ಈ ಭಾಗದ ಜನಪತ್ರಿನಿಧಿಗಳು ಶೀಘ್ರವೇ ಸಿಹಿ ಸುದ್ದಿ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಇತ್ತೀಚೆಗೆ 230 ಮಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇವಲ 4 ಮಂದಿಯನ್ನು ಮಾತ್ರ ಪರಿಗಣಿಸಲಾಗಿದೆ. ಈ ಮೂಲಕ ಸ್ಥಳೀಯರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಜೆಡಿಎಸ್ ತುಳುನಾಡಿನ ಯುವಕರ ಜೊತೆ ಇರುವುದನ್ನು ದೃಢೀಕರಿಸುವ ನಿಟ್ಟಿನಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ. ಯಾವುದೇ ರಾಜಕೀಯ ಬಣ್ಣ ಕಟ್ಟುವುದಕ್ಕಾಗಿ ಭಾಗವಹಿಸಿಲ್ಲ. ನಮ್ಮಿಂದ ಭೂಮಿ ಮಾತ್ರ ಪಡೆದು ನಮ್ಮ ತುಳುನಾಡಿನ ಭಾಗದ ಜನರಿಗೆ ಉದ್ಯೋಗ ಸೃಷ್ಟಿಸದೆ ಹೋದರೆ ಏನು ಪ್ರಯೋಜನ? ಜಮೀನು ಪಡೆದುಕೊಂಡವರಿಗೆ ಆರ್ಥಿಕವಾಗಿ ಶಕ್ತಿ ತುಂಬಿಸುವ ಕೆಲಸ ಬೃಹತ್ ಕಂಪೆನಿಗಳು ಮಾಡಬೇಕಾಗಿದೆ. ಈ ವಿಚಾರದಲ್ಲಿ ಸಂಸತ್ತಿನಲ್ಲಿ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿ ತುಳುನಾಡಿನ ಯುವಕರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಎರಡು ಮೂರು ವಾರದ ಒಳಗೆ ನ್ಯಾಯ ಒದಗಿಸಲು ಕಂಪೆನಿ ವಿಫಲವಾದಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಪ್ರಜ್ವಲ್ ರೇವಣ್ಣ ಹೇಳಿದರು.
ಇದೇ ವೇಳೆ ಮಾತನಾಡಿದ ದ.ಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ, ತುಳುನಾಡಿನ ಯುವಕರಿಗೆ ಉದ್ಯೋಗ ಲಭಿಸಬೇಕು ಎನ್ನುವ ಹೋರಾಟದಲ್ಲಿ ಜಿಲ್ಲಾ ಯುವ ಜೆಡಿಎಸ್ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಸಂಸದ ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ನೀಡಿದ್ದೇವೆ. ತುಳುನಾಡಿನ ಯುವಕರಿಗೆ ನ್ಯಾಯ ದೊರೆಯದೇ ಹೋದಲ್ಲಿ ಬೃಹತ್ ಮಟ್ಟದ ಹೋರಾಟಕ್ಕೆ ಸಿದ್ದ ಎಂದರು.
ದ.ಕ. ಜಿಲ್ಲೆಯ ಜನತಾದಳ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಕುಂಞ, ಪಕ್ಷದ ಹಿರಿಯ ಮುಖಂಡರಾದ ಎಂ.ಬಿ. ಸದಾಶಿವ ಮತ್ತು ನಾಯಕರಾದ ಸುಶೀಲ್ ನರೊನ್ಹ , ರತ್ನಾಕರ ಸುವರ್ಣ , ವಸಂತ್ ಪೂಜಾರಿ, ಪುಷ್ಪರಾಜನ್ ಎನ್ ಪಿ ,ಅಝೀಝ್ ಕುದ್ರೋಳಿ , ಸುಮತಿ ಹೆಗ್ಡೆ , ನಾಸೀರ್ ಯಾದ್ಗಾರ್, ಯುವ ನಾಯಕರುಗಳಾದ ರತೀಶ್ ಕರ್ಕೇರ, ಹಿತೇಶ್ ರೈ, ಫೈಝಲ್ ರೆಹಮಾನ್, ಸತ್ಯನಾರಾಯಣ್ ಫೈಝಲ್ ಮೊಹಮ್ಮದ್, ಸತ್ತಾರ್ ಬಂದರ್, ಸವಾಝ್ ಬಂಟ್ವಾಳ, ಪ್ರದೀಪ್ ಪಾಲ್ಗೊಂಡಿದ್ದರು.
JD(S) leader and Hassan MP Prajwal Revanna on Wednesday, June 23 submitted a memorandum urging companies to provide employment opportunities to the local youth of Tulu Nadu.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 08:31 pm
Mangalore Correspondent
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
SIT, Sujata Bhat, Dharmasthala Case: ಕೇಸ್ ಹಿಂ...
28-08-25 11:27 am
Pastor John Shamine, Madan Bugadi, IHRACSJC:...
27-08-25 11:02 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm