ಬ್ರೇಕಿಂಗ್ ನ್ಯೂಸ್
18-06-21 04:27 pm Headline Karnataka News Network ಕರ್ನಾಟಕ
ಬೆಂಗಳೂರು, ಜೂನ್ 18: ಭಿನ್ನಮತ ಶಮನಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ರಾಜ್ಯದಲ್ಲಿ ಮತ್ತೊಂದು ರೀತಿಯ ಪರಿಣಾಮಕ್ಕೆ ಕಾರಣವಾಗಿದೆ. ರಾಜ್ಯ ಬಿಜೆಪಿಯಲ್ಲಿ ಎರಡು ಬಣ ಇದ್ದುದು ಮೂರಾಗಿ ಒಡೆದು ಹೋಗಿದೆ. ಸಿಎಂ ಯಡಿಯೂರಪ್ಪ ಪರ ಮತ್ತು ವಿರೋಧಿ ಗುಂಪಿನ ನಡುವೆ ತಟಸ್ಥರು ಇನ್ನೊಂದು ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಅತ್ತ ಅರುಣ್ ಸಿಂಗ್ ಮೂರನೇ ದಿನವಾದ ಇಂದು ಪಕ್ಷದ ಕೋರ್ ಕಮಿಟಿ ಸಭೆ ನಡೆಸಿ ದೆಹಲಿ ಹತ್ತುವ ತಯಾರಿಯಲ್ಲಿದ್ದರೆ, ಇತ್ತ ರಾಜ್ಯ ಸರಕಾರದ ಸ್ಥಿತಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ.
ನಾಯಕತ್ವ ಬದಲಾವಣೆ ಮಾಡಲೇಬೇಕೆಂದು ಪಟ್ಟು ಹಿಡಿದಿರುವ ಸಚಿವ ಸಿ.ಪಿ.ಯೋಗೀಶ್ವರ್, ಶಾಸಕ ಅರವಿಂದ ಬೆಲ್ಲದ, ಬಸನಗೌಡ ಯತ್ನಾಳ್ ಗುಂಪಿನ ಜೊತೆಗೆ ಹಿರಿಯ ಶಾಸಕ ಎಚ್.ವಿಶ್ವನಾಥ್ ಸೇರಿಕೊಂಡಿದ್ದಾರೆ. ಇತರ ಮೂವರ ಮನಸ್ಸಿನಲ್ಲಿರುವುದನ್ನು ಎಚ್.ವಿಶ್ವನಾಥ್ ಮಾಧ್ಯಮದ ಮುಂದೆ ಬಿಚ್ಚು ಮನಸ್ಸಿನಲ್ಲಿ ಹೇಳಿಕೊಂಡು ತಿರುಗುತ್ತಿದ್ದಾರೆ. ಈ ಹಿಂದೆಯೂ ಮಕ್ಕಳ ಕಾರಣದಿಂದಾಗಿ ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಈಗ ಮತ್ತೆ ತಮ್ಮ ಮಕ್ಕಳಿಂದಾಗಿಯೇ ಜೈಲಿಗೆ ಹೋಗುವ ಪರಿಸ್ಥಿತಿ ಬರಬಹುದು ಎನ್ನುವ ಮೂಲಕ ವ್ಯಂಗ್ಯ ಮಾತಿನಿಂದ ತಿವಿದಿದ್ದಾರೆ. ಅಲ್ಲದೆ, ತಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದವರ ಬಗ್ಗೆ, ನಾವು 17 ಮಂದಿಯ ಕಾರಣದಿಂದಾಗಿ ನೀವು ಅಧಿಕಾರಕ್ಕೆ ಬಂದಿದ್ದೀರಿ, ನಮ್ಮ ತ್ಯಾಗ ಮರೆಯಬೇಡಿ ಎಂದು ಕುಟುಕಿದ್ದಾರೆ.
ಇದೇ ವೇಳೆ, ಬಿ.ಎಸ್.ಯಡಿಯೂರಪ್ಪ ಆಪ್ತರ ಗುಂಪು ಉಸ್ತುವಾರಿ ಅರುಣ್ ಸಿಂಗ್ ಮಾತನ್ನೂ ಮೀರಿ ಬಹಿರಂಗವಾಗೇ ತೊಡೆ ತಟ್ಟಿದೆ. ಯೋಗೀಶ್ವರ್ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎನ್ನುವ ಬೇಡಿಕೆಯೊಂದಿಗೆ ಯಡಿಯೂರಪ್ಪ ಅವರನ್ನೇ ಎರಡು ವರ್ಷ ಮುಖ್ಯಮಂತ್ರಿಯಾಗಿರಲು ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ನಾಯಕತ್ವ ಬದಲಿಸಬಾರದು ಎಂದು ಪಟ್ಟು ಹಿಡಿಯುವ ರೀತಿ ಬೇಡಿಕೆ ಮುಂದಿಟ್ಟಿದೆ.
ಇವೆಲ್ಲದರ ನಡುವೆ ತಟಸ್ಥ ಗುಂಪು ಹೈಕಮಾಂಡ್ ಪರವಾಗಿ ನಿಂತಿದೆ. ದಿನದಿಂದ ದಿನಕ್ಕೆ ತಟಸ್ಥರ ಗುಂಪು ಪ್ರಬಲವಾಗುತ್ತಿದ್ದು, ನಾವು ಪಕ್ಷದ ನಿರ್ಧಾರಕ್ಕೆ ಬದ್ಧ. ನಾಯಕತ್ವ ಬದಲಾವಣೆ ಇರಲಿ, ಇಲ್ಲದಿರಲಿ. ಏನೇ ಸೂಚನೆ ಕೊಟ್ಟರೂ ಪಾಲನೆ ಮಾಡುತ್ತೇವೆ ಎನ್ನುವ ನೆಲೆಯಲ್ಲಿ ಒಂದಾಗಿದ್ದಾರೆ. ಈ ಗುಂಪಿನಲ್ಲಿ ಹೆಚ್ಚಿನವರು ಪಕ್ಷದ ನಿಷ್ಠಾವಂತರೆನ್ನಿಸಿಕೊಂಡ ಆರೆಸ್ಸೆಸ್ ಹಿನ್ನೆಲೆ ಇರುವ ಶಾಸಕರೇ ಹೆಚ್ಚಿದ್ದಾರೆ. ಸಚಿವರು ಕೂಡ ಇದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಶ್ರೀರಾಮುಲು, ರಾಜ್ಯ ಸರಕಾರದ ಮುಖ್ಯ ಸಚೇತಕ ಸುನಿಲ್ ಕುಮಾರ್ ಮತ್ತಿತರರು ಈ ಗುಂಪಿನಲ್ಲಿ ಮುಂಚೂಣಿಯಲ್ಲಿದ್ದಾರೆ.
ಆದರೆ, ಬೆಂಗಳೂರು ಭಾಗದ ಸಚಿವರು, ಶಾಸಕರು ಯಾವುದೇ ವಿಚಾರದಲ್ಲಿಯೂ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡದೇ ನಿಗೂಢ ನಡೆ ಕಾಯ್ದುಕೊಂಡಿದ್ದಾರೆ. ಡಿಸಿಎಂ ಅಶ್ವತ್ಥ ನಾರಾಯಣ, ಆರ್.ಅಶೋಕ್ ಸೇರಿದಂತೆ ಕೆಲವು ಶಾಸಕರು ಅತ್ತ ದರಿ ಇತ್ತ ಪುಲಿ ಎನ್ನುವ ರೀತಿ ಕಾದು ನೋಡುವ ತಂತ್ರದಲ್ಲಿದ್ದಾರೆ. ಪರ-ವಿರೋಧ ಟೀಕೆಯೂ ಮಾಡಿಲ್ಲ. ಹೈಕಮಾಂಡಿನ ನಡೆಯ ಬಗ್ಗೆಯೂ ಹೇಳಿಕೆ ಕೊಟ್ಟಿಲ್ಲ. ಡಿಸಿಎಂ ಅಶ್ವತ್ಥ ಮತ್ತು ಆರ್. ಅಶೋಕ್ ಇಬ್ಬರು ಕೂಡ ಒಕ್ಕಲಿಗರಾಗಿದ್ದು, ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾರಣಕ್ಕೋ ಏನೋ, ಹೈಕಮಾಂಡ್ ಪರವೇ ಇದ್ದರೂ ಇಬ್ಬರ ಜಗಳದಲ್ಲಿ ಇನ್ನೊಬ್ಬರು ಸಿಎಂ ಆಗಿ ಬರುವುದು ಬೇಡ ಎನ್ನುವ ನೆಲೆಯಲ್ಲಿ ಯಡಿಯೂರಪ್ಪ ನಮ್ಮ ನಾಯಕರು, ಸರಕಾರ ಚೆನ್ನಾಗಿಯೇ ನಡೆಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತ ಸೈಲಂಟ್ ಆಗಿದ್ದಾರೆ.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿಯಾಗಿ ಸಾಕಷ್ಟು ಶಾಸಕರು ಅಸಮಾಧಾನ, ಸಿಟ್ಟು ತೋರಿಕೊಂಡಿದ್ದಾರೆ. ಕೆಲವರು ಸರಕಾರದ ವಿರುದ್ಧ ಮತ್ತು ಯಡಿಯೂರಪ್ಪ ಬಗ್ಗೆ ಅಸಹನೆಯನ್ನೂ ವ್ಯಕ್ತಪಡಿಸಿದ್ದಾರೆ. ಗುರುವಾರ ಅರುಣ್ ಸಿಂಗ್ ಅವರನ್ನು 50ಕ್ಕೂ ಹೆಚ್ಚು ಶಾಸಕರು ಭೇಟಿಯಾಗಿದ್ದು 20 ಮಂದಿಯಷ್ಟು ಯಡಿಯೂರಪ್ಪ ಪರವಾಗಿದ್ದರೆ, ಉಳಿದವರು ತಮ್ಮ ನೋವು, ಅಳಲು ತೋಡಿಕೊಂಡಿದ್ದೇ ಹೆಚ್ಚು ಅನ್ನುವ ಮಾತು ಕೇಳಿಬರುತ್ತಿದೆ. ಇವೆಲ್ಲದರ ವರದಿಯನ್ನು ಅರುಣ್ ಸಿಂಗ್ ದೆಹಲಿ ವರಿಷ್ಠರ ಗಮನಕ್ಕೆ ತರಲಿದ್ದು, ನಾಯಕತ್ವ ಬದಲಿಸುತ್ತಾರೋ ಕಾದು ನೋಡುವ ತಂತ್ರ ಅನುಸರಿಸುತ್ತಾರೋ ಸದ್ಯದಲ್ಲೇ ತಿಳಿದುಬರಲಿದೆ.
ವಲಸಿಗ ಶಾಸಕರೆಂದು ಗುರುತಿಸಿಕೊಂಡು ಸಚಿವರಾದವರಲ್ಲಿ ಹೆಚ್ಚಿನವರು ಯಡಿಯೂರಪ್ಪ ಪರವಾಗೇ ಬ್ಯಾಟಿಂಗ್ ನಡೆಸಿದ್ದಾರೆ. ತಮ್ಮ ಜೊತೆಗೇ ಬಂದಿದ್ದ ಎಚ್.ವಿಶ್ವನಾಥ್ ಮತ್ತು ಯೋಗೀಶ್ವರ್ ನಾಯಕತ್ವದ ವಿರುದ್ಧ ಹರಿಹಾಯುತ್ತಿದ್ದರೆ, ಆ ಬಗ್ಗೆ ತಟಸ್ಥ ಮನಸ್ಕರಾಗಿ ಯಡಿಯೂರಪ್ಪ ಜೊತೆ ನಿಂತಿರುವುದು ಕುತೂಹಲ ಮೂಡಿಸಿದೆ. ಹೀಗಾಗಿ ಭಿನ್ನರ ಧ್ವನಿಗೆ ಸದ್ಯಕ್ಕೆ ಬ್ರೇಕ್ ಬಿತ್ತು ಎಂದೆನಿಸಿದರೂ ಮೂರು ಬಾಗಿಲಿನಂತಾದ ಸರಕಾರದ ಸ್ಥಿತಿ ಸುಲಭದಲ್ಲಿ ಸರಿಹೋಗುವುದು ಕಷ್ಟ.
ಯಡಿಯೂರಪ್ಪ ನೆತ್ತಿ ಮುಂದೆ ತೂಗುಗತ್ತಿ
ಇದೇ ವೇಳೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಯಾರು ಭಿನ್ನ ನಡೆ ಇಟ್ಟಿದ್ದಾರೋ ಅವರನ್ನು ಕರೆದು ಮಾತನಾಡುವಂತೆ ಸೂಚನೆ ನೀಡಲಾಗಿದೆ ಎನ್ನಲಾಗುತ್ತಿದೆ. ಮುಂದೆಯೂ ಇದೇ ರೀತಿ ವರ್ತನೆಗಳು, ಟೀಕೆಗಳು, ದೂರುಗಳು ದೆಹಲಿ ಕಡೆಗೆ ಬಂದರೆ, ಅದಕ್ಕೆ ನೀವೇ ಹೊಣೆ ಎನ್ನುವ ಎಚ್ಚರಿಕೆಯನ್ನೂ ನೀಡಲಾಗಿದೆ. ಈಮೂಲಕ ತೂಗುಗತ್ತಿಯನ್ನು ಒಂದು ಬಣ ನೇರವಾಗಿ ದೆಹಲಿ ಹೈಕಮಾಂಡ್ ಅಂಗಳಕ್ಕೆ ದಾಟಿಸಲು ಯಶಸ್ವಿಯಾಗಿದೆ ಎನ್ನುವ ಮಾಹಿತಿಗಳಿವೆ.
BJP MLC AH Vishwanath on Friday claimed that most party leaders, who met BJP general secretary of Karnataka Arun Singh, feel that leadership in the state should be changed otherwise the party shall neither survive nor come back to power.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm