ಬ್ರೇಕಿಂಗ್ ನ್ಯೂಸ್
10-04-21 04:21 pm Mysore Correspondent ಕರ್ನಾಟಕ
ಮೈಸೂರು, ಎ.10 : ಸುಮಾರು 11 ವರ್ಷಗಳಿಂದ 11 ಸಾವಿರ ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯ ನಿರ್ಮಿಸಿ ಸಾರ್ವಜನಿಕರ ಓದಿನ ದಾಹಕ್ಕೆ ಉಚಿತವಾಗಿ ಸೇವೆ ನೀಡುತ್ತಿದ್ದ ಕನ್ನಡ ಪ್ರೇಮಿ ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದು, ಗ್ರಂಥಾಲಯ ಸಂಪೂರ್ಣ ಭಸ್ಮವಾಗಿದೆ.
ಕನ್ನಡ ಪ್ರೇಮಿ ಸೈಯದ್ ಇಸಾಕ್ ಕಳೆದ 11 ವರ್ಷಗಳಿಂದ ಮೈಸೂರಿನ ರಾಜೀವ್ ನಗರದಲ್ಲಿ ಸುಮಾರು 3 ಸಾವಿರ ಕನ್ನಡ ಪುಸ್ತಕಗಳು, 3 ಸಾವಿರ ಭಗವಗೀತೆ ಕೃತಿಗಳು, 3 ಸಾವಿರ ಕುರಾನ್ ಪ್ರತಿಗಳು, ಒಂದು ಸಾವಿರ ಉರ್ದು ಪುಸ್ತಕಗಳು, 1 ಸಾವಿರ ಬೈಬಲ್ ಕನ್ನಡ ಪ್ರತಿಗಳು ಹಾಗೂ ಇತರ 1 ಸಾವಿರ ಕನ್ನಡ ಪುಸ್ತಕಗಳನ್ನು ಇಟ್ಟುಕೊಂಡು ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಇಲ್ಲಿಗೆ ಬರುವ ಪುಸ್ತಕ ಪ್ರೇಮಿಗಳಿಗೆ ಉಚಿತವಾಗಿ ಗ್ರಂಥಾಲಯ ವ್ಯವಸ್ಥೆ ಒದಗಿಸಿದ್ದರು.
ರಾಜೀವ್ ನಗರದ ಮೂಡ ಪ್ರದೇಶಕ್ಕೆ ಸೇರಿದ್ದ ಈ ಸ್ಥಳದಲ್ಲಿ 2011 ರಲ್ಲಿ ಸೈಯ್ಯದ್ ಇಸಾಕ್ ಚಿಕ್ಕದೊಂದು ಗುಡಿಸಲು ಕಟ್ಟಿಕೊಂಡು ಗ್ರಂಥಾಲಯ ಆರಂಭಿಸಿದ್ದರು. ಬಳಿಕ ಶೀಟ್ ಹಾಕಿ ಮಳಿಗೆಯಾಗಿ ಮಾಡಿಕೊಂಡು 11 ಸಾವಿರ ಪುಸ್ತಕಗಳನ್ನು ಇಡುವುದರ ಜೊತೆಗೆ ನಿತ್ಯ 18 ದಿನ ಪತ್ರಿಕೆಗಳನ್ನು ತರಿಸುತ್ತಿದ್ದರು. ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ಪುಸ್ತಕ ಮತ್ತು ಪತ್ರಿಕೆಗಳನ್ನು ಸಾರ್ವಜನಿಕರಿಗೆ ಓದಲು ಉಚಿತವಾಗಿ ನೀಡುತ್ತಿದ್ದರು.

ಉರ್ದು ಭಾಷೆ ಮಾತನಾಡುವವರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಕನ್ನಡ ಹಾಗೂ ಜಾತ್ಯಾತೀತ ಮನೋಭಾವನೆ ಮೂಡಿಸುವ ಕೆಲಸವನ್ನು ಮಾಡುತ್ತಾ ಬಂದಿರುವೆ. ಗ್ರಂಥಾಲಯಕ್ಕೆ ಹಲವು ಭಾರೀ ಕಿಡಿಗೇಡಿಗಳು ತೊಂದರೆ ಕೊಟ್ಟಿದ್ದರು. ಶುಕ್ರವಾರ ಮುಂಜಾನೆ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟು 11 ಸಾವಿರ ಪುಸ್ತಕಗಳನ್ನು ಬೆಂಕಿಯಲ್ಲಿ ಸುಟ್ಟು ಹಾಕಿದ್ದಾರೆ. ಅದರಲ್ಲಿ ದಾನಿಗಳು ನೀಡಿದ ಅಮೂಲ್ಯ ಪುಸ್ತಕಗಳು ಸೇರಿವೆ ಎಂದು ಸೈಯದ್ ಇಸಾಕ್ ಭಾವುಕರಾಗಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಡಾ.ಪ್ರಕಾಶ್ ಗೌಡ ತಿಳಿಸಿದ್ದಾರೆ.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 07:34 pm
HK News Desk
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am