ಬ್ರೇಕಿಂಗ್ ನ್ಯೂಸ್
04-04-21 09:13 pm Headline Karnataka News Network ಕರ್ನಾಟಕ
ಮಂಗಳೂರು, ಏಪ್ರಿಲ್ 4 : ಬೆಂಗಳೂರು- ಮಂಗಳೂರು ನಡುವೆ ಏಪ್ರಿಲ್ 10ರಿಂದ ಪ್ರತಿದಿನ ಮೂರು ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ನಡೆಸಲಿದ್ದು ರಾಜಧಾನಿ ಮತ್ತು ಕರಾವಳಿ ನಡುವೆ ಸಂಚರಿಸುವ ಜನರಿಗೆ ಅನುಕೂಲವಾಗಲಿದೆ.
ಪ್ರತಿದಿನ ಮೂರು ಎಕ್ಸ್‌ಪ್ರೆಸ್ ರೈಲುಗಳು ಕುಣಿಗಲ್, ಶ್ರವಣಬೆಳಗೊಳ ಮತ್ತು ಹಾಸನ ಮಾರ್ಗವಾಗಿ ಬೆಂಗಳೂರಿನಿಂದ ಮಂಗಳೂರಿಗೆ ಸಂಚಾರ ನಡೆಸಲಿವೆ. ಹಾಸನ- ಶ್ರವಣಬೆಳಗೊಳ- ಚಿಕ್ಕಬಾಣಾವರ ನಡುವೆ ನೂತನ ರೈಲು ಮಾರ್ಗ ನಿರ್ಮಾಣವಾಗಿದ್ದು ಅದೀಗ ಉಪಯೋಗಕ್ಕೆ ಬರುತ್ತಿದೆ.
ಈ ಮೂರು ರೈಲುಗಳ ಜೊತೆ ಬೆಂಗಳೂರು - ಹಾಸನ ನಡುವೆ ಸಂಚರಿಸುತ್ತಿರುವ ಡೆಮೋ ರೈಲು ಜೊತೆಗೆ ಮತ್ತೆರಡು ರೈಲುಗಳ ಸಂಚಾರ ಎಂದಿನಂತೆ ಇರಲಿವೆ. ಸೊಲ್ಹಾಪುರ- ಹಾಸನ ನಡುವೆ ಪ್ರತಿದಿನ ಸಂಚರಿಸುವ ರೈಲು ಸಹ ಏಪ್ರಿಲ್ 10 ರಿಂದ ಆರಂಭವಾಗುತ್ತಿದೆ. ಕೊರೊನಾ ಲಾಕ್ಡೌನ್ ವರ್ಷದ ಬಳಿಕ ಮೊದಲ ಬಾರಿಗೆ ರೈಲು ಪೂರ್ಣ ಮಟ್ಟದಲ್ಲಿ ಸಂಚಾರಕ್ಕೆ ಬರಲಿದೆ.

ಬೆಂಗಳೂರು - ಮಂಗಳೂರು ನಡುವೆ ಶ್ರವಣಬೆಳಗೊಳ ಮಾರ್ಗವಾಗಿ ರಾತ್ರಿ 2 ರೈಲು, ಬೆಳಗ್ಗೆ 1 ರೈಲು ಸಂಚಾರ ನಡೆಸಲಿದೆ. ಬೆಂಗಳೂರು, ಮಂಗಳೂರು, ಹಾಸನ ಜಿಲ್ಲೆಗಳ ನಡುವೆ ಸಂಚರಿಸುವವರಿಗೆ ಸಹಾಯಕವಾಗಲಿದೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ (ಮೆಜೆಸ್ಟಿಕ್)ನಿಂದ ಸಂಜೆ 6.40ಕ್ಕೆ ಹೊರಡುವ ರೈಲು 9.30ಕ್ಕೆ ಹಾಸನವನ್ನು ತಲುಪಲಿದೆ. ಮರುದಿನ ಬೆಳಗ್ಗೆ 8.35ಕ್ಕೆ ಕಾರವಾರ ತಲುಪಲಿದೆ. ಈ ರೈಲು ಮಂಗಳೂರು ನಿಲ್ದಾಣಕ್ಕೆ ಹೋಗದೆ ಪಡೀಲ್ ರೈಲು ನಿಲ್ದಾಣದಿಂದ ಕಾರವಾರಕ್ಕೆ ಸಂಚರಿಸಲಿದೆ. ಕಾರವಾರದಿಂದ ಸಂಜೆ 6.30ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 7 ಗಂಟೆಗೆ ಬೆಂಗಳೂರಿನ ಮೆಜೆಸ್ಟಿಕ್ ತಲುಪಲಿದೆ.

ಬೆಂಗಳೂರು-ಹಾಸನ- ಮಂಗಳೂರು
ಪ್ರತಿದಿನ ರಾತ್ರಿ 9.30ಕ್ಕೆ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಹೊರಡುವ ರೈಲು 12.30ಕ್ಕೆ ಹಾಸನ ತಲುಪಲಿದೆ. ಮರುದಿನ ಬೆಳಗ್ಗೆ 7.50ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ. ಮಂಗಳೂರಿನಿಂದ ಬೆಳಗ್ಗೆ 8.50ಕ್ಕೆ ಹೊರಡುವ ರೈಲು ಸಂಜೆ 7.30ಕ್ಕೆ ಬೆಂಗಳೂರಿಗೆ ಬಂದು ತಲುಪಲಿದೆ.
ಯಶವಂತಪುರ- ಹಾಸನ-ಮಂಗಳೂರು ರೈಲು
ಬೆಂಗಳೂರು ನಗರದ ಯಶವಂತಪುರದಿಂದ ಪ್ರತಿದಿನ ಬೆಳಗ್ಗೆ 7.10ಕ್ಕೆ ಹೊರಡುವ ಎಕ್ಸ್‌ಪ್ರೆಸ್ ರೈಲು 10.05ಕ್ಕೆ ಹಾಸನ ತಲುಪಲಿದೆ. ಹಾಸನದಿಂದ ಹೊರಟ ರೈಲು ಸಂಜೆ 4.55ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ವಾರದಲ್ಲಿ 4 ದಿನ ಮಂಗಳೂರು ಜಂಕ್ಷನ್ ಮತ್ತು 3 ದಿನ ಕಾರವಾರದ ತನಕ ಈ ರೈಲು ಸಂಚಾರ ನಡೆಸಲಿದೆ.
ವಾರದ 7 ದಿನವೂ ಸಂಚಾರ
ಇಷ್ಟು ದಿನ ವಾರದಲ್ಲಿ 4 ದಿನ ಕುಣಿಗಲ್, ಶ್ರವಣಬೆಳಗೊಳ ಹಾಸನ ಮಾರ್ಗವಾಗಿ, ವಾರದಲ್ಲಿ ಮೂರು ದಿನ ಮಂಡ್ಯ, ಮೈಸೂರು, ಹಾಸನ ಮಾರ್ಗವಾಗಿ ಸಂಚಾರ ನಡೆಸುತ್ತಿದ್ದ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 10ರಿಂದ ವಾರದ 7 ದಿನವೂ ಬೆಂಗಳೂರಿನಿಂದ ಕುಣಿಗಲ್, ಶ್ರವಣಬೆಳಗೊಳ, ಹಾಸನ ಮಾರ್ಗವಾಗಿ ಮಂಗಳೂರು ಸೆಂಟ್ರಲ್‌ಗೆ ಸಂಚಾರ ನಡೆಸಲಿದೆ.
Three train services to start everyday from Mangalore to Bangalore from April 10th stated railway department
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
31-01-26 10:20 pm
HK News Desk
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm