ಬ್ರೇಕಿಂಗ್ ನ್ಯೂಸ್
06-03-21 10:23 am Headline Karnataka News Network ಕರ್ನಾಟಕ
ಬೆಂಗಳೂರು, ಮಾರ್ಚ್ 06: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಹೊರ ಬೀಳುತ್ತಿದ್ದಂತೆ ರಾಜ್ಯದ ಇತರೆ ಮಂತ್ರಿ ಮಹೋದಯರು ನಿದ್ದೆ ಗೆಟ್ಟಿದ್ದಾರೆ. ಕುಂಬಳಕಾಯಿ ಕಳ್ಳ ಎಂದ ಮಾತ್ರಕ್ಕೆ ಹೆಗಲು ಮುಟ್ಟಿ ನೋಡಿಕೊಂಡರಂತೆ. ರಾಜ್ಯದ ಮಂತ್ರಿಗಳ ಪರಿಸ್ಥಿತಿ ಹೀಗೆ ಆಗಿದೆ. ಸಿಡಿ ಸ್ಫೋಟದ ಬಳಿಕ ರಮೇಶ್ ಜಾರಕಿಹೊಳಿ ಅವರು ಅಜ್ಞಾತವಾಸಿಯಾಗಿದ್ದಾರೆ. ಇತ್ತ ಕೈ-ತೆನೆ ತೊರೆದು ಕಮಲ ಹಿಡಿದು ಸಚಿವರಾದವರು "ನಮ್ಮದು ಸಿಡಿ ಬರುತ್ತಾ?" ಅಂತ ನಿದ್ದೆ ಗೆಟ್ಟಿದ್ದಾರೆ.
ಅವರಲ್ಲಿಯೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಕೆಲ ಸಚಿವರು ನಮ್ಮ ಬಗ್ಗೆ ಯಾವುದೇ ಸಿಡಿ, ದಾಖಲೆಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಕದ ತಟ್ಟಿದ್ದಾರೆ. ಆ ಮಂತ್ರಿ ಮಹೋದಯರ ವಿವರ ಇಲ್ಲಿದೆ ನೋಡಿ.

ಜಾರಕಿಹೊಳಿ ಸಿಡಿ ಹೊರ ಬರುತ್ತಿದ್ದಂತೆ, ಇನ್ನೂ ಹಲವರ ಸಿಡಿ ಇದೆ. ಸೂಕ್ತ ಕಾಲದಲ್ಲಿ ಬಿಡುಗಡೆಯಾಗಲಿದೆ ಎಂಬ ಸುಳಿವನ್ನು "ಜಾರಕಿಹೊಳಿ ಸಿಡಿ' ಪ್ರಕರಣದ ದೂರುದಾರ ದಿನೇಶ್ ಕಲ್ಲಹಳ್ಳಿ ನೀಡಿದ್ದರು. ಅದೇ ಈ ಸಚಿವರ ಆತಂಕಕ್ಕೆ ಕಾರಣವಾಗಿರಬಹುದಾ? ಎಂಬ ಚರ್ಚೆಗಳು ನಡೆದಿವೆ. ಒಟ್ಟಾರೆ ಸಚಿವರ ನಡೆ ಕುತೂಹಲ ಮೂಡಿಸಿದೆ.
ಆರು ಸಚಿವರಿಂದ ನ್ಯಾಯಾಲಯಕ್ಕೆ ಅರ್ಜಿ:
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರ ಹೇಳಿಕೆ ಜೋರಾಗಿಯೇ ಯಡಿಯೂರಪ್ಪ ಮಂತ್ರಿಮಂಡಲವನ್ನು ತಲ್ಲಣಗೊಳಿಸಿದೆ. ಅದರಲ್ಲೂ ಜೆಡಿಎಸ್-ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದವರಂತೂ ನಿದ್ದೆ ಗೆಟ್ಟಿದ್ದಾರೆ ಎಂಬ ಮಾಹಿತಿಯಿದೆ. ಅವರು ಇದೀಗ ನ್ಯಾಯಾಲಯವೇ ನಮಗೆ ದಿಕ್ಕು ಎಂದು ಇಂಜೆಂಕ್ಷನ್ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರೆಲ್ಲರೂ ವಲಸೆ ಮಂತ್ರಿಗಳು ಎಂಬುದು ಗಮನಿಸಬೇಕಾದ ಅಂಶ.

ಎಲ್ಲರೂ ಮಿತ್ರ ಮಂಡಳಿ ಸದಸ್ಯರು:
ತಮ್ಮ ವಿರುದ್ಧ ಅವಹೇಳನಕಾರಿ ವರದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿರುವ ಎಲ್ಲ ಆರೂ ಜನ ಸಚಿವರು ಮಿತ್ರ ಮಂಡಳಿ ಸಚಿವರು ಎಂಬುದು ಗಮನಿಸಬೇಕಾದ ಅಂಶ. ಈ ಆರು ಸಚಿವರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನಾಳೆ (ಮಾ.06) ಅರ್ಜಿ ವಿಚಾರಣೆಗೆ ಬರಲಿದೆ. ತಮ್ಮ ಕುರಿತಾಗಿ ಯಾವುದೇ ಅವಹೇಳಕಾರಿ ವಿಚಾರ, ಸಿಡಿ ಅಥವಾ ದಾಖಲೆಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಆದೇಶ ಮಾಡುವಂತೆ ಕೋರಿದ್ದಾರೆ.

ಯಾರು ಆ ಆರು ಸಚಿವರು?
ಮುಂಬೈ ಫ್ರೆಂಡ್ಸ್ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಡಾ. ಕೆ. ಸುಧಾಕರ್, ಡಾ. ಕೆ.ಸಿ. ನಾರಾಯಣಗೌಡ ಹಾಗೂ ಭೈರತಿ ಬಸವರಾಜ್ ಅವರು ಕೋರ್ಟ್ ಮೊರೆ ಹೋಗಿದ್ದಾರೆ.
ಇದೀಗ ಈ ಆರು ಸಚಿವರಿಗೆ ಭೀತಿ ಹುಟ್ಟಿರುವುದು ಯಾಕೆ ಎಂಬ ಚರ್ಚೆ ರಾಜ್ಯ ರಾಜಕೀಯದಲ್ಲಿ ಚರ್ಚೆ ಶುರುವಾಗಿದೆ. ಇವರದ್ದು ಸಿಡಿ ಏನಾದ್ರು ಇದೆಯಾ ಎಂದು ಜನರು ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಈ ಆರೂ ಸಚಿವರ ನಡೆ ಅಚ್ಚರಿ ಮೂಡಿಸಿದೆ. ಈ ವಿಚಾರವನ್ನು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.

ಸಿಡಿ ಸ್ಫೋಟದಿಂದ ರಮೇಶ್ ಜಾರಕಿಹೊಳಿಯ ಅವರಷ್ಟೇ ಸಂಕಷ್ಟದಲ್ಲಿದ್ದಾರೆ ಎಂದೇ ಭಾವಿಸಲಾಗಿತ್ತು. ಇನ್ನೂ ಹಲವು ಸಿಡಿ ಸ್ಪೋಟಗೊಳ್ಳಲಿವೆ ಎಂಬ ಸ್ಫೋಟಕ ಹೇಳಿಕೆ ಹೊರ ಬೀಳುತ್ತಿದ್ದಂತೆ ಪ್ರಭಾವಿ ಸಚಿವರು ಸಾಲು ಗಟ್ಟಿ ನ್ಯಾಯಾಲಯದ ಮೊರೆ ಹೋಗಿರುವುದು ಕುತೂಹಲ ಮೂಡಿಸಿದೆ.
ಈ ಬೆಳವಣಿಗೆ ವಿರೋಧ ಪಕ್ಷಗಳು ಲೇವಡಿ ಮಾಡಲು ಅನುವು ಮಾಡಿಕೊಟ್ಟಂತಾಗಿದೆ. ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಇದೇನಿದು ಬೆಳವಣಿಗೆ ಎಂದು ಜನರೂ ಮಾತನಾಡಿಕೊಳ್ಳುವಂತಾಗಿದೆ. ಯಾಕೋ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತೆ ಒಂದರ ಮೇಲೊಂದರಂತೆ ಬೆಳವಣಿಗೆಗಳು ಆಗುತ್ತಿವೆ. ಇದು ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿದೆ.
After Ramesh Jarkiholi was forced to resign from Karnataka cabinet owing to a leaked video clip, 6 Karnataka ministers have moved a city civil seeking restraint on defamatory content.
30-01-26 10:37 pm
Bangalore Correspondent
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
31-01-26 03:38 pm
Mangalore Correspondent
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm