ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಪಾತ್ರವಿದೆ, ಕೇರಳದ ಮಹಿಳೆಯನ್ನು ಕೋರ್ಟಿಗೆ ಹಾಜರುಪಡಿಸಿಲ್ಲ ಯಾಕೆ? ಕುಮಾರಸ್ವಾಮಿ ಪ್ರಶ್ನೆ

03-11-26 01:01 pm       HK News Staffer   ಕರ್ನಾಟಕ

'ಸ್ಪಿಂಗ್ ಆಪರೇಷನ್' ಗದ್ದಲ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾತ್ರವಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಸುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು, ನ.3: 'ಸ್ಪಿಂಗ್ ಆಪರೇಷನ್' ಗದ್ದಲ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾತ್ರವಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಸುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು "ಪ್ರಜ್ವಲ್ ರೇವಣ್ಣ ಕಾರು ಚಾಲಕನಾಗಿದ್ದ ಕಾರ್ತಿಕ್ ಅಶ್ಲೀಲ ವಿಡಿಯೊಗಳನ್ನು ಹಂಚಿದ ಆರೋಪ ಹೊತ್ತಿದ್ದು ಈತನಿಗೂ ಡಿಕೆ ಶಿವಕುಮಾರ್ ಸೋದರರಿಗೂ ನೇರ ನಂಟಿದೆ. ಸೋದರರು ಕಾರ್ತಿಕ್ ನನ್ನು ಎರಡು ಬಾರಿ ತಮ್ಮ ಮನೆಗೆ ಕರೆಸಿಕೊಂಡು, ಅವನ ಬಳಿ ಇದ್ದ ಪೆನ್ ಡ್ರೈವ್ ಪಡೆದು ಇಡೀ ದೇಶಕ್ಕೆ ಹಂಚಿದರು. ಪ್ರಜ್ವಲ್ ರೇವಣ್ಣ ವಿಡಿಯೊಗಳು ಹೊರಕ್ಕೆ ಬರುವ ಮುನ್ನ 2023ರ ಆಗಸ್ಟ್ 5 ಮತ್ತು 6ರಂದು ಕಾರ್ತಿಕ್‌ನನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದರು. ಕಾರ್ತಿಕ್ ಜೊತೆ ದೂರವಾಣಿಯಲ್ಲಿ ಡಿ.ಕೆ. ಶಿವಕುಮಾರ್ ಎಷ್ಟು ಬಾರಿ ಮಾತನಾಡಿದ್ದಾರೆ ಎಂಬುದಕ್ಕೆ ಸಿಡಿಆರ್ ದಾಖಲೆ ನನ್ನ ಬಳಿ ಇದೆ ಎಂದು ಹೇಳಿದರು.

'ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಂಗ್ ವಿಡಿಯೊ ಹರಡಿದ ವ್ಯಕ್ತಿ ಜತೆಗೆ ನನಗೆ ಸಂಬಂಧವಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಪ್ರಜ್ವಲ್ ರೇವಣ್ಣ ಪೆನ್‌ ಡೈವ್ ಹಂಚಿದ ಕಾರ್ತಿಕ್ ಜತೆಗಿನ ನಂಟಿನ ಬಗ್ಗೆ ಡಿ.ಕೆ.ಶಿವಕುಮಾರ್ ಅವರು ಶಾಮೀಲಾಗಿರುವುದು ಸ್ಪಷ್ಟ. ಈ ವಿಷಯದಲ್ಲಿ ಡಿಕೆ ಶಿವಕುಮಾರ್ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ" ಎಂದರು. 

ಸಿದ್ದರಾಮಯ್ಯ ಅವರ ವಿರುದ್ಧ ನಡೆದಿರುವ ಸ್ಟಿಂಗ್ ಅಪರೇಷನ್ ಸಂದರ್ಭದಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದ ಕೇರಳದ ಮಳೆ, ಈಗ ಹೇಳಿಕೆ ಬದಲಿಸಿದ್ದಾರೆ ಎನ್ನುವ ಮಾಹಿತಿ ಇದೆ. ಹೇಳಿಕೆ ಬದಲಿಸಿದ್ದರೆ ಆಕೆಯನ್ನು ಕರೆತಂದು ನ್ಯಾಯಾಲಯಕ್ಕೆ ಏಕೆ ಹಾಜರುಪಡಿಸಿಲ್ಲ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಸ್ಟಿಂಗ್ ಅಪರೇಷನ್ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ತನಿಖೆಯ ವಿಚಾರಗಳನ್ನು ಬಹಿರಂಗ ಪಡಿಸಿರುವುದು ಸುಪ್ರೀಂ ಕೋರ್ಟ್ ಮಾರ್ಗಸೂಚಿಯ ಉಲ್ಲಂಘನೆ. ಆಮೂಲಕ ಪೊಲೀಸ್ ಆಯುಕ್ತರೇ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ. ಸರಕಾರಕ್ಕೆ ಹೇಗೆ ಬೇಕೋ ಆ ರೀತಿ ತನಿಖೆ ಮಾಡಿ ತೇಪೆ ಹಚ್ಚಲು ಪ್ರಯುತ್ನಿಸುತ್ತಿದ್ದಾರೆ. ಸರಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡುವ ಉದ್ದೇಶಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. 

ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಕೊಡಿಸಲು ಪೊಲೀಸರು ಕೇರಳದಲ್ಲಿ ಮಹಿಳೆಯೊಬ್ಬರನ್ನು ಕರೆಸಿ ಹೇಳಿಕೆ ಪಡೆದಿದ್ದಾರೆ. ಈ ಕಾರ್ಯಕ್ಕೆ ಮುಸ್ಲಿಂ ನಾಯಕರನ್ನೂ ಬಳಸಿದ್ದಾರೆ. ದೆಹಲಿಯಿಂದ ರಿತೇಶ್ ಪಾಂಡೆ ಎಂಬ ವ್ಯಕ್ತಿಯನ್ನು ಕರೆತಂದು ಸುಳ್ಳು ಹೇಳಿಕೆ ಪಡೆದು ಎಲ್ಲವೂ ಕುಮಾರಸ್ವಾಮಿಯೇ ಮಾಡಿಸಿದ್ದು ಎಂಬಂತೆ ಬಿಂಬಿಸುವ ತಂತ್ರ ಹೆಣೆಯಲಾಗಿದೆ. ಪಾಂಡೆ ಯಾರೆಂಬುದೇ ನನಗೆ ಗೊತ್ತಿಲ್ಲ, ಅತನನ್ನು ಬಂಧಿಸಿರುವುದು ಗಾಜಿಯಾಬಾದ್ ನಲ್ಲಿ, ನನ್ನ ಮನೆಯಿಂದ ಅಲ್ಲ ಎಂದರು.

"ಸಿಂಗ್ ಅಪರೇಷನ್ ಎನ್ನುವುದು ಕಟ್ಟುಕತೆ ಎಂದಾದರೆ ಪೊಲೀಸರು ಇನ್ನೂ ತನಿಖೆ ಯಾಕೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.