ಬ್ರೇಕಿಂಗ್ ನ್ಯೂಸ್
01-05-26 08:33 pm HK News Staffer ಕರ್ನಾಟಕ
ಬೆಂಗಳೂರು, ಮೇ 01: ಮಲ್ಲಿಕಾರ್ಜುನ ಖರ್ಗೆ ಅವರು ಬದಲಾವಣೆ ಇಲ್ಲ ಎಂದಿರುವಾಗ ಎಲ್ಲ ಫುಲ್ ಸ್ಟಾಪ್ ಅಂತ ಅರ್ಥ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಬದಲಾವಣೆ ಇಲ್ಲ ಎಂಬ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಖರ್ಗೆಯವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಅಪಾರವಾದ ಅನುಭವ ಇರುವವರು. ರಾಜ್ಯಕ್ಕೆ ಬದಲಾವಣೆ ಆಗೋದಾದ್ರೆ, ಅವರು ಬಂದರೆ ಅವರ ಅನುಭವದ ಮುಂದೆ ಮಾತಾಡೋಕೆ ಆಗಲ್ಲ. ಸದ್ಯಕ್ಕೆ ಸಿಎಂ ಇದ್ದಾರೆ, ಮತ್ತೆ ಬದಲಾವಣೆ ಮಾಡುವ ಪ್ರಶ್ನೆ ಈಗಂತೂ ಸದ್ಯಕ್ಕೆ ಇಲ್ಲ ಎಂದು ಖರ್ಗೆ ಹೇಳಿದ್ದಾರೆ ಎಂದು ತಿಳಿಸಿದರು.
ಇದನ್ನು ನಾನು ಸ್ವಾಗತ ಮಾಡುತ್ತೇನೆ. ಅವರು ಹೇಳಿದ ಮೇಲೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ವೇಣುಗೋಪಾಲ್, ಸುರ್ಜೆವಾಲ ಎಲ್ಲರೂ ಕುಳಿತು ಮಾತನಾಡಿ ಅಭಿಪ್ರಾಯ ಬಂದಿರುತ್ತೆ ಎಂಬುದು ನನ್ನ ಭಾವನೆ. ಅವರ ಮಾತಿಗೆ ಬಹಳ ಪ್ರಾಮುಖ್ಯತೆ ಇರುತ್ತದೆ.
ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯ ನಡುವೆಯೂ ಗೊಂದಲ ವಿಚಾರವಾಗಿ ಮಾತನಾಡಿ, ಬೇರೆ ಬೇರೆಯವರು ಹೇಳುತ್ತಾರೆ, ನಮ್ಮ ಅಭಿಪ್ರಾಯದಲ್ಲಿ ಖರ್ಗೆ ಅವರು ಸುಪ್ರೀಂ ಅಥಾರಿಟಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಹೈಕಮಾಂಡ್ ಅವರ ಬಾಯಿಂದ ಮಾತು ಬರುತ್ತದೆ ಎಂದರೆ ಅದನ್ನು ಒಪ್ಪಿಕೊಳ್ಳಬೇಕು. ಅಲ್ಲಿಗೆ ಅಧ್ಯಾಯ ಮುಗಿಯಿತು. ಹೆಚ್ಚು ವ್ಯಾಖ್ಯಾನ ಮಾಡುವುದರಲ್ಲಿ ಅರ್ಥ ಇಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಪಂಚರಾಜ್ಯದ ಸಮೀಕ್ಷೆ ವಿಚಾರವಾಗಿ ಮಾತನಾಡಿ, ಸಮೀಕ್ಷೆ ಒಂದೊಂದು ಬಾರಿ ಹೇಗಾಗುತ್ತೆ ಅಂತ ನೋಡಿದ್ದೇವೆ. ಗ್ರೌಂಡ್ ರಿಯಾಲಿಟಿಯನ್ನು ನೋಡಿದ್ದೇವೆ. ಕೇರಳದಲ್ಲಿ ನಮ್ಮ ಸರ್ಕಾರ ಬರುತ್ತದೆ ಅಂತ ಆಶಾವಾದಿಗಳಾಗಿದ್ದೇವೆ. ರಾಜ್ಯದ ಹಲವರು ಅಲ್ಲಿನ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ನಾವು ಬರುತ್ತೇವೆ ಎಂದು ವರದಿ ಇದೆ. ಬಂಗಾಳದಲ್ಲಿ ನಡೆದಿರೋ ಘಟನೆ ನೋಡಿದ್ರೆ, ಚುನಾವಣಾ ಆಯೋಗ ಯಾವ ರೀತಿ ಕೆಲಸ ಮಾಡಿದೆ ಎಂದು ನೋಡಿದ್ದೇವೆ. ಅಲ್ಲಿ ಹೋಗಿ ಬಂದ ಅಬ್ಸರ್ವರ್ಗಳನ್ನು ಮಾತಾಡಿಸಿದೆ. ಮೇಡಂ ಅವರಿಗೆ ಬರುವ ಅವಕಾಶ ಇದೆ ಎಂದಿದ್ದಾರೆ. ಕೆಲವು ಮಿಶ್ರ ಪ್ರತಿಕ್ರಿಯೆ ಇದೆ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಬರುತ್ತದೆ ಎಂದಿದ್ದಾರೆ. ಅಸ್ಸಾಂನಲ್ಲಿನ ಸಮೀಕ್ಷೆ ಬಿಜೆಪಿ ಬರುತ್ತದೆ ಎಂದಿದೆ ಎಂದು ತಿಳಿಸಿದರು.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm