ಬ್ರೇಕಿಂಗ್ ನ್ಯೂಸ್
02-02-26 08:14 pm HK News Desk ಕರ್ನಾಟಕ
ಮಂಜೇಶ್ವರ, ಫೆ.2 : ಆಸ್ತಿ ವಿಚಾರದಲ್ಲಿ ಸೋದರ ಸಂಬಂಧಿಯ ಜೊತೆಗೆ ಜಗಳ ಕಾದ ವ್ಯಕ್ತಿಯೊಬ್ಬ ತನ್ನ ಮಗಳನ್ನೇ ಕೊಲೆಗೈದ ಘಟನೆ ಕರ್ನಾಟಕ ಗಡಿಭಾಗ ತಲಪಾಡಿ ಬಳಿಯ ತುಮ್ಮಿನಾಡಿನಲ್ಲಿ ನಡೆದಿದೆ. ಇಬ್ಬರ ಜಗಳ ಬಿಡಿಸಲು ಹೋದ 16 ವರ್ಷದ ಮಗಳು ದುರಂತ ಬಲಿಯಾಗಿದ್ದಾಳೆ.
ಮಂಜೇಶ್ವರದ ತುಮ್ಮಿನಾಡು ನಿವಾಸಿ, ಪ್ಲಸ್ ಒನ್ ವಿದ್ಯಾರ್ಥಿನಿ ಜಮೀಲಾ(16) ಮೃತಪಟ್ಟ ದುರ್ದೈವಿ. ಉಮರ್ ಪಾಷ ಕೊಲೆಗೈದ ವ್ಯಕ್ತಿಯಾಗಿದ್ದು ಮಂಜೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಮರ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಪತ್ನಿಯ ಸೋದರಿಯ ಮನೆಯಲ್ಲಿ ವಾಸವಿದ್ದ. ಸೋಮವಾರ ಸಂಜೆ 5:30ರ ಹೊತ್ತಿಗೆ, ಉಮರ್ ಮತ್ತು ಆತನ ಬಾವ (ಪತ್ನಿಯ ಸೋದರಿಯ ಪತಿ) ಶೇಕುಂಞ ಎಂಬವರ ನಡುವೆ ಆಸ್ತಿ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಉಮರ್ ಹರಿತ ಆಯುಧದಿಂದ ಶೇಖುಞ್ಞ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ.

ಈ ವೇಳೆ ತನ್ನ ಮಾವನನ್ನು ರಕ್ಷಿಸಲು ಜಮೀಲಾ ಮಧ್ಯ ಪ್ರವೇಶಿಸಿದ್ದಾಳೆ. ಆದರೆ ಉಮರ್ ಕೈಯಲ್ಲಿದ್ದ ಹರಿತ ಆಯುಧದ ಪೆಟ್ಟು ಜುಮೀಲಾ ಕುತ್ತಿಗೆಯ ಭಾಗಕ್ಕೆ ಬಿದ್ದಿದೆ. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಶೇಖುಂಜ್ ಅವರಿಗೂ ಗಾಯಗಳಾಗಿವೆ.
ಮೃತ ಜಮೀಲಾ ಉಮರ್ ದಂಪತಿಯ ಏಕೈಕ ಪುತ್ರಿಯಾಗಿದ್ದಳು. ಈ ಹಿಂದೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಉಮರ್, ಇತ್ತೀಚೆಗೆ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳ ವ್ಯಸನಿಯಾಗಿದ್ದ ಎನ್ನಲಾಗಿದೆ. ಮಾದಕ ವಸ್ತುವಿನ ಅಮಲಿನಲ್ಲಿ ಕ್ರೂರ ಕೃತ್ಯ ನಡೆಸಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿದ್ದು ಆರೋಪಿ ಉಮರ್‌ನನ್ನು ವಶಕ್ಕೆ ಪಡೆದಿದ್ದಾರೆ.
A 16-year-old girl died after she was accidentally struck by her father during a violent clash over a property dispute in Manjeshwar near the Karnataka border. The father, who allegedly attacked his brother-in-law with a sharp weapon, has been taken into custody.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am