ಬ್ರೇಕಿಂಗ್ ನ್ಯೂಸ್
18-01-26 03:34 pm Bangalore Correspondent ಕರ್ನಾಟಕ
ಬೆಂಗಳೂರು, ಜ.18 : ರಾಜ್ಯದಲ್ಲಿ ನಡೆದಿರುವ 88 ಅಪರಾಧ ಪ್ರಕರಣಗಳಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿಯಾಗಿದೆ. ದರೋಡೆ, ಡಕಾಯಿತಿಗಳಲ್ಲಿ ಪೊಲೀಸರೇ ಆರೋಪಿಗಳಾಗುತ್ತಿರೋದು ನಿಮ್ಗೆ ನಾಚಿಕೆಯಾಗಲ್ವಾ.. ಮಹಾರಾಷ್ಟ್ರ ಪೊಲೀಸರು ಬಂದು ಡ್ರಗ್ಸ್ ಹಿಡೀತಾರೆ ಅಂದ್ರೆ ನೀವೇನು ಮಾಡ್ತಿದೀರಿ ಎಂದು ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕಿಡಿಕಾರಿದ್ದಾರೆ.
ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಇಲಾಖೆಯ ವೈಫಲ್ಯಗಳನ್ನು ಎತ್ತಿ ತೋರಿಸಿ ತರಾಟೆಗೆತ್ತಿಕೊಂಡರು.
ಇಂತಹ ಕೃತ್ಯಗಳು ಸರಕಾರ ಮತ್ತು ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತಂದಿವೆ. ಡಿವೈಎಸ್ಪಿ, ಎಸಿಪಿ, ಇನ್ಸ್ ಪೆಕ್ಟರ್, ಪಿಎಸ್ಐಗಳ ಗಮನಕ್ಕೆ ಬಾರದೆ ಯಾವುದೇ ಕೃತ್ಯಗಳು ನಡೆಯಲ್ಲ. ಪೊಲೀಸರು ಬದ್ಧತೆಯಿಂದ ಕೆಲಸ ಮಾಡಿದ್ರೆ ಹೀಗೆಲ್ಲ ಆಗುತ್ತಾ.. ಅಪರಾಧ ಕೃತ್ಯಗಳು ಘಟಿಸುವ ಮುನ್ನವೇ ಎಚ್ಚರ ವಹಿಸಬೇಕು. ಅದು ಪೊಲೀಸರ ಕೆಲಸ ಅಲ್ವೇನ್ರಿ ಎಂದು ಪ್ರಶ್ನೆ ಮಾಡಿದರು.



'ಡ್ರಗ್ಸ್ ಫ್ಯಾಕ್ಟರಿ' ರಾಜ್ಯ ಪೊಲೀಸರಿಗೇಕೆ ಗೊತ್ತಾಗಲ್ಲ
'ಡ್ರಗ್ಸ್ ದಂಧೆ ಮಟ್ಟ ಹಾಕುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಮೈಸೂರು, ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿಗಳನ್ನು ಮಹಾರಾಷ್ಟ್ರ ಪೊಲೀಸರು ಬಂದು ಪತ್ತೆ ಮಾಡುತ್ತಾರೆ, ನಮ್ಮ ಪೊಲೀಸರಿಗೆ ಇದು ಏಕೆ ಗೊತ್ತಾಗುವುದಿಲ್ಲ. ಇದು ಇಲಾಖೆಯ ವೈಫಲ್ಯ. ನಿಮ್ಮ ಇಲಾಖೆ ಸರಿಯಾಗಿ ಕೆಲಸ ನಿರ್ವಹಿಸಿದ್ರೆ ಇಂಥ ವೈಫಲ್ಯ ಆಗುತ್ತಾ ಎಂದು ಪ್ರಶ್ನಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
'ಡ್ರಗ್ಸ್ ಮುಕ್ತ ಕರ್ನಾಟಕ' ಮಾಡುವುದಕ್ಕಾಗಿ ಪೊಲೀಸರು ಸಮಾರೋಪಾದಿ ಕೆಲಸ ಮಾಡಬೇಕು. ಡ್ರಗ್ಸ್ ದಂಧೆಯ ಮೂಲ ಬೇರುಗಳನ್ನು ಪತ್ತೆ ಹಚ್ಚಬೇಕು. ವ್ಯಸನಿಗಳು ಹಾಗೂ ಮಾರಾಟಗಾರರನ್ನು ಬಂಧಿಸಿ ತೀವ್ರ ವಿಚಾರಣೆ ಮಾಡಿದರೆ ಅದರ ಮೂಲ ಬೇರುಗಳು ಪತ್ತೆಯಾಗಲ್ವಾ.. ನಮ್ಮ ಕರ್ನಾಟಕ ಪೊಲೀಸ್ ಇಲಾಖೆಗೆ ಇಡೀ ದೇಶದಲ್ಲಿ ಗೌರವ ಇದೆ, ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡಿ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ವಿದೇಶಿಗರನ್ನು ಕೂಡಲೇ ಪತ್ತೆಹಚ್ಚಿ ಅವರನ್ನು ಗಡೀಪಾರು ಮಾಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.
ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ದೇಶದಲ್ಲಿಯೇ ಮೂರನೇ ಅತ್ಯುತ್ತಮ ಪೊಲೀಸ್ ಠಾಣೆ ಎಂಬ ಗೌರವ ಪಡೆದಿದೆ. ರಾಜ್ಯದಲ್ಲಿ ಇಂತಹ ಉತ್ತಮ ಠಾಣೆಗಳು ಬಹಳಷ್ಟು ಇವೆ. ಪೊಲೀಸರು ಪ್ರಾಮಾಣಿಕವಾಗಿ ದುರ್ಬಲ ವರ್ಗದವರ ಕೆಲಸ ಮಾಡಬೇಕು. ಬಲಾಡ್ಯರ ಕೈಗೊಂಬೆಗಳಾಗಬಾರದು ಎಂದು ತಾಕೀತು ಮಾಡಿದರು. ರಾಜ್ಯದಲ್ಲಿ ಕೊಲೆ, ದರೋಡೆ ಕೇಸುಗಳು ಕಡಿಮೆಯಾಗುತ್ತಿದ್ದರೆ ಸೈಬರ್, ಡ್ರಗ್ಸ್ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಅಪರಾಧಗಳಲ್ಲಿ ತೊಡಗಿದವರಿಗೆ ಕೊಲೆಯತ್ನಕ್ಕೆ ವಿಧಿಸುವ ಶಿಕ್ಷೆಯನ್ನು ಕೊಡಿಸಲು ಕಾನೂನಿಗೆ ತಿದ್ದುಪಡಿ ತರಬೇಕಿದೆ ಎಂದು ಹೇಳಿದರು.
ರಾಜೀವ್ಗೌಡ ಬಂಧನಕ್ಕೆ ಸೂಚನೆ
ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಶಿಡ್ಲಘಟ್ಟದ ಪೌರಾಯುಕ್ತರನ್ನು ನಿಂದಿಸಿರುವ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಿಎಂ, ''ರಾಜೀವ್ ಗೌಡ ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲಾಗುವುದು. ಯಾವುದೇ ಪಕ್ಷದವರಾಗಿರಲಿ, ಕಾನೂನಿಗಿಂತ ಯಾರೂ ಮೇಲಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Karnataka Chief Minister Siddaramaiah sharply criticised senior police officers after revealing that police personnel themselves were involved in 88 criminal cases. Questioning the department’s failure to curb robberies and drug rackets, he asked why Maharashtra police were detecting drug factories in Bengaluru and Mysuru while local police failed.
10-03-26 01:47 pm
HK News Staffer
ಗುರುಗ್ರಾಮ್ನಲ್ಲಿ ನಿರ್ಮಾಣ ಹಂತದ ಗೋಡೆ ಕುಸಿತ ; 7...
10-03-26 11:04 am
ಸ್ತ್ರೀ–ಪುರುಷರ ನಗ್ನ ಫೋಟೋಗಳು, ಕೊಳೆತ ಟೊಮೆಟೋ ; ಬೆ...
10-03-26 10:49 am
ಕಲಬುರಗಿ ಜಾತ್ರೆಯಲ್ಲಿ ಭೀಕರ ದುರಂತ; ರಥದ ಚಕ್ರಕ್ಕೆ...
09-03-26 09:51 pm
ಕೊಡಗು ; ಹತ್ತು ದಿನ ಅಂತರದಲ್ಲಿ ಕಾಡಾನೆಗೆ ಎರಡನೇ ಬಲ...
09-03-26 08:07 pm
10-03-26 09:46 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಬಂಧಿ ; ಜಗತ್ತಿಗೆ...
10-03-26 04:30 pm
ಕಚ್ಚಾ ತೈಲ ದರ ಏರಿಕೆ ; ಪಾಕಿಸ್ತಾನದಲ್ಲಿ ಅಲ್ಲೋಲಕಲ್...
10-03-26 01:31 pm
ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಆಯತುಲ್ಲಾ ಮೊಜ್ತಬ...
09-03-26 01:44 pm
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
10-03-26 05:00 pm
HK News Staffer
ಬಿಸಿಲಿಗೆ ತತ್ತರಿಸಿದ ಅಳಿಲಿನ ದಣಿವು ನೀಗಿಸಿದ ಟ್ರಾಫ...
09-03-26 09:52 pm
ಗಲ್ಫ್ ಯುದ್ಧ ; ಮಂಗಳೂರಿನಿಂದ ದುಬೈ, ಜೆದ್ದಾ ಸೇರಿ ಹ...
09-03-26 07:29 pm
ತಲಪಾಡಿಯ ಯುವಕ ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಸ...
09-03-26 02:53 pm
ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲ...
09-03-26 12:50 pm
10-03-26 08:32 pm
Mangaluru Staffer
ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖ...
10-03-26 07:01 pm
ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವೇಳೆ ಕಿರಿಕ್ ; 19 ವರ...
10-03-26 01:49 pm
Vexon fraud Company, FIR: ಬ್ಲೇಡ್ ಕಂಪನಿ ವೆಕ್ಸನ...
28-02-26 11:12 am
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm