ಬ್ರೇಕಿಂಗ್ ನ್ಯೂಸ್
16-01-26 04:35 pm HK News Desk ಕರ್ನಾಟಕ
ಚಿಕ್ಕಬಳ್ಳಾಪುರ, ಜ 16 : ಬಾಯಿ ಬಿಟ್ರೆ ಕೊಳಕ ಮಾತುಗಳುಲೇಡಿ ಆಫೀಸರ್ ಅನ್ನೋದನ್ನೂ ಮರೆತು ನಾಲಗೆ ಹರಿಬಿಟ್ಟ ನಾಯಕ. ಇದು ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡನ ಆಟಾಟೋಪ. ಬೆಂಕಿ ಹಚ್ತೀನಿ.. ಚಪ್ಪಲಿಲಿ ಹೊಡಿಸ್ತೀನಿ.. ಯಬ್ಬಾ ಯಬ್ಬಾ.. ಈತನ ಬಾಯಿಯಲ್ಲಿ ಉದುರಿದ ಅಣಿಮುತ್ತುಗಳನ್ನು ಕೇಳೋಕೆ ಎರಡು ಕಿವಿಗಳೂ ಸಾಲದು.
ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ ಹಾಕಿದ್ದ ಬ್ಯಾನರ್ ತೆಗೆದ ಕಾರಣಕ್ಕೆ ನಗರಸಭೆಯ ಆಯುಕ್ತೆ ಅಮೃತಾಗೌಡರಿಗೆ ಹೀಗೆಲ್ಲಾ ಬೈದಿರೋದು ಕಾಂಗ್ರೆಸ್ ಮುಖಂಡ ರಾಜೀವ್ಗೌಡ. ಅವಾಚ್ಯ ಶಬ್ಧಗಳಿಂದ ಮಹಿಳಾ ಅಧಿಕಾರಿಗೆ ಬೈದಿರುವ ಆಡಿಯೋ ಇದೀಗ ಎಲ್ಲಾ ಕಡೆ ವೈರಲ್ ಆಗಿದೆ.
ಮೊನ್ನೆ ಸಚಿವ ಜಮೀರ್ ಅಹ್ಮದ್ ಖಾನ್ ಮಗ ಝೈದ್ ಖಾನ್ ನಟನೆಯ ಸಿನಿಮಾ ಪ್ರೊಮೋಶನ್ ಗೆ ಸಂಬಂಧಿಸಿದ ಬ್ಯಾನರ್ಗಳನ್ನು ಶಿಡ್ಲಘಟ್ಟದ ಉದ್ದಗಲಕ್ಕೂ ಹಾಕಲಾಗಿತ್ತು. ಸಿಕ್ಕಿದ್ದೇ ಚಾನ್ಸ್ ಅಂತ ತನ್ನ ಫೋಟೋ ಸೇರಿಸಿ ಬ್ಯಾನರ್ಗಳನ್ನು ಹಾಕಿದ್ದ ಈ ರಾಜೀವ್ ಗೌಡ. ಆದರೆ ಶಿಡ್ಲಘಟ್ಟದ ಸರ್ಕಲ್ನಲ್ಲಿ ಸರಿಯಾಗಿ ರೋಡ್ ಕೂಡ ಕಾಣದಂತೆ ಹಾಕಿದ್ದ ಒಂದು ಬ್ಯಾನರ್ ತೆರವು ಮಾಡಲಾಗಿತ್ತು. ತನ್ನ ಬ್ಯಾನರ್ ತೆಗೆದು ಅದೇ ಜಾಗದಲ್ಲಿ ಶಿಡ್ಲಘಟ್ಟದ ಜೆಡಿಎಸ್ ಶಾಸಕ ಬಿ ಎನ್ ರವಿಕುಮಾರ್ ಬ್ಯಾನರ್ ಹಾಕಿದ್ದರು ಎಂಬ ಕಾರಣಕ್ಕೆ ರಾಜೀವ್ ಗೌಡನಿಗೆ ಉರಿ ಹತ್ತಿದೆ. ತಕ್ಷಣ ನಗರ ಸಭೆ ಆಯುಕ್ತೆ ಅಮೃತಾಗೌಡರಿಗೆ ಫೋನ್ ಮಾಡಿ ಬಾಯಿಗೆ ಬಂದಂತೆ ಬೈದಿದ್ದಾರೆ.
ರಸ್ತೆಮಧ್ಯೆಯೇ ಬ್ಯಾನರ್ ಹಾಕಿರುವ ಕಾರಣಕ್ಕೆ ಅಪಘಾತ ಆಗ್ತಿದೆ ಎಂದು ಸಾರ್ವಜನಿಕರಿಂದ ದೂರು ಬಂದ ಕಾರಣಕ್ಕೆ ತೆರವು ಮಾಡಿದ್ದೇವೆ ಸರ್ ಎಂದು ಅಮೃತಾಗೌಡ ವಿವರಿಸಿದ್ರೂ ಅದನ್ನು ಕೇಳಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಅಧಿಕಾರಿಯ ಮುಂದೆ ತನ್ನ ಪೌರಷ ಕೊಚ್ಚಿಕೊಳ್ಳಲು, ಬೆಂಕಿ ಹಚ್ಚುತ್ತೇನೆ. ನಿಂಗೆ ಚಪ್ಪಲಿಯಿಂದ ಹೊಡೆಸುತ್ತೇನೆ ಅಂತೆಲ್ಲಾ ಬಾಯಿಗೆ ಬಂದಂತೆ ಅವಾಚ್ಯವಾಗಿ ನಿಂದಿಸಿದ್ದಾನೆ ಈ ಕಾಂಗ್ರೆಸ್ ನಾಯಕ.
ಕಾಂಗ್ರೆಸ್ ಮುಖಂಡನ ಪದಬಳಕೆ ಪೌರಾಯುಕ್ತೆ ಅಮೃತಾಗೌಡರಿಗೆ ಇನ್ನಿಲ್ಲದಂತೆ ಘಾಸಿ ಮಾಡಿದೆ. ಆತನ ಕೆಟ್ಟಾ ಕೊಳಕ ಮಾತುಗಳು ಕಿವಿಯಲ್ಲಿ ಚುಚ್ಚಲಾರಂಭಿಸಿವೆ. ಇದರಿಂದ ನೊಂದು ಕಣ್ಣೀರು ಹಾಕಿದ್ದಾರೆ ಪೌರಾಯುಕ್ತೆ ಅಮೃತಾಗೌಡ. ಅಷ್ಟೇ ಅಲ್ಲದೆ ಬ್ಯಾನರ್ ತೆರವು ಮಾಡಿದ ಪೌರಕಾರ್ಮಿಕರನ್ನೂ ಈ ರಾಜೀವ್ ಗೌಡ ನಿಂದಿಸಿದ ಕಾರಣಕ್ಕೆ ನಗರಸಭೆ ಮುಂದೆ ಸಿಬ್ಬಂದಿ ಜೊತೆ ಧರಣಿ ಮಾಡಿದರು. ತಮಟೆ ಚಳವಳಿ, ಪಾದಯಾತ್ರೆ ಮೂಲಕ ನಗರ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟರು. ಅಸಭ್ಯ ಪದ ಬಳಕೆ ಮಾಡಿದ ಕಾರಣಕ್ಕೆ ಬಿಎನ್ಎಸ್ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
ಇನ್ನು ರಾಜೀವ್ ವಿರುದ್ಧ ಪೌರಾಯುಕ್ತ ಅಮೃತಾ ಹಾಗೂ ಜೆಡಿಎಸ್ ಶಾಸಕ ರವಿಕುಮಾರ್ ಬೆಂಬಲಿಗರು ನೀಡಿರುವ ದೂರಿನ ಅನ್ವಯ ಎರಡು ಎಫ್ಐಆರ್ ದಾಖಲಾಗಿವೆ. ಇನ್ನೊಂದೆಡೆ ಕಾರಣ ಕೇಳಿ ಕೆಪಿಸಿಸಿ ನೋಟಿಸ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೊ ಮೂಲಕ ನಗರಸಭೆ ಪೌರಾಯುಕ್ತ ಅಮೃತಾ ಅವರಿಗೆ ಕ್ಷಮೆ ಕೇಳಿರುವ ರಾಜೀವ್ ಗೌಡ, ಆಡಿಯೋ ವೈರಲ್ ಬೆನ್ನಲ್ಲೇ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಶಾಸಕರ ಬೆಂಬಲಿಗ ತಾಲೂಕು ಜೆಡಿಎಸ್ ಅಧ್ಯಕ್ಷ ನಾಗಮಂಗಲ ಶ್ರೀನಿವಾಸಗೌಡ ನೀಡಿರುವ ದೂರನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹಾಗೂ ಪೌರ ಕಾರ್ಮಿಕರ ಸಂಘದ ಕುಮಾರ್ ಎಂಬುವರು ರಾಜೀವ್ ಗೌಡ ವಿರುದ್ಧ ದೂರು ನೀಡಿದ್ದಾರೆ.
ಗೂಂಡಾ ಕಾಯ್ದೆ ಅಡಿ ಬಂಧಿಸಿ ; ಛಲವಾದಿ
ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ರಕ್ಷಣೆಯೇ ಇಲ್ಲವಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯದೇ ನೌಕರರು ಮತ್ತು ಅಧಿಕಾರಿಗಳ ವಿರುದ್ಧ ದೌರ್ಜನ್ಯ ನಡೆಸುವ ಮತ್ತು ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
A Congress leader in Sidlaghatta allegedly abused and threatened Municipal Commissioner Amruta Gouda over the removal of a banner. The audio clip went viral, leading to two FIRs, a KPCC show-cause notice, and the leader going absconding after issuing an apology.
16-01-26 04:35 pm
HK News Desk
ಕೆಲಸದ ಒತ್ತಡ ; ಮಕ್ಕಳಿಗೆ ಪಾಠ ಮಾಡಿ ಶಾಲಾ ಕೊಠಡಿಯಲ್...
15-01-26 05:56 pm
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
16-01-26 02:26 pm
HK News Desk
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
16-01-26 12:31 pm
Mangalore Correspondent
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm