ಬ್ರೇಕಿಂಗ್ ನ್ಯೂಸ್
25-10-25 09:00 pm Bangalore Correspondent ಕರ್ನಾಟಕ
ಬೆಂಗಳೂರು, ಅ 26 : "ಎ ಖಾತೆ ಪರಿವರ್ತಿಸುವ ಸರ್ಕಾರದ ಸ್ಕೀಂ ಒಂದು ಬೋಗಸ್. ಜೆಡಿಎಸ್ ಕಡಿಮೆ ಬೆಲೆಗೆ ನಿಮ್ಮ ಮನೆಯ ಮಾಲೀಕತ್ವವನ್ನು ನಿಮಗೆ ಮಾಡಿಸಿಕೊಡಲಿದೆ. ಇನ್ನು ಎರಡು ವರ್ಷ ಕಾಯಿರಿ" ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯದ ಜನರಿಗೆ ತಿಳಿಸಿದರು.
ಜೆ.ಪಿ. ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, "ದುಪ್ಪಟ್ಟು ಹಣ ಕೊಟ್ಟು ಎ ಖಾತೆಗೆ ಪರಿವರ್ತನೆ ಮಾಡುತ್ತಿದ್ದಾರೆ. ಅಷ್ಟೊಂದು ಹಣ ಕೊಟ್ಟು ಬಡವರು ಹೇಗೆ ಎ ಖಾತೆ ಮಾಡಿಸುವುದು. ಈ ಮೂಲಕ ಕಾಂಗ್ರೆಸ್ ಸರ್ಕಾರ ಹಣ ಲೂಟಿ ಮಾಡುತ್ತಿದೆ. ಬಿ ಖಾತೆಯಿಂದ ಎ ಖಾತೆ ಮಾಡಿಸುವ ಸರ್ಕಾರದ ಸ್ಕೀಂ ಬೋಗಸ್ ಆಗಿದೆ. ಅದಕ್ಕೆ ಜನರು ಮರಳಾಗುವುದು ಬೇಡ. ಇನ್ನು ಎರಡು ವರ್ಷ ಇದೆ, ಕಾಯಿರಿ. ಇದು ಎಲ್ಲಾ ಬೋಗಸ್. ನೀವು ಯಾರೂ ಹಣ ಕೊಡುವ ಅಗತ್ಯ ಇಲ್ಲ. ಈ ಹಿಂದಿನ ವ್ಯವಸ್ಥೆಯಂತೆ ನಿಮ್ಮ ಆಸ್ತಿ ನಿಮಗೆ ಬರೆಸಿಕೊಡುವ ಜವಾಬ್ದಾರಿ ಜೆಡಿಎಸ್ನದ್ದು. ನಿಮ್ಮ ಮನೆ ಹಾಳು ಮಾಡಿಕೊಳ್ಳಬೇಡಿ. ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಸ್ಕೀಂಗೆ ಯಾವುದೇ ಕಾರಣಕ್ಕೂ ಮರುಳಾಗಬೇಡಿ. ನಿಮ್ಮನ್ನು ಉಳಿಸುವ ಕೆಲಸ ನಾನು ಮಾಡುತ್ತೇನೆ. ಎ ಖಾತೆ ಮಾಡಿಸಲು ಮತ್ತೆ ಸಾಲ ಮಾಡಿಕೊಳ್ಳಬೇಡಿ. ಕಡಿಮೆ ದರದಲ್ಲಿ ನಿಮ್ಮ ಮನೆಯ ಮಾಲೀಕತ್ವವನ್ನು ನಾನು ಮಾಡಿಸಿಕೊಡುತ್ತೇನೆ. ಈ ಸವಾಲನ್ನು ನಾನು ಸ್ವೀಕಾರ ಮಾಡುತ್ತೇನೆ" ಎಂದು ಭರವಸೆ ನೀಡಿದರು.
ಎರಡು ವರ್ಷಗಳ ಬಳಿಕ ನಮ್ಮ ಸರ್ಕಾರ ಬರಲಿದೆ:
"ಎರಡು ವರ್ಷಗಳ ಬಳಿಕ ನಮ್ಮ ಸರ್ಕಾರ ಬರಲಿದೆ. ಇನ್ನು ಎರಡು ವರ್ಷ ಕಾಯಿರಿ. ರಾಜ್ಯದ ಜನರು ಯಾವಾಗ ಚುನಾವಣೆ ಬರುತ್ತದೆ ಎಂದು ಜನ ಕಾಯುತ್ತಿದ್ದಾರೆ. ಯಾರ ಸರ್ಕಾರ ಬರುತ್ತದೆ ಅಂತ ಜನರು ನಿರ್ಧಾರ ಮಾಡುತ್ತಾರೆ. ನಾನು ಯಾವ ಕ್ರಾಂತಿ ಬಗ್ಗೆ ಮಾತಾಡಿಲ್ಲ. ನನಗೆ ಕ್ರಾಂತಿ- ವಾಂತಿ -ಬ್ರಾಂತಿ ಯಾವುದೂ ಇಲ್ಲ. ಕುಮಾರಸ್ವಾಮಿ ಮುಗಿದೇ ಹೋದ್ರು ಅಂತ ತುಂಬಾ ಜನ ಅಂದುಕೊಂಡಿದ್ರು. ಆದರೆ ನಾನು ಆರೋಗ್ಯವಾಗಿ ಮರಳಿ ಬಂದಿದ್ದೇನೆ. ಜನರ ಆಶೀರ್ವಾದ ನನ್ನ ಮೇಲಿದೆ. ಜನ ಚುನಾವಣೆಗೆ ಕಾಯ್ತಾ ಇದ್ದಾರೆ. ಇನ್ನೆರಡು ವರ್ಷದಲ್ಲಿ ಇದಕ್ಕೆ ಉತ್ತರ ಸಿಗುತ್ತೆ. ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಬಿರುಕಿಲ್ಲ. ಸಮಸ್ಯೆಯೂ ಇಲ್ಲ. ಅಬಾಧಿತವಾಗಿ ಮೈತ್ರಿ ಮುಂದುವರಿಯಲಿದೆ" ಎಂದು ತಿಳಿಸಿದರು.
ಇದು ಮತ್ತೊಂದು ಟೋಪಿ ಹಾಕುವ ಕೆಲಸ:
"ರಾಜ್ಯ ಸರ್ಕಾರ ಆರನೇ ಗ್ಯಾರಂಟಿಯಾಗಿ ಆಸ್ತಿಗೆ ಎ ಖಾತೆ ಕೊಡುವ ಮೂಲಕ ನಾಗರೀಕರಿಗೆ ದೀಪಾವಳಿಯ ಉಡುಗೊರೆಯಾಗಿ ನೀಡಿದ್ದೇವೆ ಎಂದು ಡಿಸಿಎಂ, ಸಿಎಂ ಜಾಹೀರಾತು ನೀಡುತ್ತಿದ್ದಾರೆ. ಇದು ಮತ್ತೊಂದು ನಾಡಿನ ಜನತೆಗೆ ಟೋಪಿ ಹಾಕುವ ಕೆಲಸವಾಗಿದೆ. 1995ರಿಂದ ಬಿ ಖಾತೆ ಸಮಸ್ಯೆಯನ್ನು ಬೆಂಗಳೂರಿಗರು ಅನುಭವಿಸುತ್ತಿದ್ದಾರೆ. 2003ರಲ್ಲಿ ಏಳು ನಗರಸಭೆ ಮಾಡಲು ತೀರ್ಮಾನ ಆಯ್ತು. ಅಭಿವೃದ್ಧಿ ಕಂಡಿಲ್ಲ ಅಂತ ಈ ತೀರ್ಮಾನ ಮಾಡಲಾಯಿತು. ವ್ಯವಸಾಯೇತರ ಯೋಜನೆಗೆ ಪರಿವರ್ತನೆ ಮಾಡಲು ಈ ಕ್ರಮ ಕೈಗೊಳ್ಳಲಾಯಿತು. 1997ರಲ್ಲಿ ನಮ್ಮ ಸರ್ಕಾರ ಇದ್ದಾಗ ಪ್ರತಿ ಚದರ್ ಅಡಿಗೆ 110 ರೂ. ಬೆಟರ್ಮೆಂಟ್ ಶುಲ್ಕ ನಿಗದಿ ಮಾಡಿ ಖಾತೆ ವಿತರಣೆ ಮಾಡಲಾಗುತ್ತಿತ್ತು. ಅದರಂತೆ 30X40 ನಿವೇಶನ ಸಕ್ರಮಕ್ಕೆ ಸುಮಾರು 12,260 ರೂ. ಆಗುತ್ತಿತ್ತು. ಭೂ ಪರಿವರ್ತನೆ ಶುಲ್ಕವಾಗಿ 1500 ರೂ. ವಿಧಿಸಲಾಗುತ್ತಿತ್ತು" ಎಂದರು.
"2007ರಲ್ಲಿ ಏಳು ನಗರ ಸಭೆಗಳಲ್ಲಿ ಸ್ವೇಚ್ಛಾಚಾರವಾಗಿ ನಕ್ಷೆ ಮಂಜೂರಾತಿ ನೀಡಲಾಗುತ್ತಿತ್ತು. ನಗರಸಭೆಗಳಲ್ಲಿ ಇಷ್ಟ ಬಂದ ಹಾಗೇ ಪ್ಲಾನ್ ಮಂಜೂರಾತಿ ಮಾಡಲಾಗುತ್ತಿತ್ತು. ಆಗ ನಮ್ಮ ಸರ್ಕಾರ ಹೊಸದಾಗಿ ಸೇರ್ಪಡೆಗೊಂಡ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸಲು ಬೆಟರ್ಮೆಂಟ್ ಚಾರ್ಜ್ ವಿಧಿಸಿ ಖಾತೆ ನೋಂದಾವಣೆ ಮಾಡಲು ಸುತ್ತೋಲೆ ಹೊರಡಿಸಲಾಗಿತ್ತು. 60 ಚ.ಮೀ. ಗೆ 200ರೂ. ನಂತೆ ಬೆಟರ್ ಮೆಂಟ್ ಚಾರ್ಜ್ ನಿಗದಿ ಮಾಡಲಾಗಿತ್ತು" ಎಂದು ತಿಳಿಸಿದರು.
Union Minister H.D. Kumaraswamy has termed the Karnataka government’s ‘A Khata conversion scheme’ a “bogus and money-looting plan,” urging citizens not to fall for it. Speaking at J.P. Bhavan in Bengaluru, he accused the Congress government of exploiting poor homeowners by charging double rates for converting ‘B Khata’ to ‘A Khata’ properties.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm