ನೆಲ್ಲಿಕಾರು ; ಟ್ರ್ಯಾಕ್ಟ‌ರ್ ಜೊತೆಗೆ ಬಾವಿಗೆ ಬಿದ್ದು ಯುವಕ ದುರಂತ ಸಾವು 

21-10-25 03:40 pm       HK News Desk   ಕರ್ನಾಟಕ

ಬಾವಿ ಬದಿಯಲ್ಲಿ ಟ್ರ್ಯಾಕ್ಟ‌ರ್ ನಿಲ್ಲಿಸಿ ತೊಳೆಯುತ್ತಿದ್ದ ವೇಳೆ ಟ್ರ್ಯಾಕ್ಟರ್ ಹಿಂದಕ್ಕೆ ಚಲಿಸಿದ್ದರಿಂದ ಯುವಕನೊಬ್ಬ ಅದರ ಜೊತೆಗೇ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಕೊಂಬೆಟ್ಟು ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಮೂಡುಬಿದ್ರೆ, ಅ.21 : ಬಾವಿ ಬದಿಯಲ್ಲಿ ಟ್ರ್ಯಾಕ್ಟ‌ರ್ ನಿಲ್ಲಿಸಿ ತೊಳೆಯುತ್ತಿದ್ದ ವೇಳೆ ಟ್ರ್ಯಾಕ್ಟರ್ ಹಿಂದಕ್ಕೆ ಚಲಿಸಿದ್ದರಿಂದ ಯುವಕನೊಬ್ಬ ಅದರ ಜೊತೆಗೇ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಕೊಂಬೆಟ್ಟು ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಕೊಂಬೆಟ್ಟು ನಿವಾಸಿ ರಾಜೇಶ್ (38) ಎಂದು ಗುರುತಿಸಲಾಗಿದೆ. ರಾಜೇಶ್ ತನ್ನ ಮನೆ ಪಕ್ಕದಲ್ಲಿರುವ ಸಂಬಂಧಿಕರಿಗೆ ಸೇರಿದ ಟ್ರ್ಯಾಕ್ಟರನ್ನು ಬಾವಿಯ ಸಮೀಪ ನಿಲ್ಲಿಸಿ ತೊಳೆಯುತ್ತಿದ್ದರು. 

ಈ ವೇಳೆ, ಟ್ರ್ಯಾಕ್ಟ‌ರ್ ಆಕಸ್ಮಿಕವಾಗಿ ಬಾವಿಯ ಕಡೆಗೆ ಚಲಿಸಲಾರಂಭಿಸಿದೆ. ಅದನ್ನು ತಡೆದು ನಿಲ್ಲಿಸಲು ಮುಂದಾದ ರಾಜೇಶ್ ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.

A tragic incident occurred in Montradi Kombettu, under Nellikkaru Gram Panchayat limits near Moodbidri, where a 38-year-old man, Rajesh, lost his life after accidentally falling into a well along with his tractor.