ಬ್ರೇಕಿಂಗ್ ನ್ಯೂಸ್
21-09-25 10:23 pm HK News Desk ಕರ್ನಾಟಕ
ಗದಗ, ಸೆ.21 : ಹಲವು ತಿಂಗಳ ಜಗ್ಗಾಟದ ಬಳಿಕ ಪಂಚಮಸಾಲಿ ಲಿಂಗಾಯತ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಉಚ್ಛಾಟನೆ ಮಾಡಲಾಗಿದೆ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಈ ನಿರ್ಧಾರ ತೆಗೆದುಕೊಂಡಿದೆ.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಅವರು, ಪಂಚಮಸಾಲಿ ಸಮುದಾಯದ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಮಾಡಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಲಿಂಗಾಯತ ಧರ್ಮ ವಿರೋಧಿ ಹೇಳಿಕೆ, ಅಕ್ರಮ ಆಸ್ತಿ ಗಳಿಕೆ ಸೇರಿದಂತೆ ಸ್ವಾಮೀಜಿ ಮೇಲೆ ಹಲವು ಆರೋಪ ಹೊರಿಸಿ, ಪೀಠದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಅಸೂಟಿ ಹೇಳಿದರು. ಭಾನುವಾರ ನಡೆದ ಸಭೆಯಲ್ಲಿ ಸ್ವಾಮೀಜಿಯನ್ನು ಉಚ್ಛಾಟಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಸ್ವಾಮೀಜಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದು ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ್ದಾರೆ. ಈ ಬಗ್ಗೆ 2014ರಲ್ಲಿ ಸ್ವಾಮೀಜಿಗೆ ನೋಟಿಸ್ ನೀಡಿದ್ದೆವು ಎಂದು ನೀಲಕಂಠ ಅಸೂಟಿ ಹೇಳಿದರು.
ಪಂಚಮಸಾಲಿಗೆ ಮೀಸಲಾತಿ ವಿಚಾರದಲ್ಲಿ ಸ್ವಾಮೀಜಿ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದರು. ಇತ್ತೀಚೆಗೆ ಕಾಶಪ್ಪನವರ್ ಬಣವು ಸ್ವಾಮೀಜಿ ವಿರುದ್ಧ ತಿರುಗಿ ಬಿದ್ದಿತ್ತು. ಆನಂತರ ಆಸ್ಪತ್ರೆಗೆ ದಾಖಲಾಗಿದ್ದ ಬಸವ ಮೃತ್ಯುಂಜಯ ಸ್ವಾಮೀಜಿಯನ್ನು ಇದೀಗ ಪೀಠದಿಂದಲೇ ಕಿತ್ತು ಹಾಕಲಾಗಿದೆ.
ಸ್ವಾಮೀಜಿಗಳ ಬಗ್ಗೆ ಬಹಳಷ್ಟು ಕಂಪ್ಲೆಂಟ್ ಇದ್ದವು. ಟ್ರಸ್ಟ್ ಮಾತು ಕೇಳುತ್ತಿರಲಿಲ್ಲ..ಅವ್ರದು ದೊಡ್ಡ ಫೈಲೇ ಇದೆ. ಈ ಸಭೆಯಲ್ಲಿ ಪೀಠದಿಂದ ಅವ್ರನ್ನ ಉಚ್ಛಾಟಿಸಬೇಕು ಎಂದು ನಿರ್ಣಯ ಆಯ್ತು.. ಟ್ರಸ್ಟ್ ಬೈಲಾದ ವಿರುದ್ಧವಾಗಿ ಆಸ್ತಿ ಮಾಡಿದ್ದಾರೆ. ಸಮಾಜ ಒಡೆಯುವ ಕೆಲಸ ಮಾಡ್ತಿದ್ದಾರೆ. ಬಹಳ ದಿನದಿಂದ ಕಾಯ್ದಿದ್ದೇವೆ. 2014 ರಲ್ಲಿ ನೋಟಿಸ್ ನೀಡಿದ್ದೇವೆ. ಪೂರ್ಣ ಬಹುಮತದಿಂದ ಟ್ರಸ್ಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಬಸವತತ್ವ ನಾವು ಯಾವತ್ತೂ ಹಿಂದೂ ಎನ್ನುವುದಿಲ್ಲ. ಹಿಂದೂ ಧರ್ಮದ ವಿರುದ್ಧವೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ. ಹಿಂದೂ ಧರ್ಮದ ಅನಿಷ್ಠದ ವಿರುದ್ಧ ಅಂತದ್ರಲ್ಲಿ ಈ ಇಬ್ಬರು ಸ್ವಾಮೀಜಿಗಳು ಹಿಂದೂ ಪದ ಬಳಕೆ ಮಾಡ್ತಾರೆ ಅಂದ್ರೆ ಇವರು ಹೇಗೆ ಇರಬೇಕು ಹೇಳಿ. ರಾಜಕೀಯ ಒತ್ತಡದಿಂದ ಅವ್ರು ಹಿಂದೂ ಪದ ಬಳಕೆ ಮಾಡುವಂತೆ ಹೇಳಿದ್ದಾರೆ ಎಂದು ಅಸೂಟಿ ಹೇಳಿದ್ದಾರೆ.
After months of infighting, Basava Jayamrutyunjaya Swamiji has been removed from the post of head of the Panchamasali Lingayat Peetha. The decision was taken by the Akhila Bharat Lingayat Panchamasali Samaj Trust.
29-12-25 11:13 pm
Bangalore Correspondent
ಡ್ರಗ್ಸ್ ಫ್ಯಾಕ್ಟರಿ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳಿ...
29-12-25 07:24 pm
ವ್ಯಾಪಕ ಭ್ರಷ್ಟಾಚಾರ ; ಕೋಲಾರದಲ್ಲಿ 25 ಗ್ರಾಪಂ ವಿರು...
28-12-25 09:03 pm
Seabird Bus, Drink and Drive: ಮೆಜೆಸ್ಟಿಕ್ ನಲ್ಲ...
27-12-25 02:40 pm
ಚಿತ್ರದುರ್ಗ ಬಸ್ ದುರಂತ ; ಗಾಯಗೊಂಡಿದ್ದ ಸೀಬರ್ಡ್...
26-12-25 09:38 pm
27-12-25 04:29 pm
HK News Desk
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
ಕ್ರೈಸ್ತರ ಮೇಲೆ ದಾಳಿ ; ನೈಜೀರಿಯಾದಲ್ಲಿ ಐಸಿಸ್ ಉಗ್ರ...
26-12-25 05:50 pm
ರೈಲ್ವೆಯಲ್ಲಿ ಒಂದೇ ವರ್ಷಕ್ಕೆ ಎರಡನೇ ಬಾರಿ ಪ್ರಯಾಣ ದ...
26-12-25 03:04 pm
29-12-25 11:03 pm
Mangalore Correspondent
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವ...
29-12-25 07:37 pm
ಉಡುಪಿ ; ಬುದ್ದಿ ಮಾತು ಹೇಳಿದ್ದಕ್ಕೆ 17 ವರ್ಷದ ಯುವತ...
29-12-25 01:24 pm
ಸಕಲೇಶಪುರ- ಸುಬ್ರಹ್ಮಣ್ಯ 55 ಕಿಮೀ ಘಾಟ್ ವಿದ್ಯುದೀಕರ...
29-12-25 11:45 am
29-12-25 03:02 pm
Mangalore Correspondent
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm
ಬೈಕಿನಲ್ಲಿ 19 ಕೇಜಿ ಗೋಮಾಂಸ ಸಾಗಣೆ ; ಬಜ್ಪೆ ಮಳಲಿಯಲ...
27-12-25 07:42 pm
ಧನದಾಹಕ್ಕೆ ನವ ವಿವಾಹಿತೆ ಗಾನವಿ ಬಲಿ ಪ್ರಕರಣ ; ತಲೆಮ...
27-12-25 02:28 pm