ಬ್ರೇಕಿಂಗ್ ನ್ಯೂಸ್
15-09-25 04:45 pm Bangalore Correspondent ಕರ್ನಾಟಕ
ಬೆಂಗಳೂರು, ಸೆ 15: ಸೆಲೆಬ್ರಿಟಿಗಳ ಫೋನ್ ಗಳನ್ನು ಅಥವಾ ಅವರ ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್ ಮಾಡಿ ಅವರ ಹೆಸರಿನಲ್ಲಿ ಅವರ ಸ್ನೇಹಿತರಿಗೆ ಹಣಕ್ಕಾಗಿ ಮನವಿ ಮಾಡುವಂಥ ಹ್ಯಾಕರ್ ಗಳ ಜಾಲಕ್ಕೆ ನಟ ಉಪೇಂದ್ರ ಕುಟುಂಬ ಸಿಲುಕಿಕೊಂಡಿದೆ. ಸೆ. 15ರಂದು ಈ ಕುರಿತಂತೆ, ಸಾರ್ವಜನಿಕರಲ್ಲಿ ಮಾಹಿತಿ ಹಂಚಿಕೊಂಡಿರುವ ನಟ ಉಪೇಂದ್ರ, ತಮ್ಮ ಹಾಗೂ ತಮ್ಮ ಪತ್ನಿಯ ಫೋನ್ ಗಳು ಪ್ರಾಯಶಃ ಹ್ಯಾಕ್ ಆಗಿದ್ದು ಯಾರಾದರೂ ನಮ್ಮ ಹೆಸರಿನಲ್ಲಿ ಹಣ ಕೇಳಿದರೆ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ಏನಿದು ಘಟನೆ?
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿರುವ ವಿಡಿಯೋದಲ್ಲಿ ನಟ ಉಪೇಂದ್ರ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಪ್ರಿಯಾಂಕಾ ಅವರು ಆನ್ ಲೈನ್ ನಲ್ಲಿ ಕೆಲವು ಸಾಮಗ್ರಿಗಳನ್ನು ಬುಕ್ ಮಾಡಿದ್ದರು. ಸೆ. 15ರ ಬೆಳಗ್ಗೆ ವ್ಯಕ್ತಿಯೊಬ್ಬ ಪ್ರಿಯಾಂಕಾ ಅವರ ನಂಬರಿಗೆ ಕರೆ ಮಾಡಿ ಆನ್ ಲೈನ್ ನಲ್ಲಿ ಬುಕ್ ಮಾಡಿರುವ ವಸ್ತುಗಳ ಡೆಲಿವರಿ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಆತ ಹ್ಯಾಶ್ ಟ್ಯಾಗ್ ಮತ್ತಿತರ ಚಿಹ್ನೆಗಳನ್ನು ತಮ್ಮ ಮೊಬೈಲಿನಲ್ಲಿ ನಮೂದಿಸುವಂತೆ ಹೇಳಿದ್ದು, ಅದು ಗೊತ್ತಾಗದ ಪ್ರಿಯಾಂಕಾ ಅವರು ತಮ್ಮ ಪತಿ ಉಪೇಂದ್ರ ಅವರಿಗೆ ಫೋನ್ ಕೊಟ್ಟಿದ್ದಾರೆ. ಆನಂತರ, ಉಪೇಂದ್ರ ಅವರ ಜೊತೆಯಲ್ಲೂ ಮಾತನಾಡಿರುವ ಆ ವ್ಯಕ್ತಿ, ಫೋನ್ ನಲ್ಲಿ ಹ್ಯಾಶ್ ಟ್ಯಾಗ್ ಮತ್ತಿತರ ಚಿಹ್ನೆಗಳನ್ನು ಒತ್ತುವಂತೆ ಸೂಚಿಸಿದ್ದಾನೆ. ಉಪೇಂದ್ರ ಅವರು ಆ ಹೇಳಿದಂತೆ ಮಾಡಿದ್ದಾರೆ. ಅತ್ತ ಫೋನ್ ಕರೆ ಮುಕ್ತಾಯವಾಗಿದೆ. ಆಗ ಎಚ್ಚೆತ್ತ ಉಪೇಂದ್ರ ದಂಪತಿಯು ಅದು ಹ್ಯಾಕರ್ ಕೆಲಸವಿರಬಹುದು ಎಂದು ಅನುಮಾನಪಟ್ಟಿದ್ದಾರೆ.

ಫೋನ್ ನಂಬರ್ ಹ್ಯಾಕ್ ಆದ ಬಳಿಕ ನಮ್ಮಿಬ್ಬರ ನಂಬರ್‌ಗಳಿಂದ ಹಣ ಕೇಳಿಕೊಂಡು ಪರಿಚಿತರಿಗೆ ಮೆಸೇಜ್‌ಗಳು ಹೋಗಿವೆ. ಖಚಿತಪಡಿಸಲು ಅವರು ಕರೆ ಮಾಡಿದರೂ ನಮಗೆ ತಲುಪುತ್ತಿಲ್ಲ. ಕಾಲ್ ಫಾರ್ವರ್ಡ್ ಮಾಡಿಟ್ಟಿದ್ದಾರೆ. ನಮ್ಮ ಪರಿಚಿತರು ಮೂರ್ನಾಲ್ಕು ಜನ ತುರ್ತು ಅಗತ್ಯವಿರಬಹುದು ಎಂದು ಸುಮಾರು ₹50 ಸಾವಿರದಷ್ಟು ಹಣವನ್ನೂ ವರ್ಗಾಯಿಸಿದ್ದಾರೆ. ನನ್ನ ಮಗ ಸಹ ಹಣ ವರ್ಗಾಯಿಸಿದ್ದಾನೆ. ಈ ರೀತಿಯ ಮೆಸೇಜ್‌ಗಳು ಬಂದರೆ ಯಾರೂ ದಯವಿಟ್ಟು ನಂಬಿ ಹಣ ಕಳುಹಿಸಬೇಡಿ. ಇದನ್ನು ಆದಷ್ಟು ಶೇರ್ ಮಾಡಿ ಎಂದು ಉಪೇಂದ್ರ ಅವರು ತಿಳಿಸಿದ್ದಾರೆ.
ಮನೆಗೆ ಆರ್ಡರ್ ಮಾಡಿದ್ದ ಒಂದಷ್ಟು ವಸ್ತುಗಳು ಬರಬೇಕಿತ್ತು. ನಾನು ಅದೇ ಕಾಲ್ ಇರಬಹುದು ಎಂದು ಉತ್ತರಿಸಿದಾಗ, ಈ ರೀತಿ ಹ್ಯಾಕ್ ಮಾಡಿದ್ದಾರೆ. ಸ್ವಲ್ಪ ಅನುಮಾನವಿತ್ತು, ಆದರೆ ನಾನು ಗಡಿಬಿಡಿಯಲ್ಲಿ ಅವರು ಹೇಳಿದ ನಂಬರ್ ಡಯಲ್ ಮಾಡಿದಾಗ ಈ ರೀತಿ ಆಗಿದೆ. ನಂತರ ನನ್ನ ವಾಟ್ಸ್ಆ್ಯಪ್ ಮೂಲಕ ಸಂಪರ್ಕದಲ್ಲಿದ್ದವರಿಗೆ, 'ತುರ್ತಾಗಿ ಬೇಕಿದೆ, 2 ಗಂಟೆಯೊಳಗೆ ವಾಪಾಸ್ ಕಳಿಸುತ್ತೇವೆ' ಎಂದು ಹಣ ಕಳಿಸುವಂತೆ ಮೆಸೇಜ್ ಮಾಡಿದ್ದಾರೆ. ದಯವಿಟ್ಟು ಈ ರೀತಿಯ ಬೇಡಿಕೆಗಳನ್ನು ನಂಬಿ ಹಣ ಕಳುಹಿಸಬೇಡಿ ಎಂದು ಪ್ರಿಯಾಂಕಾ ಉಪೇಂದ್ರ ತಿಳಿಸಿದ್ದಾರೆ.
ಈ ಟೆಕ್ನಾಲಜಿ ಯುಗದಲ್ಲಿ ತಂತ್ರಜ್ಞಾನ ಎಷ್ಟು ಉಪಯೋಗವಾಗುತ್ತಿದೆಯೋ ಅಷ್ಟೇ ದುರುಪಯೋಗಗಳೂ ನಡೆಯುತ್ತಿವೆ. ಜನಸಾಮಾನ್ಯರಿಂದ ಹಿಡಿದು ಜನಪ್ರಿಯ ಸಿನಿಮಾ ಸೆಲೆಬ್ರಿಟಿಗಳವರೆಗೆ ಸವಾಲುಗಳು ಎದುರಾಗುತ್ತಿವೆ. ಇತ್ತೀಚೆಗಷ್ಟೇ ದುಬೈ ಪ್ರವಾಸ ಮುಗಿಸಿಕೊಂಡು ಬಂದಿದ್ದ ಉಪೇಂದ್ರ ಹಾಗೂ ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ನಿಂದಾಗಿ ಡಿಸ್ಟರ್ಬ್ ಆಗಿದ್ದಾರೆ.
In a shocking case of cybercrime, Sandalwood star Upendra and his wife Priyanka have reportedly fallen prey to a phone hacking scam. The couple revealed that unknown fraudsters hacked into their mobile numbers and began sending messages to their friends and acquaintances, requesting money under the guise of an emergency.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm