Sirsi Airgun, Murder, Crime: ಶಿರಸಿ; ಏರ್‌ಗನ್ ಗುಂಡು ತಗುಲಿ 9 ವರ್ಷದ ಬಾಲಕ ಬಲಿ, ಮಕ್ಕಳನ್ನ ಬೆದರಿಸಲು ಹೋಗಿ ಕೊಲೆ, ಇಬ್ಬರ ಬಂಧನ

06-09-25 08:28 pm       HK News Desk   ಕರ್ನಾಟಕ

ಅಡಕೆ ತೋಟಕ್ಕೆ ಬಳಸುತ್ತಿದ್ದ ಏರ್‌ಗನ್‌ ನಿಂದ ವ್ಯಕ್ತಿ ಗುಂಡು ಹಾರಿಸಿದ್ದರಿಂದ 9 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಉ.ಕನ್ನಡದ ಘಟನೆ ಶಿರಸಿ ಚಿಪಗಿ ಸಮೀಪದ ಸೋಮನಳ್ಳಿಯಲ್ಲಿ ನಡೆದಿದೆ.

ಕಾರವಾರ, ಸೆ 06: ಅಡಕೆ ತೋಟಕ್ಕೆ ಬಳಸುತ್ತಿದ್ದ ಏರ್‌ಗನ್‌ ನಿಂದ ವ್ಯಕ್ತಿ ಗುಂಡು ಹಾರಿಸಿದ್ದರಿಂದ 9 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಉ.ಕನ್ನಡದ ಚಿಪಗಿ ಸಮೀಪದ ಸೋಮನಳ್ಳಿಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆ ಹೊಸಕಿತ್ತೂರಿನ ಕರಿಯಪ್ಪ ಬಸಪ್ಪ ಉಂಡಿ (9) ಮೃತ ಬಾಲಕ. ಕೊಲೆ ಆರೋಪದ ಮೇಲೆ ನಿತೀಶ ಲಕ್ಷ್ಮಣ ಗೌಡ ಹಾಗೂ ರಾಘವ ಹೆಗಡೆ ಎಂಬುವರನ್ನ ಬಂಧಿಸಲಾಗಿದೆ.

ಕೇಶವ ಹೆಗಡೆ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಎಂಬವರ ಇಬ್ಬರು ಮಕ್ಕಳು (ಅಣ್ಣ, ತಮ್ಮ) ಆಟವಾಡುತ್ತಿದ್ದ ಸಂದರ್ಭದಲ್ಲಿ ಏರ್ ಗನ್ ಫೈರ್ ಆಗಿ ದುರ್ಘಟನೆ ನಡೆದಿತ್ತು ಎನ್ನಲಾಗಿತ್ತು. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 7 ವರ್ಷದ ತಮ್ಮ ಆಕಸ್ಮಿಕವಾಗಿ ಗುಂಡು ಹಾರಿಸಿದ್ದ. ಇದರಿಂದ ಅಣ್ಣ ಕರಿಯಪ್ಪ ( 9 ) ಮೃತಪಟ್ಟಿರುವುದಾಗಿ ಹೇಳಲಾಗಿತ್ತು. ಆದರೆ ಶಿರಸಿ ಗ್ರಾಮೀಣ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ತನಿಖೆ ನಡೆಸಿದಾಗ ಅಸಲಿ ವಿಷಯ ಹೊರಬಂದಿದೆ

ಮೃತ ಬಾಲಕನ ಸಹೋದರನ ಕೈನಿಂದ ಫೈರ್ ಆಗಿದ್ದಲ್ಲ, ಕೆಲಸಗಾರ ನಿತೀಶ್ ಗೌಡನ ಕೈನಿಂದ ಮಿಸ್ ಫೈರ್ ಆಗಿ ಬಾಲಕ ಸಾವು ಕಂಡಿರುವುದು ಬೆಳಕಿಗೆ ಬಂದಿದೆ. ಇಬ್ಬರು ಮಕ್ಕಳು ಆಟವಾಡುತ್ತಾ ಏರ್ ಗನ್ ಹಿಡಿದಿದ್ದ ನಿತೀಶ್ ಗೌಡ ಬಳಿ ಬಂದಿದ್ದರು. ಅಂಗವಿಕಲನಾಗಿದ್ದ ನಿತೀಶ್ ಗೌಡನಿಗೆ ಎಡಗೈ ಊನವಾಗಿದ್ದು ಮಕ್ಕಳು ಬಂದ ಹಿನ್ನಲೆಯಲ್ಲಿ ಗನ್ ಸರಿಸುವಾಗ ಎಡ ಕೈ ತಾಗಿ ಎದುರಿಗಿದ್ದ ಬಾಲಕ ಕರಿಯಪ್ಪನ ಎದೆಗೆ ಗುಂಡು ತಾಗಿದೆ. ಅತೀ ಸಮೀಪದಲ್ಲೇ ಇದ್ದುದರಿಂದ ಎದೆಗೆ ನೇರವಾಗಿ ಗುಂಡು ಹೊಕ್ಕು ಹೃದಯ ಸೀಳಿ ರಕ್ತಸ್ರಾವವಾಗಿ ಬಾಲಕ ಮೃತಪಟ್ಟಿದ್ದಾನೆ.

ಇನ್ನು ನಿತೀಶ್ ಗೌಡನಿಗೆ ಏರ್ ಗನ್ ಬಳಸಲು ಬರುವುದಿಲ್ಲ, ತರಬೇತಿಯೂ ಇಲ್ಲ. ಹೀಗಾಗಿ ಆತನ ಅಚಾತುರ್ಯದಲ್ಲಿ ಫೈರ್ ಆಗಿದ್ದು ತನಿಖೆಯಿಂದ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನಿತೀಶ್ ಹಾಗೂ ಮನೆ ಮಾಲೀಕ ರಾಘವೇಂದ್ರ ಹೆಗಡೆ ವಿರುದ್ಧ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

In a shocking incident near Chipgi in Sirsi, Uttara Kannada district, a 9-year-old boy lost his life after being shot with an airgun reportedly used to scare away monkeys in an areca nut plantation. The deceased has been identified as Kariappa Basappa Undi (9), a resident of Hosakittur in Haveri district. He was living in Somanalli village near Sirsi