Dharmasthala Case, Dinesh Gundu Rao: ಮತ್ತೆ ಗುಂಡಿ ತೋಡುವ ಪ್ರಮೇಯ ಇಲ್ಲ ; ಅನಾಮಿಕ ಯಾರು? ಅವನ ಹಿಂದೆ ಯಾರಿದ್ದಾರೆ ನೋಡ್ಬೇಕು, ಯಾವುದೇ ಸಾಕ್ಷಿ ಇಲ್ಲದೇ ವೈಭವೀಕರಣ ಏಕೆ ಮಾಡಿದ್ರು?  ದಿನೇಶ್ ಗುಂಡೂರಾವ್ ತಿರುಗೇಟು

13-08-25 07:03 pm       Bangalore Correspondent   ಕರ್ನಾಟಕ

ಧರ್ಮಸ್ಥಳ ಪ್ರಕರಣದ ಅನಾಮಿಕ ಯಾರು? ಅವರ ಹಿಂದೆ ಯಾರಿದ್ದಾರೆ ನೋಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಅನಾಮಿಕ ಹೇಳಿದ ಸ್ಥಳಗಳನ್ನು ಹುಡುಕಲಾಗಿದೆ.

ಬೆಂಗಳೂರು, ಆ.13: ಧರ್ಮಸ್ಥಳ ಪ್ರಕರಣದ ಅನಾಮಿಕ ಯಾರು? ಅವರ ಹಿಂದೆ ಯಾರಿದ್ದಾರೆ ನೋಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಅನಾಮಿಕ ಹೇಳಿದ ಸ್ಥಳಗಳನ್ನು ಹುಡುಕಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಭಯಾನಕ ಕೊಲೆಗಳು ಆಗಿದೆ ಎಂದು ಹೇಳ್ತಿದ್ರು. ಸರ್ಕಾರ ತೀರ್ಮಾನ ಮಾಡಿ ಎಸ್​​ಐಟಿ ರಚನೆ ಮಾಡಿದೆ. ಇವರ ಉದ್ದೇಶ ಏನು?. ಯಾವುದೇ ಸಾಕ್ಷಿ ಇಲ್ಲದೇ ವೈಭವೀಕರಣ ಏಕೆ ಮಾಡಿದ್ರು ಎಂಬುದರ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು.

ಜನರನ್ನು ಗಾಬರಿಗೊಳಿಸುವುದನ್ನು ಮಾಡಿದ್ರು, ಎಸ್​​ಐಟಿ ನಿಷ್ಪಕ್ಷಪಾತ ತನಿಖೆ ಮಾಡಿದ್ದಾರೆ. ಗೃಹ ಸಚಿವರು ಸದನದಲ್ಲಿ ಉತ್ತರ ಕೊಡ್ತಾರೆ. ಅಗೆತ ಮುಂದುವರಿಯಬೇಕಾ ಎಂಬುದರ ಬಗ್ಗೆ ನಾನು ಮಾತನಾಡಲ್ಲ. ಬಿಜೆಪಿಯವರು ಧರ್ಮಸ್ಥಳ ವಿಚಾರದಲ್ಲೂ ರಾಜಕೀಯ ಮಾಡಲು ಹೋಗ್ತಿದ್ದಾರೆ. ಬಿಜೆಪಿಯವರು ನ್ಯಾಯಯುತ ತನಿಖೆಗೆ ಸಹಕಾರ ನೀಡಲಿ‌. ಈ ವಿಚಾರದಲ್ಲಿ ಪೊಲಿಟಿಕಲ್ ಲಾಭ ತೆಗೆದುಕೊಳ್ಳೊದು ಬೇಡ. ಅಗೆತ ಮುಂದುವರಿಸುವ ಬಗ್ಗೆ ಸಿಎಂ, ಗೃಹ ಸಚಿವರು ನಿರ್ಧಾರ ಮಾಡ್ತಾರೆ ಎಂದರು.

ಇಲ್ಲಿಗೆ ಗುಂಡಿ ತೋಡುವ ಕೆಲಸ ಮುಗಿಯಲಿದೆ: 

ಪ್ರಕರಣ ವಿಚಾರವಾಗಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಧರ್ಮಸ್ಥಳ ವಿಚಾರವಾಗಿ ಗೊಂದಲ ಇದ್ದಾಗಿಂದಲೂ ನೋಡಿದ್ದೇವೆ. ಅನಾಮಿಕ ಹೇಳಿದ ಕಡೆಗಳಲ್ಲಿ ಗುಂಡಿ ತೆರೆಯಲಾಗಿದೆ ಎಂದರು.

ಎಸ್​ಐಟಿ ಮಧ್ಯಂತರ ವರದಿ ಕೊಡಲ್ಲ‌. ಸಂಪೂರ್ಣ ವರದಿ ಸಿಎಂ ಪಡೆಯುತ್ತಾರೆ. ಮತ್ತೆ ಗುಂಡಿ ತೋಡುವ ಪ್ರಮೇಯ ಇಲ್ಲ ಅನಿಸುತ್ತಿದೆ. ಇಲ್ಲಿಗೆ ಗುಂಡಿ ತೋಡುವ ಕೆಲಸ ಮುಗಿಯಲಿದೆ. ಬಿಜೆಪಿ ಹಿಂದುತ್ವದ ಬಗ್ಗೆ ಗೊಂದಲ ಮೂಡಿಸುತ್ತಿದೆ. ಬಿಜೆಪಿ ಮಾತ್ರವಲ್ಲ, ನಾವೂ ಹಿಂದೂಗಳ ಪರವಾಗಿದ್ದೇವೆ. ನಾವೂ ಪ್ರತೀ ದಿನ ಪೂಜೆ ಪುನಸ್ಕಾರ ಮಾಡ್ತೇವೆ ಎಂದು ತಿಳಿಸಿದರು.

Karnataka Minister Dinesh Gundu Rao has questioned the identity and motives of the “anonymous informant” in the Dharmasthala human remains case, asking who is behind them and why the matter was sensationalised without concrete evidence.