ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ ; ಇಲೆಕ್ಟ್ರಾನಿಕ್ ಸಿಟಿಗಿನ್ನು ಸುಲಭದ ಹಾದಿ, ವಿದ್ಯಾರ್ಥಿಗಳು, ಸಾರ್ವಜನಿಕರ ಜೊತೆಗೆ ಮೋದಿ ಮೆಟ್ರೋ ಪಯಣ, ಸಿಎಂ, ಡಿಸಿಎಂ ಸಾಥ್

10-08-25 01:57 pm       Bangalore Correspondent   ಕರ್ನಾಟಕ

ಬೆಂಗಳೂರು ನಗರದ ಐಟಿ ಹಬ್‌ ಎನಿಸಿರುವ ಇಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ಆರ್‌.ವಿ. ರಸ್ತೆ- ಬೊಮ್ಮಸಂದ್ರ ನಡುವಿನ (19.15 ಕಿ.ಮೀ) ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು.

ಬೆಂಗಳೂರು, ಆ.10 : ಬೆಂಗಳೂರು ನಗರದ ಐಟಿ ಹಬ್‌ ಎನಿಸಿರುವ ಇಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ಆರ್‌.ವಿ. ರಸ್ತೆ- ಬೊಮ್ಮಸಂದ್ರ ನಡುವಿನ (19.15 ಕಿ.ಮೀ) ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಮಳೆಯ ನಡುವೆಯೇ ಪ್ರಧಾನಿ ಮೋದಿ ಹೊಸ ರೈಲು ಸೇವೆಗೆ ಚಾಲನೆ ನೀಡಿದರು. ಈ ಮಾರ್ಗದಲ್ಲಿ ಮೆಟ್ರೋ ರೈಲು ಸೋಮವಾರದಿಂದ ವಾಣಿಜ್ಯ ಸಂಚಾರ ಆರಂಭಿಸಲಿದೆ. 

ಮೋದಿಯವರು ಮೆಟ್ರೋ ರೈಲಿನ ಟಿಕೆಟ್ ಪಡೆದು ಸ್ವತಃ ಸ್ಕ್ಯಾನ್ ಮಾಡುವ ಮೂಲಕ ನಿಲ್ದಾಣ ಪ್ರವೇಶಿಸಿದ್ದು ವಿಶೇಷವಾಗಿತ್ತು. ಮೆಟ್ರೋ ಸಂಚಾರದ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಾಥ್ ನೀಡಿದ್ದಾರೆ. ಮೆಟ್ರೋ ನಿಗಮದ ಎಂಟು ಮಂದಿ ನೌಕರರು, ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರು ಕೂಡ ಪ್ರಧಾನಿ ಜೊತೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.‌ ಪ್ರಯಾಣದ ವೇಳೆ ಜೊತೆಗಿದ್ದ ಜನರ ಜೊತೆಗೆ ಹರಟುತ್ತಾ  ರಾಗುಗುಡ್ಡದಿಂದ ಇಲೆಕ್ಟ್ರಾನಿಕ್ ಸಿಟಿಯ ಕಾರ್ಯಕ್ರಮಕ್ಕೆ ಮೋದಿ ತೆರಳಿದರು. 

Prime Minister Narendra Modi interacts with students during the flag-off of the Yellow Line of Namma Metro, in Bengaluru. Karnataka Governor Thaawar Chand Gehlot and state Deputy Chief Minister DK Shivakumar also seen.Prime Minister Narendra Modi interacts with students during the flag-off of the Yellow Line of Namma Metro, in Bengaluru. Karnataka Governor Thaawar Chand Gehlot and state Deputy Chief Minister DK Shivakumar also seen.Prime Minister Narendra Modi interacts with students during the flag-off of the Yellow Line of Namma Metro, in Bengaluru. Karnataka Governor Thaawar Chand Gehlot and state Deputy Chief Minister DK Shivakumar also seen.Prime Minister Narendra Modi interacts with students during the flag-off of the Yellow Line of Namma Metro, in Bengaluru. Karnataka Governor Thaawar Chand Gehlot and state Deputy Chief Minister DK Shivakumar also seen.Prime Minister Narendra Modi interacts with students during the flag-off of the Yellow Line of Namma Metro, in Bengaluru. Karnataka Governor Thaawar Chand Gehlot and state Deputy Chief Minister DK Shivakumar also seen.Prime Minister Narendra Modi interacts with students during the flag-off of the Yellow Line of Namma Metro, in Bengaluru. Karnataka Governor Thaawar Chand Gehlot and state Deputy Chief Minister DK Shivakumar also seen.PM Modi flags off Namma Metro Yellow line from Bengaluru's Ragigudda, takes  first ride to Electronic City | Watch video | Today News

PM Modi inaugurates Bengaluru Metro Yellow Line & Vande Bharat Express

PM Narendra Modi flags off Bengaluru Metro's Yellow Line; here's what it  will offer commuters | Bengaluru News - Times of India

PM Modi purchases Metro ticket, flags off Yellow Line Services in Bengaluru

Bengaluru: PM Narendra Modi inaugurates Yellow line of Namma Metro Rail |  In Pics

Bengaluru: PM Narendra Modi inaugurates Yellow line of Namma Metro Rail |  In Pics

ಮೆಟ್ರೋ ಹಳದಿ ಮಾರ್ಗದ ಈ ಸೇವೆಯ ರೈಲುಗಳು ಚಾಲಕ ರಹಿತ ಸೇವೆಯಾಗಿರಲಿದೆ. ಪ್ರಧಾನಿ ಸಂಚಾರ ಸಂದರ್ಭದಲ್ಲಿ ಪೈಲಟ್ ವಿನುತಾ ಚಾಲಕನ ಸೀಟಿನಲ್ಲಿ ಇದ್ದರು. ಮೂರು ವರ್ಷದ ವಿಳಂಬದ ಬಳಿಕ ಹಳದಿ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ಸದ್ಯ ರೈಲುಗಳ ಕೊರತೆ ಇರುವುದರಿಂದ ಕೆಲವು ತಿಂಗಳ ಕಾಲ 20-25 ನಿಮಿಷಗಳ ಅಂತರದಲ್ಲಿ ರೈಲು ಸಂಚರಿಸುವ ಸಾಧ್ಯತೆಯಿದೆ. ನಿತ್ಯ ಸುಮಾರು 25 ರಿಂದ 30 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುವ ನಿರೀಕ್ಷೆಯಿದೆ. 

2026ರ ಮಾರ್ಚ್‌ ವೇಳೆಗೆ 12 ರೈಲು ಸೇರ್ಪಡೆ ಆಗಲಿದ್ದು, ಒಟ್ಟು 15 ರೈಲುಗಳು ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿವೆ. ಮುಂದಿನ ದಿಗಳಲ್ಲಿ ಟ್ರಿಪ್‌ಗಳ ಸಂಖ್ಯೆ ಕೂಡ ಹೆಚ್ಚಾಗಲಿದ್ದು, ನಿತ್ಯ 3.5 ಲಕ್ಷ ಮಂದಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್‌ ಅಂದಾಜಿಸಿದೆ.

ಸದ್ಯಕ್ಕೆ ಹೊಸ ಹಳದಿ ಮಾರ್ಗದ ಟಿಕೆಟ್‌ ದರ, ರೈಲುಗಳ ಸಂಚಾರದ ಅವಧಿಯನ್ನು ಬೆಂಗಳೂರು ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅಧಿಕೃತವಾಗಿ ಒದಗಿಸಿಲ್ಲ. ರಾಗಿಗುಡ್ಡದಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ವರೆಗೆ (ಸಿಎಸ್‌ಬಿ) ಡಬ್ಬಲ್‌ ಡೆಕ್ಕರ್ (3.3 ಕಿ.ಮೀ.) ನಿರ್ಮಿಸಲಾಗಿದೆ. ಡಬ್ಬಲ್‌ ಡೆಕ್ಕರ್‌ ಫ್ಲೈಓವರ್‌ನ ಮೇಲ್ಭಾಗದಲ್ಲಿ ನಮ್ಮ ಮೆಟ್ರೋ ರೈಲು ಓಡಾಡಲಿದೆ. ಕೆಳಭಾಗ ವಾಹನಗಳ ಓಡಾಟಕ್ಕೆ ಮೀಸಲಾಗಿದೆ. ಜತೆಗೆ ಈ ಮಾರ್ಗದ ಜಯದೇವ ಇಂಟರ್‌ ಚೇಂಜ್‌ ಮೆಟ್ರೋ ನಿಲ್ದಾಣ ಅತೀ ಎತ್ತರದ ಮೆಟ್ರೋ ನಿಲ್ದಾಣ ಎನ್ನಿಸಿದ್ದು ಐದು ಹಂತದ ಸಾರಿಗೆ ವ್ಯವಸ್ಥೆ ನಿರ್ಮಾಣವಾಗಿದೆ. 2026ರ ಡಿಸೆಂಬರ್‌ಗೆ ಈ ಮಾರ್ಗ ಉದ್ಘಾಟನೆ ಆಗಲಿದ್ದು, ಬಳಿಕವಷ್ಟೆ ಇದರ ಪೂರ್ಣ ಬಳಕೆ ಆಗಲಿದೆ.

Prime Minister Narendra Modi flagged off the much-delayed Yellow Line of Bengaluru’s Namma Metro, connecting R.V. Road Metro Station to Bommasandra. At Ragigudda Metro Station, he flagged off the train, tried the QR code-enabled ticket vending machines and also boarded the inaugural service to Electronic City.