Accident in Chitradurga: ಟಾಟಾ ಏಸ್ ಗಾಡಿ ಹರಿದು 3 ವರ್ಷದ ಮಗು ಬಲಿ ; ಶಾಲೆಗೆ ತೆರಳುತ್ತಿದ್ದ ವೇಳೆ ದುರಂತ 

18-07-25 08:01 pm       HK News Desk   ಕರ್ನಾಟಕ

ಟಾಟಾ ಏಸ್ ಹರಿದು 3 ವರ್ಷದ ಮಗು ಜೀವಬಿಟ್ಟಿರೋ ಘಟನೆ ಜೋಗಿಮಟ್ಟಿ ರಸ್ತೆಯ ನಾಲ್ಕನೇ ಕ್ರಾಸ್ ಬಳಿ ನಡೆದಿದೆ. 

ಚಿತ್ರದುರ್ಗ, ಜುಲೈ 18 : ಟಾಟಾ ಏಸ್ ಹರಿದು 3 ವರ್ಷದ ಮಗು ಜೀವಬಿಟ್ಟಿರೋ ಘಟನೆ ಜೋಗಿಮಟ್ಟಿ ರಸ್ತೆಯ ನಾಲ್ಕನೇ ಕ್ರಾಸ್ ಬಳಿ ನಡೆದಿದೆ. ಅರತ್ ಬೋರ (3) ಮೃತ ಮಗು.

ತಂದೆಯ ಜೊತೆ ಶಾಲೆಗೆ ತೆರಳುತ್ತಿದ್ದ ವೇಳೆ ಓವರ್ ಟೇಕ್ ಮಾಡಲು ಹೋಗಿ ಈ ದುರ್ಘಟನೆ ನಡೆದಿದೆ. ಟಾಟಾ ಏಸ್​ಗೆ ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಬೈಕ್ ಜಲ್ಲಿ ರಾಶಿಯ ಮೇಲೆ ಬಿದ್ದಿದೆ. ಇದೇ ವೇಳೆ ಹಿಂಬದಿಯಿಂದ ಬಂದ ಟಾಟಾ ಏಸ್ ರಸ್ತೆ ಮೇಲೆ ಬಿದ್ದ ಮಗುವಿನ ಮೇಲೆ ಹರಿದಿದೆ.

ಗಂಭಿರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಮೃತಪಟ್ಟಿದೆ.

In a heartbreaking incident, a 3-year-old child lost his life after being run over by a Tata Ace vehicle near the 4th Cross on Jogimatti Road in Chitradurga. The deceased has been identified as Arath Bor, aged 3.