ಬ್ರೇಕಿಂಗ್ ನ್ಯೂಸ್
            
                        15-07-25 12:27 pm Bangalore Correspondent ಕರ್ನಾಟಕ
            ಬೆಂಗಳೂರು, ಜುಲೈ 15 : ನಟಿ ಸರೋಜಾ ದೇವಿ ಕನ್ನಡ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ಆಗ ಚಿರ ಯೌವ್ವನಿಗರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಡುವೆ ಪ್ರೀತಿ ಅರಳಿತ್ತು. ಇಬ್ಬರ ನಡುವಿನ ಒಲವು ಮದುವೆ ಹಂತಕ್ಕೂ ಬಂದಿತ್ತು. ರಾಜಕೀಯ ರಂಗಕ್ಕೆ ಆಗಷ್ಟೇ ಪಾದಾರ್ಪಣೆ ಮಾಡಿದ್ದ ಕೃಷ್ಣ ಅವರ ಈ ಸಂಬಂಧ ಕೊನೆಕ್ಷಣದಲ್ಲಿ ಮುರಿದು ಬಿದ್ದಿತ್ತು.
ಬುದ್ದಿವಂತಿಕೆ, ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಕೃಷ್ಣ ಅವರು ನಾಲ್ಕು ಭಾಷೆಗಳ ನಟಿ ಸರೋಜಾ ದೇವಿಯವರ ಹೃದಯವನ್ನೂ ಗೆದ್ದಿದ್ದರು. ಆಗಿನ ಕಾಲದಲ್ಲಿ ಇವರ ನಡುವಿನ ಪ್ರೀತಿ ಸಾಕಷ್ಟು ಚರ್ಚೆಯನ್ನೂ ಹುಟ್ಟುಹಾಕಿತ್ತು. ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಸ್.ಎಂ. ಕೃಷ್ಣ ಯುವ ನಾಯಕರಾಗಿದ್ದಾಗ ಬಿ. ಸರೋಜಾದೇವಿ ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರರಂಗದ ಖ್ಯಾತ ನಟಿಯಾಗಿ ಬೆಳೆದಿದ್ದರು. ಅವರ ಸೌಂದರ್ಯ ಮತ್ತು ಅಭಿನಯ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿತ್ತು. ಇದೇ ವೇಳೆ ಎಸ್.ಎಂ ಕೃಷ್ಣ ಮತ್ತು ಸರೋಜಾದೇವಿ ನಡುವೆ ಪ್ರೇಮಾಂಕುರವಾಗಿತ್ತು. ಅಲ್ಲದೆ, ಈ ವಿಷಯ ಮದುವೆ ಹಂತದ ವರೆಗೂ ಬಂದು ಕೊನೆಗೆ ಮುರಿದು ಬಿದ್ದಿತ್ತು.
![]()

ಮದುವೆಯ ವಿಚಾರದಲ್ಲಿ ಎಸ್. ಎಂ. ಕೃಷ್ಣ ಕುಟುಂಬ ಹಾಗೂ ಬಿ.ಸರೋಜಾದೇವಿ ಕುಟುಂಬಗಳ ನಡುವೆ ಪ್ರಾಥಮಿಕ ಮಾತುಕತೆಯೂ ನಡೆದಿತ್ತು. ಆದರೆ, ಇವರ ವಿವಾಹಕ್ಕೆ ಕೃಷ್ಣ ಕುಟುಂಬದಲ್ಲಿ ಒಪ್ಪಿಗೆ ಸಿಕ್ಕಿರಲಿಲ್ಲ. ಸಿನಿಮಾ ರಂಗದ ಯುವತಿಯನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು ಎಸ್.ಎಂ.ಕೃಷ್ಣ ಕುಟುಂಬದ ಹಿರಿಯರು ಒಲವು ತೋರಿರಲಿಲ್ಲ. ಹೀಗಾಗಿ ಸರೋಜಾ ದೇವಿ ಹಾಗೂ ಎಸ್.ಎಂ.ಕೃಷ್ಣ ನಡುವೆ ವಿವಾಹ ಸಂಬಂಧ ಏರ್ಪಡಲಿಲ್ಲ ಎಂದು ಎಸ್.ಎಂ.ಕೃಷ್ಣ ಸೋದರ ಎಸ್. ಎಂ. ಶಂಕರ್ ಹಿಂದೊಮ್ಮೆ ಹೇಳಿದ್ದರು.

)
)
ಇದೇ ವಿಷಯವನ್ನು ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್, ತಮ್ಮ ಆತ್ಮಕಥನ "ಹಳ್ಳಿ ಹಕ್ಕಿಯ ಹಾಡು" ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಎಸ್.ಎಂ ಕೃಷ್ಣ ಹಾಗೂ ಸರೋಜಾ ದೇವಿ ನಡುವಿನ ಪ್ರೇಮ ಪ್ರಸಂಗದ ಬಗ್ಗೆ ಉಲ್ಲೇಖಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಬಗ್ಗೆ ಕೃಷ್ಣ ಆಗಲೀ, ಸರೋಜಾದೇವಿ ಆಗಲೀ ಪ್ರಸ್ತಾಪಿಸದೇ ಇದ್ದುದರಿಂದ ವಿವಾದ ಆಗದೇ ಮುಚ್ಚಿ ಹೋಗಿತ್ತು.
ಇದಕ್ಕೆ ಕಾರಣವೂ ಇದೆ. ಈ ಚರ್ಚೆ ಬಂದಾಗ ಎಸ್.ಎಂ.ಕೃಷ್ಣ ಮಹಾರಾಷ್ಟ್ರದಲ್ಲಿ ರಾಜ್ಯಪಾಲ ಹುದ್ದೆಯಲ್ಲಿದ್ದರು. ಹಾಗಾಗಿ ಮಾಮೂಲೀ ರಾಜಕಾರಣಿ ರೀತಿ ಎಸ್.ಎಂ.ಕೃಷ್ಣ ಪ್ರತಿಕ್ರಿಯೆ ನೀಡುವಂತಿರಲಿಲ್ಲ. ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದರು. ಆದರೆ, ಕೃಷ್ಣ ಅವರ ಪತ್ನಿ ಪ್ರೇಮಾ ಅವರು ಪತ್ರಿಕಾ ಹೇಳಿಕೆ ಕೊಟ್ಟು ವಿವಾದಕ್ಕೆ ತೆರೆ ಎಳೆದಿದ್ದರು. ಸರೋಜಾದೇವಿ ಅವರನ್ನು ಎಸ್.ಎಂ.ಕೃಷ್ಣ ಅವರ ಜೊತೆ ಮದುವೆ ಮಾಡುವ ಪ್ರಸ್ತಾಪ ಬಂದಿತ್ತು. ಆದರೆ, ಎಸ್.ಎಂ.ಕೃಷ್ಣ ಮನೆಯಲ್ಲಿ ಸಿನಿಮಾ ಹಿನ್ನಲೆಯವರನ್ನು ಸೊಸೆಯನ್ನಾಗಿ ಮಾಡಿಕೊಳ್ಳಲು ಹಿರಿಯರು ಒಪ್ಪದೇ ಇದ್ದುದರಿಂದ ವಿಷಯ ಅಲ್ಲಿಗೇ ಮುಗಿದಿತ್ತು ಎಂದು ಸ್ಪಷ್ಟನೆ ನೀಡಿದ್ದರು.
ಸರೋಜಾದೇವಿ ಪುಸ್ತಕದಲ್ಲಿ ಹಳೆ ವಿಚಾರ ದಾಖಲಿಸಿದ್ದನ್ನು ಕೇಳಿ ಗರಂ ಆಗಿದ್ದರಂತೆ. ಆದರೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಲು ಮುಂದಾಗಿರಲಿಲ್ಲ. ಕೃಷ್ಣ ಅವರು ಪ್ರೇಮಾ ಅವರನ್ನು ಮದುವೆಯಾಗಿದ್ದರೆ, ನಟಿ ಸರೋಜಾದೇವಿ 1967ರಲ್ಲಿ ಶ್ರೀಹರ್ಷ ಎಂಬ ಜರ್ಮನಿಯ ಎಂಜಿನಿಯರ್ ರನ್ನು ಮದುವೆಯಾಗಿದ್ದರು. ಆದರೆ ಹರ್ಷ ಮದುವೆಯಾದ ಕೆಲವು ವರ್ಷಗಳಲ್ಲೇ ಹೃದಯಾಘಾತದಿಂದ ಸಾವು ಕಂಡಿದ್ದರು. ಅನಂತರ ಎರಡನೇ ಮದುವೆ ಆಫರ್ ಬಂದರೂ ಸರೋಜಾದೇವಿ ಒಬ್ಬಂಟಿಯಾಗಿಯೇ ದೀರ್ಘ ಜೀವನ ಕಳೆದಿದ್ದರು.
            
            
            In a lesser-known chapter of Karnataka’s social and political history, a romantic relationship once blossomed between celebrated actress B. Saroja Devi and former Chief Minister S.M. Krishna. At the peak of her film career and as Krishna was emerging as a dynamic young leader, the two shared a deep bond that reportedly came close to culminating in marriage. However, the relationship fell apart at the last moment due to family opposition.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm