ಬ್ರೇಕಿಂಗ್ ನ್ಯೂಸ್
12-07-25 07:07 pm Bangalore Correspondent ಕರ್ನಾಟಕ
ಬೆಂಗಳೂರು, ಜು 12 : ಬಿಬಿಎಂಪಿಯಿಂದ ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡುವ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದರ ಬಗ್ಗೆ ಈಗ ಪರ- ವಿರೋಧ ಚರ್ಚೆ ನಡೆಯುತ್ತಿದೆ. ಪ್ರಾಣಿ ಪ್ರಿಯರು ಬೀದಿನಾಯಿಗಳಿಗೆ ಚಿಕನ್ ರೈಸ್ ನೀಡುವುದಕ್ಕೆ ಬೆಂಬಲ ಸೂಚಿಸಿದರೇ, ಮತ್ತೆ ಕೆಲವರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಬೆಂಗಳೂರಿನ ಬಡಜನರಿಗೆ ಸರಿಯಾಗಿ ಮೊದಲು ಪೌಷ್ಠಿಕಾಂಶದ ಊಟ ನೀಡಬೇಕು. ಬೀದಿ ನಾಯಿಗಳಿಗೆ ಬಿಬಿಎಂಪಿಯೇ ಚಿಕನ್ ರೈಸ್ ನೀಡಿದ್ರೆ, ಚಿಕನ್ ರೈಸ್ ಸಿಗದಿದ್ದಾಗ, ಬೀದಿನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಆಗ ನಮ್ಮೆಲ್ಲರ ಗತಿ ಏನು ಎಂಬ ಪ್ರಶ್ನೆಯನ್ನು ಜನರು ಎತ್ತಿದ್ದಾರೆ.
ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡುವ ಯೋಜನೆಗೆ 2.80 ಕೋಟಿ ರೂಪಾಯಿ ಹಣ ಖರ್ಚು ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಆದರೇ, ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡಲು ರಾಜ್ಯ ಸರ್ಕಾರದ ಬಳಿ ಇಲ್ಲದೇ, ದಾನಿಗಳನ್ನು ಹುಡುಕುತ್ತಿದೆ. ಇಂಥ ಸ್ಥಿತಿಯಲ್ಲಿ ಬೀದಿ ನಾಯಿಗಳಿಗೆ 2.80 ಕೋಟಿ ರೂಪಾಯಿ ಹಣ ಖರ್ಚು ಮಾಡಿ ಚಿಕನ್ ರೈಸ್ ನೀಡಬೇಕೇ ಎಂದು ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಓರ್ವ ವಿದ್ಯಾರ್ಥಿಗೆ ಬಿಸಿಯೂಟ ನೀಡಲು 12 ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ, ಬೀದಿ ನಾಯಿಯೊಂದಕ್ಕೆ ಚಿಕನ್ ರೈಸ್ ನೀಡಲು 24 ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಅಂಕಿ ಅಂಶ ಸಮೇತ ಬೀದಿ ನಾಯಿ ಚಿಕನ್ ರೈಸ್ ಯೋಜನೆಯನ್ನ ಶಾಸಕ ರಾಮಮೂರ್ತಿ ತೀವ್ರವಾಗಿ ವಿರೋಧಿಸಿದ್ದಾರೆ.
ಕಾಂಗ್ರೆಸ್ ಸರ್ಕಾರವು ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಬದಲಾಗಿ 'ಬಿರಿಯಾನಿ ಬೆಂಗಳೂರು' ಮಾಡಲು ಹೊರಟಿದೆ.
ಚಿಕನ್ ಬಿರಿಯಾನಿ ಕೊಡುವ ಔಚಿತ್ಯ ಏನು? ಇದಕ್ಕೆ ಯಾರು ಯೋಜನೆ ನಿರೂಪಿಸಿದ್ದಾರೆ?. ದಯಮಾಡಿ ಬಿಬಿಎಂಪಿ ಕಮಿಷನರ್ ಮತ್ತು ಬೆಂಗಳೂರು ಉಸ್ತುವಾರಿ ಸಚಿವರು ಸ್ಪಷ್ಟನೆ ಕೊಡಬೇಕೆಂದು ಒತ್ತಾಯಿಸಿದರು.
ನಾಯಿಗಳಿಗೆ ಆಹಾರ ಹಾಕುವುದಕ್ಕೆ ನಮ್ಮ ತಕರಾರಿಲ್ಲ. ಬೆಂಗಳೂರಿನ ಬೀದಿನಾಯಿಗಳಿಗೆ ಹಲವಾರು ವರ್ಷಗಳಿಂದ ಎನ್‍ಜಿಒಗಳು, ದಾನಿಗಳು, ಯಾರೋ ಮನೆಯವರು, ಹೋಟೆಲ್ ಮಾಲೀಕರು ಆಹಾರ ನೀಡುತ್ತಿದ್ದರು. ಆದರೆ, ದುಡ್ಡು ಹೊಡೆಯಲು ಹಾಗೂ ಜನರ ತೆರಿಗೆ ಹಣವನ್ನು ಪೋಲು ಮಾಡುವ ರೀತಿಯಲ್ಲಿ ಯೋಜನೆ ಇದ್ದು, ಇದರ ಹಿಂದಿನ ಮರ್ಮ ಏನು? ಇದಕ್ಕೆ ಯಾರು ಸಹಕಾರ ಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದರು.
ನಾಯಿಗಳ ಮಧ್ಯೆ ಸಂಘರ್ಷ:
ಆಹಾರ ಪಡೆಯುವ ನಾಯಿಗಳು ಮಾಡಿದ ಪುಣ್ಯವೇನು?. ಆ ನಾಯಿಗೆ ತಂಗಳನ್ನ, ಈ ನಾಯಿಗೆ ಬಿರಿಯಾನಿ ಹಾಕುತ್ತೀರಿ. ನಾಯಿ ನಾಯಿಯಲ್ಲೇ ಭೇದ ಮಾಡುವುದೇಕೆ?. ಬೀದಿ ನಾಯಿಗಳ ಮಧ್ಯೆಯೇ ಒಂದು ರೀತಿಯ ಸಂಘರ್ಷ ತರಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಬ್ರ್ಯಾಂಡ್ ಬೆಂಗಳೂರಿನ ಮೊದಲನೇ ಮೆಟ್ಟಿಲಾಗಿ ನಾಯಿಗಳಿಗೆ ಬಿರಿಯಾನಿ ಕೊಡಲಿದ್ದು, ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುವುದಾಗಿ ಕುಟುಕಿದರು. ಈ ಯೋಜನೆ ರೂಪಿಸಿದ ಮಹಾತ್ಮನಿಗೆ ಪ್ರಶಸ್ತಿ ಕೊಡಬೇಕು. ಇಲ್ಲಿನವರೆಗೆ ನಾಯಿಪ್ರಿಯರು, ಎನ್.ಜಿ.ಒ.ಗಳು ಆಹಾರ ಹಾಕಿದ್ದಾರೆ. ಇದೀಗ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಕೊಡಲು ದುಡ್ಡಿಲ್ಲದೇ ದಾನಿಗಳನ್ನು ನೋಡುತ್ತಿರುವುದಾಗಿ ಶಿಕ್ಷಣ ಸಚಿವರೇ ಹೇಳಿದ್ದಾರೆ. ಇನ್ನೊಂದೆಡೆ ನಾಯಿಗೆ ಬಿರಿಯಾನಿ ಹಾಕುವುದು ಎಷ್ಟರಮಟ್ಟಿಗೆ ಸಮಂಜಸ? ಈ ಯೋಜನೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.
The Bruhat Bengaluru Mahanagara Palike (BBMP) has drawn sharp criticism over its new plan to serve chicken rice to stray dogs across the city. The civic body has reportedly allocated ₹2.8 crore for this initiative, which has triggered a heated debate between animal lovers and those who question the government’s spending priorities.
12-07-25 10:47 pm
HK News Desk
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
ಸಿಎಂ ಬದಲಾವಣೆ ಎಲ್ಲ ಮುಗಿದ ಕಥೆ, ಸೆಪ್ಟೆಂಬರ್ನಲ್ಲಿ...
11-07-25 05:41 pm
24 ಗಂಟೆಯಲ್ಲಿ ಭಟ್ಕಳ ನಗರವನ್ನು ಸ್ಫೋಟಿಸುತ್ತೇನೆ ;...
11-07-25 04:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
12-07-25 11:00 pm
Mangalore Correspondent
Mangalore Accident, Bolero, Deralakatte: ದೇರಳ...
12-07-25 10:26 pm
Gas Leak at MRPL, Mangalore, death: ಎಂಆರ್ ಪಿಎ...
12-07-25 01:42 pm
Dharmasthala News, Dead bodies, Court: ಧರ್ಮಸ್...
11-07-25 08:55 pm
Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕ...
10-07-25 07:23 pm
12-07-25 11:10 pm
Mangalore Correspondent
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm
ಮಂಗಳೂರಿಗೆ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಡ್ರಗ್ಸ್...
11-07-25 07:13 pm