ಬ್ರೇಕಿಂಗ್ ನ್ಯೂಸ್
11-06-25 09:35 pm HK News Desk ಕರ್ನಾಟಕ
ಹಾಸನ, ಜೂ.11 : ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವ ಯುವಜನರ ಸಂಖ್ಯೆ ಏರುತ್ತಿದ್ದು ಕಳೆದೆರಡು ತಿಂಗಳಲ್ಲಿ ನಾಲ್ವರು ಯುವಕರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದೀಗ 19 ವರ್ಷದ ನಿಶಾಂತ್ ಎಂಬ ಮತ್ತೊಬ್ಬ ಯುವಕ ಹೃದಯಾಘಾತಕ್ಕೆ ತುತ್ತಾಗಿದ್ದಾನೆ.
ಹೊಳೆನರಸೀಪುರ ಪಟ್ಟಣದ ನಿವಾಸಿಗಳಾದ ಚನ್ನಕೇಶವ ಮತ್ತು ಜ್ಯೋತಿ ದಂಪತಿಯ ಪುತ್ರ ನಿಶಾಂತ್ (19) ಬೆಂಗಳೂರಿನ ಜೆಪಿ ನಗರದಲ್ಲಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾನೆ. ಡಿಪ್ಲೋಮಾ ವ್ಯಾಸಂಗ ಮುಗಿಸಿದ್ದ ನಿಶಾಂತ್, ಕೈಗಾರಿಕಾ ತರಬೇತಿಗಾಗಿ 15 ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿ ಪಿಜಿಯಲ್ಲಿ ವಾಸವಿದ್ದ. ಜೂನ್ 11ರಂದು ಬೆಳಗ್ಗೆ ತನ್ನ ಕೋಣೆಯಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

ಬೆಳಗ್ಗೆ 10 ಗಂಟೆಯಾದರೂ ನಿಶಾಂತ್ ಬಾಗಿಲನ್ನು ತೆರೆಯದ ಕಾರಣ, ಸ್ನೇಹಿತರು ಬಾಗಿಲು ಒಡೆದು ನೋಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಮೃತದೇಹವನ್ನು ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಅವನ ಪೋಷಕರು ಮೃತದೇಹವನ್ನು ಹಾಸನಕ್ಕೆ ತರಲಿದ್ದಾರೆ. ಕೊರೊನಾ ಸಂದರ್ಭದಲ್ಲಿ ನಿಶಾಂತ್ ತಾಯಿ ಜ್ಯೋತಿ ಸಾವಿಗೀಡಾಗಿದ್ದರು.
ಹಾಸನದಲ್ಲಿ ಹೃದಯಾಘಾತ ಹೆಚ್ಚಳ
ಹಾಸನ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಐವರು ಯುವಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೆಲವತ್ತಿ ಗ್ರಾಮದ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕವನ ಕೆ.ವಿ., ಹೊಳೆನರಸೀಪುರದ ಮಡಿವಾಳ ಬಡಾವಣೆಯ ಸಂಧ್ಯಾ, ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಅಭಿಷೇಕ್ ಮತ್ತು ಹಾಸನ ತಾಲೂಕಿನ ಅಗಲಹಳ್ಳಿ ಕೊಪ್ಪಲು ಗ್ರಾಮದ ನವೀನ್ ಕುಮಾರ್ (21) ಹೃದಯಾಘಾತಕ್ಕೆ ಬಲಿಯಾಗಿದ್ದರು. ಇದೀಗ ನಿಶಾಂತ್ ಸಾವು ಆತಂಕ ಹೆಚ್ಚಿಸಿದೆ.
In a concerning trend, Hassan district has witnessed a sharp rise in heart attack-related deaths among young people, with five reported fatalities in the last two months. The latest victim is 19-year-old Nishanth, a resident of Holenarasipura town, who died of a sudden heart attack in Bengaluru.
30-12-25 11:12 pm
HK News Desk
ಬಯೋಕಾನ್ ಕಂಪನಿ ಟೆಕ್ಕಿ ಆಫೀಸ್ ಕಟ್ಟಡದ ಆರನೇ ಮಹಡಿಯಿ...
30-12-25 10:14 pm
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾ...
30-12-25 06:34 pm
ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ಮದುವೆ ನಿಶ್ಚಿತಾರ್ಥ...
30-12-25 05:44 pm
ಕೇರಳದಲ್ಲಿ ಚುನಾವಣೆಯಾದ್ರೆ ಪಿಣರಾಯಿಗೆ ಕರ್ನಾಟಕದಲ್ಲ...
30-12-25 05:10 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
30-12-25 10:43 pm
Mangalore Correspondent
ಯುವತಿಗೆ ಮಗು ಕರುಣಿಸಿದ ಪ್ರಕರಣ ; ಬಿಜೆಪಿಯಿಂದ ಜಗನ್...
29-12-25 11:03 pm
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವ...
29-12-25 07:37 pm
ಉಡುಪಿ ; ಬುದ್ದಿ ಮಾತು ಹೇಳಿದ್ದಕ್ಕೆ 17 ವರ್ಷದ ಯುವತ...
29-12-25 01:24 pm
30-12-25 10:40 pm
Mangalore Correspondent
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm