ಬ್ರೇಕಿಂಗ್ ನ್ಯೂಸ್
09-06-25 03:02 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 9 : ಬಿಜೆಪಿಯವರು ಎನ್ಐಎ ದಳವನ್ನು ಹಾಸ್ಯಾಸ್ಪದವಾಗಿ ಮಾಡ್ತಿದ್ದಾರೆ. ಗಂಭೀರವಾದ ಪ್ರಕರಣ ಎನ್ ಐಎಗೆ ವಹಿಸಿದ್ರೆ ಗಂಭೀರತೆ ಇರುತ್ತೆ. ಸುಹಾಸ್ ಶೆಟ್ಟಿ ರೌಡಿಶೀಟರ್. ಇಂಥವರಿಗೆ ಎನ್ಐಎ ಮೂಲಕ ರಕ್ಷಣೆ ಕೊಡ್ತಾ ಹೋದ್ರೆ ಕರ್ನಾಟಕ ಯುಪಿ, ಬಿಹಾರ ಆಗುತ್ತೆ. ನಾವಿದನ್ನು ಸುಪ್ರೀಂ ಕೋರ್ಟಿಗೂ ಒಯ್ಯುತ್ತೇವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಅಲ್ಲಿ ಪ್ರತೀಕಾರಕ್ಕಾಗಿ ಕೊಲೆಗಳಾಗಿವೆ. ಸುಹಾಸ್ ಶೆಟ್ಟಿ ಮೇಲೂ ಎರಡು ಕೊಲೆ ಕೇಸ್ ಇದೆ. ಫಾಜಿಲ್ ಮತ್ತು ಇನ್ನೊಬ್ಬ ದಲಿತ ಹುಡುಗ ಕೀರ್ತಿ ಅನ್ನೋನನ್ನು ಕೊಲೆ ಮಾಡಿದ್ದು. ಆ ಕೇಸನ್ನೂ ಎನ್ಐಎ ತನಿಖೆ ಮಾಡುತ್ತಾ.. ಎನ್ಐಎ ಇರೋದು ಭಯೋತ್ಪಾದಕ ಕೃತ್ಯಗಳ ತನಿಖೆಗೆ. ರೌಡಿಗಳ ಹತ್ಯೆ, ರಾಜಕೀಯ ಹತ್ಯೆಗಳನ್ನೆಲ್ಲ ಎನ್ಐಎ ತನಿಖೆ ಮಾಡೋದಾ. ಅದಕ್ಕೆ ರಾಜ್ಯ ಪೊಲೀಸರಿಲ್ವಾ. ಮಹಾರಾಷ್ಟ್ರ ನಂತರ ಇಡೀ ದೇಶದಲ್ಲಿ ಕರ್ನಾಟಕ ಪೊಲೀಸರು ಹೆಚ್ಚು ದಕ್ಷರಿದ್ದಾರೆ. ಹಾಗಿದ್ದ ಮೇಲೆ ಒಂದು ಕೊಲೆ ಕೇಸನ್ನು ತನಿಖೆ ಮಾಡೋಕೆ ಎನ್ಐಎ ಬರಬೇಕಾ ಎಂದು ಪ್ರಶ್ನೆ ಮಾಡಿದರು.
ಕೋಮುವಾದ, ಕೋಮು ಹತ್ಯೆಯನ್ನು ವೈಭವೀಕರಿಸುವ ದೊಡ್ಡ ಹುನ್ನಾರ ಇದರ ಹಿಂದಿದೆ. ಇದಕ್ಕೆಲ್ಲ ಅವಕಾಶ ಕೊಟ್ಟರೆ ಮತ್ತಷ್ಟು ಕೋಮು ದಳ್ಳುರಿ ಆಗಬಹುದು ಎಂದ ಅವರು, ಇಲ್ಲಿ ಕೊಲೆ ಆಗಿರೋರು, ಜೈಲಿಗೆ ಹೋಗಿರೋರು ಕೇವಲ ಪಾತ್ರಧಾರಿಗಳು. ಸೂತ್ರಧಾರಿಗಳು ಯಾರೂ ಜೈಲಿಗೆ ಹೋಗಿಲ್ಲ. ವಿನಾಯಕ ಬಾಳಿಗ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತ. ಆತನನ್ನು ನಮೋ ಬ್ರಿಗೇಡ್ ಅಧ್ಯಕ್ಷ ನರೇಶ್ ಶೆಣೈ ಹತ್ಯೆ ಮಾಡಿಸಿದ್ದ. ಬಾಳಿಗಾ ಅಕ್ಕ ತಂಗಿಯರು ನನ್ನ ಬಳಿ, ಸಿಕ್ಕ ಸಿಕ್ಕ ಕಡೆಗೆಲ್ಲಾ ಹೋಗಿ ನ್ಯಾಯ ಕೊಡಿಸಿ ಅಂತಾ ಕೇಳಿಕೊಂಡ್ರು. ಬಾಳಿಗಾ ಹತ್ಯೆಯನ್ನು ಎನ್ಐಎ ತನಿಖೆ ಮಾಡಿಸಬೇಕಿತ್ತು. ಹತ್ಯೆಗೈದ ನರೇಶ್ ಶೆಣೈ ರಾಜಾರೋಷ ತಿರುಗಾಡ್ತಾನೆ. ಹತ್ಯೆ ಮಾಡಿದವರು ಜೈಲಿನಲ್ಲಿದ್ದಾರೆ. ಇವರೆಲ್ಲ ತಮ್ಮ ಸ್ವಾರ್ಥಕ್ಕೋಸ್ಕರ ಹಿಂದುಳಿದವರನ್ನು ಬಳಸಿಕೊಳ್ಳುತ್ತಿದ್ದಾರೆ.
ನಾವು ಈ ಕೇಸನ್ನು ಸುಪ್ರೀಂ ಕೋರ್ಟ್ ವರೆಗೂ ತೆಗೆದುಕೊಂಡು ಹೋಗ್ತೀವಿ. ಎನ್ ಐಎ ತನಿಖೆ ಮಾಡ್ತಿರೋ ಮನುಷ್ಯ ಫಾಸಿಲ್ ಕೊಲೆ ಅಪರಾಧಿ. ಇವೆಲ್ಲಾ ಪ್ರತೀಕಾರದ ಕೊಲೆಗಳು. ಈ ಎಲ್ಲಾ ಕೊಲೆಗಳನ್ನ ಎನ್ ಐಎ ತನಿಖೆ ಮಾಡುತ್ತಾ ಎಂದು ಪ್ರಶ್ನೆ ಮಾಡಿದರು. ಎನ್ಐಎ ತನಿಖೆ ಕೊಡುವುದು ಕೇಂದ್ರ ಗೃಹ ಸಚಿವ. ಅಮಿತಾ ಷಾರನ್ನು ಫೇಕ್ ಎನ್ಕೌಂಟರ್ ಕೇಸಲ್ಲಿ ಎರಡು ವರ್ಷ ಗುಜರಾತಿಗೆ ಹೋಗಬಾರದು ಅಂತ ಸುಪ್ರೀಂ ಕೋರ್ಟ್ ನಿಷೇಧ ಹಾಕಿತ್ತು. ಅಂಥವರು ಈಗ ಎನ್‌ಐಎಯನ್ನು ದುರುಪಯೋಗ ಮಾಡುತ್ತಿದ್ದಾರೆ.
ಸುಹಾಸ್ ಶೆಟ್ಟಿಯನ್ನ ರೌಡಿಶೀಟರ್ ಲಿಸ್ಟ್ ಗೆ ಸೇರಿಸಿದ್ದು ಬಿಜೆಪಿಯವ್ರೇ. ಈಗ ರೌಡಿ ಮೋರ್ಚಾ ಮಾಡಿ ಎನ್ಐಎ ಮೂಲಕ ರಕ್ಷಣೆ ಕೊಡ್ತಿದ್ದಾರೆ. ಇಂಥವರಿಗೆಲ್ಲ ರಕ್ಷಣೆ ಕೊಡ್ತಾ ಹೋದ್ರೆ ಕರ್ನಾಟಕ ಯುಪಿ, ಬಿಹಾರ ಆಗುತ್ತೆ. ಇಂಥ ಕೊಲೆ ಸರಣಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಮಣಿಪುರ ಆಗಬಹುದು ಎಂದಿದ್ದೆ. ಈ ರೀತಿ ಕೋಮು ದ್ವೇಷದ ತನಿಖೆ ಮಾಡಿಸಿದರೆ ಇನ್ನೇನಾಗಬಹುದು. ನಾವು ಇದನ್ನು ಎಷ್ಟು ಮಾತ್ರಕ್ಕೂ ಒಪ್ಪಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
Senior Congress leader BK Hariprasad launched a scathing attack on the BJP over the transfer of the Suhas Shetty murder case to the National Investigation Agency (NIA), warning that if such practices continue, Karnataka could begin to resemble states like Bihar or Uttar Pradesh in terms of law and order.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am