ಬ್ರೇಕಿಂಗ್ ನ್ಯೂಸ್
05-06-25 09:27 pm HK News Desk ಕರ್ನಾಟಕ
ಶಿವಮೊಗ್ಗ, ಜೂನ್ 5 : ಭದ್ರತಾ ವೈಫಲ್ಯದಿಂದ, ಈ ಕೆಟ್ಟ ಸರ್ಕಾರ ಮಾಡಿರುವ ಅಪಚಾರದಿಂದ 11 ಜನ ಮೃತಪಟ್ಟಿದ್ದಾರೆ. ಮೊನ್ನೆ ದಿನ ಕಪ್ಪು ಗೆದ್ದಾಗಲೇ ಉನ್ಮಾದದ ಸ್ಥಿತಿಗೆ ಜನ ಬಂದಿದ್ದರು. ನಿನ್ನೆ ಸಿಎಂ, ಡಿಸಿಎಂ ಇದನ್ನ ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಇಡೀ ಕನ್ನಡ ನಾಡು ತಲೆತಗ್ಗಿಸುವ ಸ್ಥಿತಿಯಾಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸಿಎಂ, ಗೃಹ ಸಚಿವ, ಡಿಸಿಎಂ ಪೊಲೀಸ್ ಅಧಿಕಾರಿಗಳನ್ನ ಕೂರಿಸಿ ಬಂದೋಬಸ್ತ್ ವ್ಯವಸ್ಥೆ ಕೇಳುವ ಯೋಗ್ಯತೆ ಇವರಿಗಿಲ್ಲ. ನಾನು ಕೂಡ ರಾಜ್ಯದಲ್ಲಿ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಪುನೀತ್ ರಾಜ್ ಕುಮಾರ್ ಸತ್ತಾಗ ನಾನು ಸಾಗರದಲ್ಲಿದ್ದೆ. ಊಟ, ತಿಂಡಿ ಬಿಟ್ಟು ಬೆಂಗಳೂರಿಗೆ ಧಾವಿಸಿದ್ದೆ. ಬೆಂಗಳೂರಿಗೆ ಹೋಗುವರೆಗೆ ನಾನು ಅಧಿಕಾರಿಗಳ ಸಭೆ ನಡೆಸುತ್ತಿದ್ದೆ. ಕೇವಲ ಎರಡು ಗಂಟೆಯಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದೆ.
ಅತಿ ದೊಡ್ಡ ಪೊಲೀಸ್ ವ್ಯವಸ್ಥೆ ಬೆಂಗಳೂರಿನಲ್ಲಿದೆ. ಹರಿಬಿರಿಯಲ್ಲಿ ಕ್ರೀಡಾಪಟುಗಳಿಗೆ ಸನ್ಮಾನ ಮಾಡಿದ್ದಾರೆ. ಆ ದೃಶ್ಯವೇ ಆತಂಕ ಸೃಷ್ಟಿಸುತ್ತಿತ್ತು. ವೇದಿಕೆಯಲ್ಲಿ ಸಾವಿರಾರು ಜನ ಇದ್ರು, ಸನ್ಮಾನ ಮಾಡಿದ್ರೋ ಅವಮಾನ ಮಾಡಿದ್ರೋ ಗೊತ್ತಾಗಲಿಲ್ಲ. ಮಕ್ಕಳು, ಮೊಮ್ಮಕ್ಕಳು, ಹೆಂಡತಿಯರನ್ನ ಕರೆದುಕೊಂಡು ಬಂದು ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಮಂತ್ರಿಗಳ ಮನೆಯಲ್ಲಿ ಸತ್ತಿದ್ದರೆ ಇವರಿಗೆ ಅರ್ಥ ಆಗುತ್ತಿತ್ತು. ಯಾರೋ ಡಿಸಿ ನೇತೃತ್ವದಲ್ಲಿ ತನಿಖೆ ಮಾಡಿಸುತ್ತೇವೆ ಎನ್ನುತ್ತಾರೆ. ಹತ್ತು ಲಕ್ಷ ಕೊಟ್ಟಿದ್ದೇವೆ ಎನ್ನುತ್ತಾರೆ, ನಿಮ್ಮ ಯೋಗ್ಯತೆಗೆ ಹಣದಿಂದ ಜನರ ಸಾವನ್ನ ಅಳೆಯಬೇಡಿ. ಸಿಎಂ ಮತ್ತು ಡಿಸಿಎಂ ಅವರು ಆಗಿರುವ ಪ್ರಮಾದಕ್ಕೆ ರಾಜ್ಯದ ಜನರ ಕ್ಷೇಮೆ ಕೇಳಬೇಕಿತ್ತು.
ಪುನೀತ್ ರಾಜ್ ಕುಮಾರ್ ಸತ್ತಾಗ ರಾತ್ರಿ, ಹಗಲು ಶವದ ಬಳಿ ಇದ್ದು ಬಂದೋಬಸ್ತ್ ಮಾಡಿದ್ದೆವು. ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಲಿಲ್ಲ ಇವರು. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಸತ್ತು ಮಲಗಿದೆ. ಅಸಮರ್ಪಕ ಮಾರ್ಗದರ್ಶಕ ಆಡಳಿತ ಇದ್ದರೆ ಏನ್ ಆಗುತ್ತೆ ಅನ್ನೋದೆ ನಿನ್ನೆಯೇ ಘಟನೆ ಉದಾಹರಣೆ. ಜಾಗತೀಕ ಮಟ್ಟದಲ್ಲಿ ನೋಡಿದಾಗ ನಮ್ಮ ಟೀಂ ಅಲ್ಲ ಅದು. ಹಣಕ್ಕಾಗಿ ನಡೆಯುವ ಆಟ ಅದು, ಕೇವಲ ಒಬ್ಬ ಆಟಗಾರ ಮಾತ್ರ ಕನ್ನಡಿಗ ಇದ್ರು ಅಷ್ಟೇ. ಆಪರೇಷನ್ ಸಿಂಧೂರದಲ್ಲಿ ಜನರು ಈ ರೀತಿ ಬೆಂಬಲ ಕೊಟ್ಟಿದ್ದರೆ ಆರ್ಮಿಗೆ ಮತ್ತಷ್ಟು ಬೆಂಬಲ ಸಿಗುತ್ತಿತ್ತು. ಬೆಳಗ್ಗೆಯಿಂದ ನೋಡುತ್ತಿದ್ದೇನೆ ಗೃಹ ಸಚಿವರು ಎಲ್ಲಿ ಹೋಗಿದ್ದಾರೆ ಗೊತ್ತಿಲ್ಲ. ಅಸಮರ್ಥ ಗೃಹ ಸಚಿವರು, ರಾಜಕೀಯವಾಗಿ ಅವರನ್ನ ಹಿಂದೆ ಇಟ್ಟಿದ್ದಾರೆ ಅನಿಸುತ್ತಿದೆ.
ಪೆಹಲ್ಗಾಮ್ ಘಟನೆ ಬಗ್ಗೆ ಭದ್ರತಾ ಲೋಪ ಎಂದರು, ಇದು ಏನು ಅಂತ ಇವರೇ ಹೇಳಬೇಕು. ವಿಧಾನಸೌಧ ಬಳಿ ಅರೆಬರೆಯಾಗಿ ಸನ್ಮಾನ ಮಾಡುವ ಅಗತ್ಯತೆ ಏನಿತ್ತು. ಜನರ ಭಾವನೆಯನ್ನ ರಾಜಕೀಯವಾಗಿ ಬಳಸಿಕೊಳ್ಳುವ ತಂತ್ರ ಇದು. ಇಡೀ ಕನ್ನಡ ನಾಡು ತಲೆ ತಗ್ಗಿಸುವ ಕೆಲಸ ಈ ರಾಜ್ಯದಲ್ಲಿ ನಡೆದಿದೆ. ಗೃಹ ಸಚಿವರು ಒಂದೇ ಒಂದು ಮಾತಾಡಿಲ್ಲ. ಪೊಲೀಸ್ ಇಲಾಖೆಯವರು ಸಹ ನಡೆದುಕೊಂಡ ರೀತಿ ಸರಿ ಇರಲಿಲ್ಲ. ಪೊಲೀಸ್ ಇಲಾಖೆಯ ಅಧಿಕಾರಿಗಳು ಸಹ ಸೆಲ್ಫಿ ತೆಗೆದುಕೊಳ್ಳಲು ನೂಕು ನುಗ್ಗಲಿನಲ್ಲಿದ್ದರು. ಸರ್ಕಾರದ ನಡವಳಿಕೆಯನ್ನು ನಾನು ಖಂಡಿಸುತ್ತೇನೆ. ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು.
ಕರ್ನಾಟಕ ರಾಜ್ಯದಲ್ಲಿ ನಡೆಯಬಾರದ ಘಟನೆ ನಡೆದಿದೆ. ಸರ್ಕಾರದ ವೈಫಲ್ಯ ಎಲ್ಲಾ ಜನರ ಕಣ್ಣಲ್ಲಿ ನೀರು ತರಿಸಿದೆ. ನಮ್ಮ ನಾಯಕರು ಅಸ್ಪತ್ರೆಗೆ ಹೋಗಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಸರ್ಕಾರ ತನಿಖೆಗೆ ಕೊಟ್ಟು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವಂತಾಗಿತ್ತು. ಡಿ.ಕೆ. ಶಿವಕುಮಾರ್ ಆಟಗಾರರನ್ನು ಹೆಗಲ ಮೇಲೆ ಹೊತ್ತುಕೊಂಡು ಬರುತ್ತಿದ್ರು. ಅದೊಂದು ಬಾಕಿ ಉಳಿಸಿಕೊಂಡ್ರು ಡಿ.ಕೆ. ಶಿವಕುಮಾರ್ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
Araga Jnanendra Slams Government Over Security Lapse in Stampede Tragedy, Demands Apology from CM and DCM.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm