ಬ್ರೇಕಿಂಗ್ ನ್ಯೂಸ್
31-05-25 04:33 pm HK News Desk ಕರ್ನಾಟಕ
ಕಾರ್ಕಳ, ಮೇ 31 : ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ಶನಿವಾರ ನಸುಕಿನ ವೇಳೆಗೆ ನಡೆದ ಅಗ್ನಿ ದುರಂತದಲ್ಲಿ ಕರಾವಳಿಯ ಕಂಬಳದಲ್ಲಿ ಜನಪ್ರಿಯರಾಗಿರುವ ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿಯವರಿಗೆ ಸೇರಿದ ಕಂಬಳ ಕೋಣಗಳಾದ ಅಪ್ಪು ಮತ್ತು ತೋನ್ಸೆ ದುರಂತ ಸಾವಿಗೀಡಾಗಿವೆ.
ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ದುರಂತ ಸಂಭವಿಸಿದೆ ಎನ್ನಲಾಗುತ್ತಿದ್ದು, ಬೆಳಗ್ಗೆ ಕೆಲಸದಾಳು ಹಟ್ಟಿಗೆ ತೆರಳಿದಾಗ ಬೆಂಕಿಯಿಂದ ಸುಟ್ಟು ಕರಕಲಾಗಿದ್ದು ಕಂಡುಬಂದಿದೆ. ಹಲವು ಕಂಬಳ ಕೂಟಗಳಲ್ಲಿ ಚಾಂಪ್ಯನ್ ಶಿಪ್ ಗಳನ್ನು ಗೆದ್ದಿದ್ದ ಅಪ್ಪು ಮತ್ತು ತೋನ್ಸೆ ಕೋಣಗಳ ಸಾವು ಕಂಬಳ ಪ್ರೇಮಿಗಳಿಗೆ ಆಘಾತ ತಂದಿದೆ. ಬೆಂಕಿ ಹೇಗೆ ಉಂಟಾಯಿತು, ಇದರ ಹಿಂದೆ ಯಾರದ್ದಾದರೂ ಕೈವಾಡ ಇದ್ದಿರಬಹುದೇ ಎನ್ನುವ ಬಗ್ಗೆ ತನಿಖೆ ಆಗಬೇಕಾಗಿದೆ.





ಅಪ್ಪು ಕೋಣಗಳ ಜೋಡಿಯು ಹಲವು ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಪ್ರಶಸ್ತಿಗಳನ್ನು ಗೆದ್ದು ಜನಪ್ರಿಯರಾಗಿದ್ದವು. 2022-23ರ ಸಾಲಿನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದು ಸರಣಿ ಶ್ರೇಷ್ಠ ಬಿರುದು ಪಡೆದಿತ್ತು. ತೋನ್ಸೆ ಕೋಣವು ನೇಗಿಲು ಕಿರಿಯ, ನೇಗಿಲು ಹಿರಿಯ, ಹಗ್ಗ ಹಿರಿಯ, ಅಡ್ಡ ಹಲಗೆ ಮತ್ತು ಕನೆ ಹಲಗೆ ವಿಭಾಗಗಳಲ್ಲಿ ಸ್ಪರ್ಧಿಸಿ ಎಲ್ಲ ವಿಭಾಗದಲ್ಲಿ ಪ್ರಶಸ್ತಿಗಳನ್ನು ಗೆದ್ದಿತ್ತು. ಈ ಕೋಣವನ್ನು 15 ವರ್ಷಗಳ ಹಿಂದೆ ಅಲೆವೂರು ತೆಂಕುಮನೆ ರಾಘು ಶೆಟ್ಟಿಯವರಿಂದ ಖರೀದಿಸಿ ಬೇಲಾಡಿ ಅಶೋಕ್ ಶೆಟ್ಟಿಯವರು ಕಂಬಳದಲ್ಲಿ ಪಳಗಿಸಿದ್ದರು. ಈ ನಡುವೆ, ಕರಿಂಜೆ ವಿನು ವಿಶ್ವನಾಥ ಶೆಟ್ಟಿಯವರ ಬಳಿಯೂ ಈ ಕೋಣ ಇತ್ತು. ಹಗ್ಗ ಹಿರಿಯ ವಿಭಾಗದಲ್ಲಿ 10-12 ವರ್ಷಗಳಲ್ಲಿ ಅದೆಷ್ಟೋ ಪ್ರಶಸ್ತಿಗಳನ್ನು ತನ್ನದಾಗಿಸಿತ್ತು. ಇಂಥ ಕೋಣಗಳ ಜೋಡಿ ಅಗ್ನಿ ದುರಂತದಲ್ಲಿ ಜೀವಂತ ದಹನವಾಗಿರುವುದು ಕಂಬಳ ಪ್ರಿಯರನ್ನು ಮತ್ತು ಅದನ್ನು ಸಲಹಿ ಸಾಕುತ್ತಿದ್ದ ಮಾಲೀಕರು ಮತ್ತು ಕೆಲಸದವರನ್ನು ರೋದಿಸುವಂತೆ ಮಾಡಿದೆ.
Karkala Appu, Decorated Winner of Hundreds of Kambala Awards, and Pair of Thonse Buffaloes Burnt Alive in Tragic Fire at Beladi Home.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am