ಬ್ರೇಕಿಂಗ್ ನ್ಯೂಸ್
29-05-25 03:34 pm HK News Desk ಕರ್ನಾಟಕ
ಹಾಸನ, ಮೇ 29 : ಹೃದಯಾಘಾತದಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕೊನೆಯುಸಿರೆಳೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನ ತಾಲೂಕಿನ ಕೆಲವತ್ತಿ ಗ್ರಾಮದ ಕವನ ಕೆ.ವಿ (21) ಹೃದಯಾಘಾತಕ್ಕೊಳಗಾದ ಯುವತಿ. ಕೆಲವತ್ತಿ ಗ್ರಾಮದ ಪಾಪಣ್ಣ ಹಾಗೂ ಗಾಯತ್ರಿ ದಂಪತಿ ಪುತ್ರಿ ಕವನಾ ಹಾಸನ ನಗರದ ಎಂ.ಜಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. ಪದವಿ ಪರೀಕ್ಷೆ ನಡೆಯುತ್ತಿದ್ದು, ಈಗಾಗಲೇ ಆಕೆ 3 ವಿಷಯಗಳ ಪರೀಕ್ಷೆ ಬರೆದಿದ್ದಳು. ಉಳಿದ ಮೂರು ವಿಷಯದ ಪರೀಕ್ಷೆಗಳನ್ನು ಬರೆಯಬೇಕಿತ್ತು.
ನಿನ್ನೆ ಸಂಜೆ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದಾಳೆ. ತಾಯಿ ಕುಡಿಯುವ ನೀರು ತರಲು ಹೇಳಿದ್ದು, ಅದರಂತೆ ಆಕೆ ಶುದ್ಧ ಕುಡಿಯುವ ನೀರಿನ ಘಟಕದಿಂದ ಮನೆಗೆ ನೀರು ತರುವಾಗ ಕವನಾಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಕವನಾ ತಾಯಿ ಬಳಿ ಕುಡಿಯಲು ನೀರು ಕೇಳಿದ್ದಾಳೆ. ತಾಯಿ ನೀರು ತಂದು ಕೊಡುವಷ್ಟರಲ್ಲಿ ಮನೆಯಲ್ಲಿಯೇ ಕುಸಿದು ಬಿದ್ದಿದ್ದಳು. ಕೂಡಲೇ ಪೋಷಕರು ಆಕೆಯನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಾಗಲೇ ಕವನಾ ಕೊನೆಯುಸಿರೆಳೆದಿದ್ದಳು.
ಸದ್ಯ ಮದುವೆ ವಯಸ್ಸಿಗೆ ಬಂದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಹಪಾಠಿಗಳು ಹಾಗೂ ಕಾಲೇಜು ಉಪನ್ಯಾಸಕ ವರ್ಗದಲ್ಲಿಯೂ ಶೋಕ ಮಡುಗಟ್ಟಿದೆ. ಇಂದು ಪರೀಕ್ಷೆ ಇದ್ದರೂ ಕೂಡಾ ಕೆಲವು ಸ್ನೇಹಿತರು ಮತ್ತು ಪ್ರಾಧ್ಯಾಪಕ ವರ್ಗ ಕೆಲವತ್ತಿಗೆ ತೆರಳಿ ಆಕೆಯ ಅಂತಿಮ ದರ್ಶನ ಪಡೆದಿದ್ದಾರೆ.

ವಾರದ ಹಿಂದೆ ಸಂಧ್ಯಾ ಸಾವು:
ಇತ್ತೀಚೆಗೆ ಯುವಕ - ಯುವತಿಯರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ಒತ್ತಡದಿಂದಲೋ, ಆಹಾರ ಪದ್ಧತಿಯಿಂದಲೋ ಗೊತ್ತಿಲ್ಲ. ಹಾಸನದಲ್ಲಿ ವಾರದ ಹಿಂದಷ್ಟೆ ಸಂಧ್ಯಾ ಎಂಬ ಯುವತಿ ಹೃದಯಾಘಾತಕ್ಕೆ ಬಲಿಯಾಗಿದ್ದಳು.
ಮೇ. 21ರಂದು ಹೊಳೆನರಸೀಪುರ ಪಟ್ಟಣದ ವೆಂಕಟೇಶ್ - ಪೂರ್ಣಿಮ ದಂಪತಿ ಪುತ್ರಿ ಸಂಧ್ಯಾ ಅಂತಿಮ ವರ್ಷದ ಡಿಪ್ಲೊಮಾ ಮುಗಿಸಿದ್ದಳು. ಕಾಲೇಜಿನಲ್ಲಿ ಸ್ವಲ್ಪ ಕೆಲಸವಿದೆ. ಹೋಗಬೇಕು ಎಂದು ಪೋಷಕರಿಗೆ ತಿಳಿಸಿದ್ದಳು. ಎಂದಿನಂತೆ ನಿತ್ಯ ಕರ್ಮ ಮುಗಿಸಿ, ಸ್ನಾನ ಮಾಡಲು ಬಾತ್ ರೂಂ ಗೆ ಹೋಗಿದ್ದಾಳೆ. ಸಾಕಷ್ಟು ಸಮಯವಾದರೂ, ಸಂಧ್ಯಾ ಬಾರದ ಹಿನ್ನೆಲೆಯಲ್ಲಿ, ಸ್ನಾನದ ಮನೆಯ ಬಾಗಿಲು ಒಡೆದು ನೋಡಿದಾಗ ಆಕೆ ಕುಸಿದು ಬಿದ್ದಿದ್ದಳು.
ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲು ಪ್ರಯತ್ನ ಪಟ್ಟಿದ್ದು, ಅಷ್ಟೊತ್ತಿಗಾಗಲೇ ಸಂಧ್ಯಾ ಉಸಿರು ನಿಲ್ಲಿಸಿದ್ದಳು. ಸಂದ್ಯ ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಗೆ ಒಳಗಾಗಿದ್ದಳು ಎಂದು ತಿಳಿದು ಬಂದಿತ್ತು. ಸದ್ಯ ಹಾಸನ ಗ್ರಾಮಾಂತರ ಮತ್ತು ಹೊಳೆನರಸೀಫುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
Another Young Woman Dies of Heart Attack in Hassan, Collapsed While Fetching Drinking Water for Mother, Second Case in a Week.
30-12-25 11:12 pm
HK News Desk
ಬಯೋಕಾನ್ ಕಂಪನಿ ಟೆಕ್ಕಿ ಆಫೀಸ್ ಕಟ್ಟಡದ ಆರನೇ ಮಹಡಿಯಿ...
30-12-25 10:14 pm
ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾ...
30-12-25 06:34 pm
ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ಮದುವೆ ನಿಶ್ಚಿತಾರ್ಥ...
30-12-25 05:44 pm
ಕೇರಳದಲ್ಲಿ ಚುನಾವಣೆಯಾದ್ರೆ ಪಿಣರಾಯಿಗೆ ಕರ್ನಾಟಕದಲ್ಲ...
30-12-25 05:10 pm
30-12-25 06:48 pm
HK News Desk
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
ರಸ್ತೆ ಬದಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ವ್...
27-12-25 04:29 pm
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
30-12-25 10:43 pm
Mangalore Correspondent
ಯುವತಿಗೆ ಮಗು ಕರುಣಿಸಿದ ಪ್ರಕರಣ ; ಬಿಜೆಪಿಯಿಂದ ಜಗನ್...
29-12-25 11:03 pm
Punjalkatte Crash: ಪುಂಜಾಲಕಟ್ಟೆ ; ಪೊಲೀಸ್ ಸಿಬಂದ...
29-12-25 08:47 pm
ಹಿಂದುತ್ವದ ನೆಲೆ ಅನ್ನೋರಿಗೆ ನಾಚಿಕೆಯಾಗಬೇಕು, ವಿಶ್ವ...
29-12-25 07:37 pm
ಉಡುಪಿ ; ಬುದ್ದಿ ಮಾತು ಹೇಳಿದ್ದಕ್ಕೆ 17 ವರ್ಷದ ಯುವತ...
29-12-25 01:24 pm
30-12-25 10:40 pm
Mangalore Correspondent
ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ;...
30-12-25 12:42 pm
ಯೆಯ್ಯಾಡಿ ಬಳಿ ನಡೆದು ಹೋಗುತ್ತಿದ್ದ ಮಹಿಳೆಯ ಕರಿಮಣಿ...
29-12-25 03:02 pm
ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಮೇಲೆ ಮ...
29-12-25 02:07 pm
ಮೈಸೂರಿನಲ್ಲಿ ಹಾಡಹಗಲೇ ಜುವೆಲ್ಲರಿ ಅಂಗಡಿಗೆ ನುಗ್ಗಿ...
28-12-25 05:19 pm