ಬ್ರೇಕಿಂಗ್ ನ್ಯೂಸ್
28-05-25 07:06 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 28 : ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಎಂ.ಎ. ಸಲೀಂ ಅವರನ್ನು ಪ್ರಭಾರ ನೆಲೆಯಲ್ಲಿ ನೇಮಿಸಿದ್ದನ್ನು ಪ್ರಶ್ನಿಸಿ ವಕೀಲರ ನಿಯೋಗವೊಂದು ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ. ಸಲೀಂ ಅವರನ್ನು ನೇಮಕ ಮಾಡುವ ಸಂದರ್ಭದಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಲ್ಲ ಎಂದು ಆಕ್ಷೇಪಿಸಿದ್ದು, ಏಳು ದಿನಗಳ ಒಳಗೆ ಸ್ಪಂದನೆ ನೀಡದಿದ್ದರೆ ಹೈಕೋರ್ಟಿನಲ್ಲಿ ರಿಟ್ ಪಿಟಿಶನ್ ಹಾಕುವುದಾಗಿ ಎಚ್ಚರಿಸಿದೆ.
ಹಿರಿಯ ವಕೀಲರಾದ ಉಮಾಪತಿ ಎಸ್., ಸುಧಾ ಕಥುವಾ, ಅಖಿಲ್ ಬಾಬು ಅವರನ್ನೊಳಗೊಂಡ ನಿಯೋಗವು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆಡಳಿತ ಮತ್ತು ಸುಧಾರಣೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ನೀಡಿದ್ದು, ಕೇಂದ್ರ ಆಡಳಿತ ಸೇವಾ ಆಯೋಗಕ್ಕೂ ಪತ್ರ ಬರೆದಿದೆ. ಡಿಜಿ ಮತ್ತು ಐಜಿಯನ್ನು ನೇಮಕ ಮಾಡುವ ಸಂದರ್ಭದಲ್ಲಿ ಪ್ರಭಾರ ನೆಲೆಯಲ್ಲಿ ನೇಮಕ ಮಾಡುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ಇಲ್ಲಿ ಉಲ್ಲಂಘನೆ ಮಾಡಲಾಗಿದೆ. ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟ ಆದೇಶ ನೀಡಿದೆ ಎಂದು ಪತ್ರದಲ್ಲಿ ಗಮನ ಸೆಳೆದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶ ಪ್ರಕಾರ, ಡಿಜಿಪಿ ದರ್ಜೆಯ ಅಧಿಕಾರಿಯನ್ನು ನೇಮಿಸುವ ಸಂದರ್ಭದಲ್ಲಿ ಇನ್ ಚಾರ್ಜ್ ಅಥವಾ ಏಕ್ಟಿಂಗ್ ಹೆಸರಲ್ಲಿ ನೇಮಕ ಮಾಡುವಂತಿಲ್ಲ. ಅತ್ಯಂತ ಅನಿವಾರ್ಯ ಅಥವಾ ಅಪರೂಪದ ಸನ್ನಿವೇಶ ಹೊರತುಪಡಿಸಿ ಈ ರೀತಿ ನೇಮಕ ಮಾಡಲಾಗದು. ಬದಲಾಗಿ, ಯುಪಿಎಸ್ಸಿ ಪೇನಲ್ ಕಮಿಟಿಯ ಶಿಫಾರಸು ಪರಿಗಣಿಸಿ ಸೀನಿಯಾರಿಟಿ ಆಧಾರದಲ್ಲಿ ಪೂರ್ಣಕಾಲಿಕವಾಗಿಯೇ ಈ ನೇಮಕಾತಿ ಆಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿರುವುದಾಗಿ ವಕೀಲ ಉಮಾಪತಿ ಹೇಳಿದ್ದಾರೆ. ಕರ್ನಾಟಕ ಸರಕಾರವು ಈ ನೇಮಕಾತಿ ಸಂದರ್ಭದಲ್ಲಿ ಯುಪಿಎಸ್ಸಿಗೆ ತಜ್ಞರ ಕಮಿಟಿಯ ವರದಿಯನ್ನೂ ಪಡೆದಿರಲಿಲ್ಲ. ಅಲ್ಲದೆ, ಎರಡು ವರ್ಷ ಡಿಜಿಯಾಗಿ ಸೇವೆ ಸಲ್ಲಿಸಿರಬೇಕೆಂಬ ನಿಯಮ ಅನ್ವಯಿಸಿಲ್ಲ ಇತ್ಯಾದಿ ಅಂಶಗಳನ್ನು ಉಲ್ಲೇಖಿಸಿದ್ದು ಕಾನೂನು ಪಾಲನೆಯಾಗಿಲ್ಲ ಎಂದಿದ್ದಾರೆ.
ಹೀಗಾಗಿ ಕೂಡಲೇ ಪ್ರಭಾರ ನೆಲೆಯಲ್ಲಿ ನೇಮಕ ಮಾಡಿರುವುದನ್ನು ಹಿಂಪಡೆಯಬೇಕು ಮತ್ತು ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಪ್ರಕಾರ ರೆಗ್ಯುಲರ್ ನೇಮಕಾತಿ ಪ್ರಕ್ರಿಯೆ ಅನುಸರಿಸಬೇಕು ಎಂದು ಪತ್ರದಲ್ಲಿ ಆಗ್ರಹ ಮಾಡಿದ್ದಾರೆ. ರಾಜ್ಯ ಸರಕಾರದ ಅಧಿಕಾರಿಗಳು ಈ ಬಗ್ಗೆ ಏಳು ದಿನಗಳ ಒಳಗಡೆ ಸ್ಪಷ್ಟನೆ ನೀಡದಿದ್ದರೆ ಕಾನೂನು ರೀತ್ಯ ಮುಂದುವರಿಯುವುದಾಗಿ ವಕೀಲರು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಸರಕಾರವು ಮೇ 21ರಿಂದ ಅನ್ವಯ ಆಗುವಂತೆ ಹಿರಿಯ ಐಪಿಎಸ್ ಅಧಿಕಾರಿ ಎಂ.ಎ. ಸಲೀಂ ಅವರನ್ನು ಡಿಜಿ ಮತ್ತು ಐಜಿಯಾಗಿ ಪ್ರಭಾರ ನೆಲೆಯಲ್ಲಿ ನೇಮಕ ಮಾಡಿತ್ತು. ಇದಕ್ಕೂ ಮುನ್ನ ಸಲೀಂ ಅವರು ಸಿಐಡಿ ಮತ್ತು ಆರ್ಥಿಕ ಅಪರಾಧಗಳ ವಿಭಾಗದ ಡಿಐಜಿ ಆಗಿದ್ದರು. ಡಿಜಿ ಆಗಿದ್ದ ಅಲೋಕ್ ಮೋಹನ್ ಮೇ 21ರಂದು ನಿವೃತ್ತಿಯಾದ ಹಿನ್ನೆಲೆಯಲ್ಲಿ ಸಲೀಂ ನೇಮಕವಾಗಿದ್ದು, ಎರಡು ತಿಂಗಳ ಬಳಿಕ ಪೂರ್ಣಾವಧಿಗೆ ಡಿಜಿಯಾಗುವ ನಿರೀಕ್ಷೆಯಿದೆ.
A submission has been made to the government of Karnataka by a delegation of lawyers objecting to the appointment of M.A. Saleem as the in-charge state police chief.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm