ST Somashekar, A Shivaram Hebbar: ಯತ್ನಾಳ್ ಬಳಿಕ ಮತ್ತಿಬ್ಬರಿಗೆ ಶಾಕ್​! ಬಿಜೆಪಿ ಪಕ್ಷದಿಂದ ಶಿವರಾಮ್ ಹೆಬ್ಬಾರ್, ಎಸ್ ಟಿ ಸೋಮಶೇಖರ್ ಉಚ್ಚಾಟನೆ, ಬಿಜೆಪಿ ಹೈಕಮಾಂಡ್ ಆದೇಶ 

27-05-25 01:55 pm       Bangalore Correspondent   ಕರ್ನಾಟಕ

ಬಸನಗೌಡ ಪಾಟೀಲ್ ಯತ್ನಾಳ್​ ಬಳಿಕ ಇದೀಗ ಮತ್ತಿಬ್ಬರರು ಶಾಸಕರಿಗೆ ಬಿಜೆಪಿ ಉಚ್ಛಾಟನೆಯ ಶಾಕ್ ನೀಡಿದೆ. ಪಕ್ಷದ ವಿರೋಧಿ ಕೆಲಸ ಆರೋಪ ಹಿನ್ನೆಲೆ ಶಾಸಕರಾದ ಶಿವರಾಮ್ ಹೆಬ್ಬಾರ್ ಹಾಗೂ ಎಸ್ ಟಿ ಸೋಮಶೇಖರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಬೆಂಗಳೂರು, ಮೇ 27 : ಬಸನಗೌಡ ಪಾಟೀಲ್ ಯತ್ನಾಳ್​ ಬಳಿಕ ಇದೀಗ ಮತ್ತಿಬ್ಬರರು ಶಾಸಕರಿಗೆ ಬಿಜೆಪಿ ಉಚ್ಛಾಟನೆಯ ಶಾಕ್ ನೀಡಿದೆ. ಪಕ್ಷದ ವಿರೋಧಿ ಕೆಲಸ ಆರೋಪ ಹಿನ್ನೆಲೆ ಶಾಸಕರಾದ ಶಿವರಾಮ್ ಹೆಬ್ಬಾರ್ ಹಾಗೂ ಎಸ್ ಟಿ ಸೋಮಶೇಖರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಕಾಂಗ್ರೆಸ್ ನಾಯಕರ ಜೊತೆ ಓಡಾಡ್ತಿದ್ದ ಇಬ್ಬರಿಗೂ ಕೊಕ್​ ಕೊಟ್ಟ ಬಿಜೆಪಿ ಪಕ್ಷ, ಇತರರಿಗೂ ಈ ಮೂಲಕ ಎಚ್ಚರಿಕೆ ನೀಡಿದೆ ಎನ್ನಲಾಗ್ತಿದೆ. 

ಶಿಸ್ತು ಸಮಿತಿ ವರದಿ ಬೆನ್ನಲ್ಲೇ ಕಠಿಣ ಕ್ರಮ ;

ಈ ಹಿಂದೆ ಪಕ್ಷ ವಿರೋದಿ ಚಟುವಟಿಕೆ ಹಿನ್ನಲೆಯಲ್ಲಿ ಶಾಸಕರಾದ ಎಸ್‌.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕೇಂದ್ರ ಸಮಿತಿಗೆ ಬಿಜೆಪಿ ಶಿಸ್ತು ಸಮಿತಿ ವರದಿ ನೀಡಿತ್ತು.

ಈ ಕುರಿತು ಮಾತನಾಡಿದ್ದ ಬಿಜೆಪಿ ರಾಜ್ಯ ಘಟಕದ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, 'ಎಸ್‌.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರನ್ನ ಪಕ್ಷದಿಂದ ಉಚ್ಚಾಟಿಸುವಂತೆ ಕೇಂದ್ರ ಸಮಿತಿಗೆ ವರದಿ ನೀಡಿದ್ದೇನೆ. ರಾಷ್ಟ್ರ ಮತ್ತು ರಾಜ್ಯ ನಾಯಕರು ಈ ತಿಂಗಳ ಅಂತ್ಯದೊಳಗೆ ಎಲ್ಲ ಗೊಂದಲಕ್ಕೂ ಅಂತ್ಯ ಹಾಡಲಿದ್ದಾರೆ ಎಂದು ಹೇಳಿದ್ದರು.

The Central Disciplinary Committee of BJP has decided to expel senior Karnataka MLAs ST Somashekar, A Shivaram Hebbar after taking serious note of their "repeated violations of party discipline".