ಬ್ರೇಕಿಂಗ್ ನ್ಯೂಸ್
24-05-25 03:19 pm HK News Desk ಕರ್ನಾಟಕ
ಹಾಸನ, ಮೇ 24 : ಮುಹೂರ್ತದ ವೇಳೆ ವಧು ನಿರಾಕರಿಸಿದ್ದರಿಂದ ನಗರದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮದುವೆಯೊಂದು ಮುರಿದು ಬಿದ್ದಿದೆ. ಇನ್ನೊಬ್ಬನ ಜೊತೆ ಪ್ರೀತಿಸುತ್ತಿದ್ದು, ಆತನನ್ನೆ ಮದುವೆ ಮಾಡಿಕೊಳ್ಳುವುದಾಗಿ ಕೊನೆಯ ಕ್ಷಣದಲ್ಲಿ ಮದುಮಗಳು ಹೇಳಿದ್ದು, ವರ ಮತ್ತು ವಧುವಿನ ಪಾಲಕರಿಗೆ ದಿಕ್ಕು ತೋಚದಂತಾಗಿತ್ತು.
ಮಂತ್ರಘೋಷಗಳು, ಗಟ್ಟಿ ಮೇಳ ಮೊಳಗುತ್ತಿದ್ದಂತೆ ವರ ತಾಳಿ ಹಿಡಿದು ಕಟ್ಟಲು ಸಜ್ಜಾಗಿದ್ದರು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ‘ಈ ಮದುವೆ ಬೇಡ’ ಎಂದ ವಧು ಪಟ್ಟು ಹಿಡಿದ್ಲು. ತಾಳಿ ಕಟ್ಟುವ ಕೆಲವೇ ಕ್ಷಣಗಳ ಮೊದಲು ಪ್ರಿಯಕರನ ಮೊಬೈಲ್ ಕರೆ ಬಂದಿದ್ದು, ವಧು ಮದುವೆಗೆ ನಿರಾಕರಿಸಿದ್ದಾಳೆ.
ಈ ವೇಳೆ ‘ನಿಜವಾಗಿಯೂ ನಿಂಗೆ ಮದುವೆ ಇಷ್ಟ ಇಲ್ವಾ? ' ಎಂದು ವರ ಕೂಡ ಹಲವಾರು ಬಾರಿ ಪ್ರಶ್ನಿಸಿದ್ದಾರೆ. ಆದರೆ, ತನಗೆ ಮದುವೆ ಇಷ್ಟವಿಲ್ಲ ಎಂದು ಮದುಮಗಳು ಹೇಳಿದ್ದಾರೆ. ಹುಡುಗಿಯ ಪೋಷಕರು, ಬೆದರಿಸಿ ಮದುವೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆಗ, ‘ನಾನು ಬೇರೊಬ್ಬ ಹುಡುಗನ ಪ್ರೀತಿಸುತ್ತಿರುವುದಾಗಿ’ ಮದುಮಗಳು ಹೇಳಿದ್ದಾಳೆ.
ಮದುವೆ ಬೇಡ ಎಂದು ಹಸಮಣೆಯಿಂದ ಎದ್ದ ವಧು ನೇರವಾಗಿ ಕಲ್ಯಾಣ ಮಂಟಪದಿಂದ ಕಾರಿನ ಮೂಲಕ ಹೊರಗೆ ತೆರಳಿದ್ದಾರೆ. ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಬಡಾವಣೆ ಹಾಗೂ ನಗರಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಕಣ್ಣೀರಿಟ್ಟ ಪೋಷಕರು:
ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರಾಗಿರುವ ವರನ ಕಡೆಯವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅದ್ದೂರಿ ಮದುವೆಗೆ ವ್ಯವಸ್ಥೆ ಮಾಡಿದ್ದರು. ಬಂಧು ಬಳಗ, ಆಪ್ತರನ್ನೂ ಆಹ್ವಾನಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಈ ಘಟನೆ ನಡೆದಿದ್ದು, ವರ ಸೇರಿದಂತೆ ಅವರ ಕುಟುಂಬಸ್ಥರು ಕಣ್ಣೀರಿಡುತ್ತಿದ್ದರು.
ಮದುವೆ ಬೇಡ ಎಂದ ಮಗಳನ್ನು ಅವರ ಪೋಷಕರು ಪರಿಪರಿಯಾಗಿ ಬೇಡಿಕೊಂಡಿರೂ, ಆದರೆ ಮಗಳು ಮಾತ್ರ ತನ್ನ ನಿರ್ಧಾರ ಬದಲಿಸಲಿಲ್ಲ. ಮಗಳ ನಿರ್ಧಾರದಿಂದ ಆಘಾತಗೊಂಡ ಪೋಷಕರು ಕಣ್ಣೀರಿಟ್ಟರು.
ಪೊಲೀಸ್ ಠಾಣೆ ಮೆಟ್ಟಿಲೇರಿದೆ ಮದುವೆ ಸಮಸ್ಯೆ
ವಧುವನ್ನು ಪೊಲೀಸರು ಕಲ್ಯಾಣ ಪಂಟಪದಿಂದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಹಾಸನ ಬಡಾವಣೆ ಠಾಣೆಯಲ್ಲಿ ಪೊಲೀಸರು ವಧುವಿನ ವಿಚಾರಣೆ ನಡೆಸುತ್ತಿದ್ದಾರೆ. ವಧು, ವರನ ಸಂಬಂಧಿಗಳು ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದಾರೆ. ವಧುವಿನ ಹೇಳಿಕೆ ಮೇಲೆ ಪ್ರಕರಣ ನಿಂತಿದೆ. ವಧುವಿನ ಕಡೆಯವರಿಂದ ಮೋಸವಾಗಿದೆ ಎಂದು ದೂರು ನೀಡಲು ವರನ ಸಂಬಂಧಿಕರು ಮುಂದಾಗಿದ್ದಾರೆ. ಮಾನಸಿಕವಾಗಿ, ಆರ್ಥಿಕವಾಗಿ ನಮಗೆ ನಷ್ಟವಾಗಿದೆ ಎಂದು ದೂರು ದಾಖಲಿಸಲು ವರನ ಕುಟುಂಬಸ್ಥರು ಮುಂದಾಗಿದ್ದಾರೆ.
Bride calls off wedding last minute in Hassan, cites love for another man. A wedding in Karnataka’s Hassan district was abruptly called off after the bride, moments before the tying of the mangalsutra (sacred marriage chain), announced that she was in love with another man and could not proceed with the ceremony.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm