ಬ್ರೇಕಿಂಗ್ ನ್ಯೂಸ್
21-05-25 09:16 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 21 : ಓಲಾ ಕಂಪನಿಯ ಎಐ ವಿಭಾಗದಲ್ಲಿ ಮೆಷಿನ್ ಲರ್ನಿಂಗ್ ಎಂಜಿನಿಯರ್ ಆಗಿದ್ದ ಮಹಾರಾಷ್ಟ್ರ ಮೂಲದ ನಿಖಿಲ್ ಸೋಮವಂಶಿ(24) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಎರಡು ವಾರಗಳ ಬಳಿಕ ಸಂಚಲನ ಎಬ್ಬಿಸಿದೆ. ಆತ್ಮಹತ್ಯೆಗೆ ಕಂಪನಿಯ ಮ್ಯಾನೇಜರ್ ಕಿರುಕುಳ ಕಾರಣ ಎನ್ನುವ ಮಾಹಿತಿ ಒಂದೆಡೆಯಾದರೆ, ಸಾವಿಗೂ ಮುನ್ನ, ತಾನು ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಸಂಬಂಧಿಕರಿಗೆ ತಿಳಿಸುವಂತೆ ರೂಮ್‌ಮೇಟ್‌ಗೆ ಸಂದೇಶ ಕಳುಹಿಸಿದ್ದರು ಎಂಬ ಅಂಶ ಚರ್ಚೆಗೆ ಕಾರಣವಾಗಿದೆ.
ಮಹಾರಾಷ್ಟ್ರದ ಜಲಗಾಂವ್ ಮೂಲದ ಸೋಮವಂಶಿ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸವಿದ್ದರು. ಮೇ 7ರಂದು ಕೊಠಡಿ ತೊರೆದಿದ್ದು, ಅವರ ಮೃತದೇಹ ಮೇ 8ರಂದು ಅಗರ ಕೆರೆಯಲ್ಲಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಇವರ ಆತ್ಮಹತ್ಯೆಗೆ ಕಂಪನಿಯ ಕಠಿಣ ಕೆಲಸದ ಒತ್ತಡ ಮತ್ತು ಕಿರುಕುಳ ನೀಡುತ್ತಿದ್ದ ಮ್ಯಾನೇಜರ್ ಕಾರಣ ಎಂದು ಆರೋಪ ಕೇಳಿಬಂದಿದೆ.
ಆಗಸ್ಟ್ 2024 ರಲ್ಲಿ ಓಲಾ ಕಂಪನಿಯ ಕ್ರುಟ್ರಿಮ್‌ಗೆ ಫ್ರೆಶರ್ ಆಗಿ ಸೇರಿದ್ದ ಸೋಮವಂಶಿ ಅವರಿಗೆ ಇಬ್ಬರು ಸಹೋದ್ಯೋಗಿಗಳ ರಾಜೀನಾಮೆ ನಂತರ ಟೀಂ ಲೀಡರ್ ಹುದ್ದೆ ವಹಿಸಲಾಗಿತ್ತು ಎಂದು ರೆಡ್ಡಿಟ್ ಜಾಲತಾಣದಲ್ಲಿ ಬಳಕೆದಾರರು ಬರೆದುಕೊಂಡಿದ್ದಾರೆ. ಇದೇ ವೇಳೆ, ರಾಜ್‌ಕಿರಣ್ ಪನುಗಂಟಿ ಎಂದು ಗುರುತಿಸಲಾದ ಅಮೆರಿಕ ಮೂಲದ ಕಂಪನಿ ಮ್ಯಾನೇಜರ್ ಜೂನಿಯರ್ ಸಿಬ್ಬಂದಿಗೆ ನಿರಂತರ ನಿಂದಿಸುತ್ತ ಒತ್ತಡ ಹೇರುತ್ತಿದ್ದರು ಎಂದು ಜಾಲತಾಣದಲ್ಲಿ ಆರೋಪಿಸಲಾಗಿದೆ.
ಇಂಜಿನಿಯರ್ ಸಾವಿನ ನಂತರವೂ ಕಂಪನಿಯಲ್ಲಿ ಯಾವುದೇ ವಿಮರ್ಶೆ ನಡೆದಿಲ್ಲ. ಘಟನೆ ಬಗ್ಗೆ ಚರ್ಚಿಸದಂತೆ ನೌಕರರಿಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ.
ಮ್ಯಾನೇಜರ್ ಹೊಸಬರನ್ನು ದಬ್ಬಾಳಿಕೆಯ ಧಾಟಿಯಲ್ಲಿ ನೋಡುತ್ತಿದ್ದರು. ಇದರಿಂದ ಒತ್ತಡದ ಸನ್ನಿವೇಶ ಸೃಷ್ಟಿಯಾಗಿತ್ತು. ಮ್ಯಾನೇಜರ್ ವರ್ತನೆಯಿಂದ ಬೇಸತ್ತು ಹಲವರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಹಲವರು ಇದರಿಂದ ನೊಂದುಕೊಂಡಿದ್ದಾರೆ ಎಂದು ಕೆಲವು ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
Nearly two weeks after a machine learning engineer at Ola Krutrim, the company’s AI arm, was found dead in Bengaluru, allegations have cropped up on social media suggesting that the 25-year-old died by suicide due to “work pressure”.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am