ಬ್ರೇಕಿಂಗ್ ನ್ಯೂಸ್
19-05-25 04:00 pm HK News Desk ಕರ್ನಾಟಕ
ಹುಬ್ಬಳ್ಳಿ, ಮೇ 19 : ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಬರೀ ಕಲೆಕ್ಷನ್ ದಂಧೆಯಲ್ಲಿ ತೊಡಗಿದ್ದಾರೆ. ಪಾಕಿಸ್ತಾನ ಮೂಲದವರು ಇಲ್ಲಿನ ಸ್ಲಂ ಏರಿಯಾಗಳಲ್ಲಿ ಬಂದು ಅಡಗಿ ಕುಳಿತಿದ್ದಾರೆ ಎಂದು ಪತ್ರ ಬರೆದು ಗಮನಕ್ಕೆ ತಂದರೂ ಯಾವುದೇ ಏಕ್ಷನ್ ಮಾಡ್ತಿಲ್ಲ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಆರೋಪಿಸಿದ್ದಾರೆ.
15 ದಿನಗಳ ಹಿಂದೆ ಹುಬ್ಬಳ್ಳಿಯ ಜನ್ನತ್ ನಗರ ಮತ್ತು ಇನ್ನಿತರ ಸ್ಲಂ ಏರಿಯಾಗಳ ಮಸೀದಿಗಳಲ್ಲಿ ಪಾಕಿಸ್ತಾನ ಮೂಲದವರು ಇದ್ದಾರೆಂಬ ತನಗೆ ಸಿಕ್ಕಿದ ಮಾಹಿತಿಯನ್ನು ಪೊಲೀಸ್ ಕಮಿಷನರ್ ಅವರಿಗೆ ತಿಳಿಸಿದ್ದೆ. ಪತ್ರ ಬರೆದು ವಿಚಾರ ತಿಳಿಸಿದ್ದಲ್ಲದೆ, ಕಮಿಷನರ್ ಶಶಿಕುಮಾರ್ ಅವರಿಗೆ ಕರೆ ಮಾಡಿಯೂ ತಿಳಿಸಿದ್ದೆ. ರಾಜ್ಯದ ಗೃಹ ಸಚಿವರ ಗಮನಕ್ಕೂ ತಂದಿದ್ದೆ. ಆದರೆ ಪೊಲೀಸ್ ಕಮಿಷನರ್ ತನಗೇನೂ ಪತ್ರ ಸಿಕ್ಕಿಲ್ಲ ಎಂದು ಹೇಳಿ ಕಾಗೆ ಹಾರಿಸುವ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸರಕಾರದ ಅಣತಿಯಂತೆ ಪಾಕಿಸ್ತಾನ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪೊಲೀಸ್ ಕಮಿಷನರ್ ವಿರುದ್ಧ ಶಾಸಕ ಅರವಿಂದ ಬೆಲ್ಲದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ನೀಡಿರುವ ಮಾಹಿತಿ ನೀಡಿದವರು ಬಾಂಗ್ಲಾದೇಶಿಗರ ರೀತಿ ಇಲ್ಲ. ಪಾಕಿಸ್ತಾನದ ಜನರ ರೀತಿ ಇದ್ದಾರೆ. ಮಸೀದಿ ವ್ಯಾಪ್ತಿಯಲ್ಲಿ ಅಡ್ಡಾಡುತ್ತಿದ್ದಾರೆ. ವಿಷಯ ಸೂಕ್ಷ್ಮ ಇದ್ದುದರಿಂದ ಪೊಲೀಸ್ ಕಮಿಷನರ್ ಗಮನಕ್ಕೆ ತಂದಿದ್ದೆ. ನನಗೆ ತಿಳಿದ ಮಟ್ಟಿಗೆ ಈತನಕವೂ ಪೊಲೀಸರು ತನಿಖೆ ನಡೆಸಿಲ್ಲ. ಪತ್ರಿಕೆಯಲ್ಲಿ ನೋಡಿದರೆ ನನಗೆ ಯಾವ ಮಾಹಿತಿ ಇಲ್ಲ ಎಂದು ಕಮಿಷನರ್ ಪ್ರತಿಕ್ರಿಯೆ ನೀಡಿದ್ದಾರೆ. ಗೃಹ ಮಂತ್ರಿಯವರಿಗೆ ಫೋನ್ ಮಾಡಿಲ್ಲ. ಸ್ಥಳೀಯ ಕಮಿಷನರ್ ಆಗಿದ್ದರಿಂದ ಹೇಳಿದ್ದೆ. ಇದು ಬಹಳ ಬೇಜವಾಬ್ದಾರಿ ಕೆಲಸ. ಇವರು ಇಲ್ಲಿ ಕಮಿಷನ್ ದಂಧೆ ನಡೆಸುವುದು ಬಿಟ್ಟು ಏನು ಕೆಲಸ ಇದೆಯೋ ಅದನ್ನು ಮಾಡಲಿ.
ಭಯೋತ್ಪಾದಕರ ರೀತಿ ಕಂಡಿದ್ದಾರೆ, ಏನು ವಿಚಾರ ಅಂತ ತನಿಖೆ ಮಾಡ್ರೀ ಅಂತ ಹೇಳಿದ್ದೆ. ವಿಷಯ ಸೂಕ್ಷ್ಮ ಇದ್ದುದರಿಂದ ಮಾಧ್ಯಮಕ್ಕೆ ಹೇಳಿರಲಿಲ್ಲ. ಮಾಧ್ಯಮದಲ್ಲಿ ಬಂದ ಕೂಡಲೇ ಎಲರ್ಟ್ ಆಗುತ್ತಾರೆ. ಅಲ್ಲಿ ಏಳೆಂಟು ಜನರು ಇದ್ದಾರೆಂದು ನನಗೆ ಮಾಹಿತಿ ನೀಡಿದವರು ಹೇಳಿದ್ದರು. ಪೊಲೀಸರು ಮಾಹಿತಿ ನೀಡಿದ್ರೂ ಬೇಜವಾಬ್ದಾರಿ ನಡೆ ತೋರಿಸಿದ್ದಾರೆ. ಇದು ಭಾರೀ ಬೇಸರದ ಸಂಗತಿ. ಪಾಕಿಸ್ತಾನ ಜೊತೆಗೆ ಯುದ್ಧ ಸನ್ನಿವೇಶ ಇರುವಾಗ ಇಂತಹ ಸ್ಥಿತಿಯಾಗಬಾರದಿತ್ತು ಎಂದು ಅರವಿಂದ ಬೆಲ್ಲದ್ ಪ್ರತಿಕ್ರಿಯೆ ನೀಡಿದ್ದಾರೆ.
In a startling statement, MLA Aravind Bellad has alleged the presence of Pakistan nationals residing illegally in the twin cities of Hubballi and Dharwad.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 09:41 pm
Mangalore Correspondent
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm