ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮಕ್ಕೆ ಹಚ್ಚೋದು? ನಾವು ಹಿಂದು ಧರ್ಮದಲ್ಲಿದ್ದು ಎಷ್ಟು ಅನುಭವಿಸ್ತೀವಿ ಗೊತ್ತಾ..? ಸಚಿವ ತಿಮ್ಮಾಪುರ್ ರಾಂಗ್

04-05-25 09:55 pm       HK News Desk   ಕರ್ನಾಟಕ

ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮಕ್ಕೆ ಹಚ್ಚೋದು.‌ ನಿಮ್ಮ ಅಧಿಕಾರದ ಲಾಲಸೆಗಾಗಿ ದೇಶಾನ ಯಾವ ಸ್ಥಿತಿಗೆ ಒಯ್ಯಬೇಕು ಅಂತೀರಿ. ನಾನು ಕೂಡ ಹಿಂದು ಇದೀನಪ್ಪಾ.. ಹಾಗಂತ, ನಾನು ಎಷ್ಟು ಅನುಭವಿಸ್ತೀನಿ ನಿಮಗ್ಗೊತ್ತಾ? ಇದಕ್ಕೆ ಇವ್ರ ಹತ್ತೀರ ಉತ್ತರ ಇದ್ಯಾ? ಯಾಕೆ ಹಿಂದುಗಳಾಗಿ ಇರಬೇಕು ಅಂತ ನಮ್ಮ ಯುವಕರು ಕೇಳ್ತಿದ್ದಾರೆ ? ಈ ಧರ್ಮದಲ್ಲಿದ್ದು ಎಷ್ಟರ ಮಟ್ಟಿಗೆ ಇವ್ರು ಅಪ್ಪಿಕೊಂಡಿದ್ದಾರೆ ನಮ್ಮನ್ನಾ ? ಹೀಗಂತ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಪ್ರಶ್ನೆ ಮಾಡಿದ್ದಾರೆ. 

ಬಾಗಲಕೋಟೆ, ಮೇ 4 : ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮಕ್ಕೆ ಹಚ್ಚೋದು.‌ ನಿಮ್ಮ ಅಧಿಕಾರದ ಲಾಲಸೆಗಾಗಿ ದೇಶಾನ ಯಾವ ಸ್ಥಿತಿಗೆ ಒಯ್ಯಬೇಕು ಅಂತೀರಿ. ನಾನು ಕೂಡ ಹಿಂದು ಇದೀನಪ್ಪಾ.. ಹಾಗಂತ, ನಾನು ಎಷ್ಟು ಅನುಭವಿಸ್ತೀನಿ ನಿಮಗ್ಗೊತ್ತಾ? ಇದಕ್ಕೆ ಇವ್ರ ಹತ್ತೀರ ಉತ್ತರ ಇದ್ಯಾ? ಯಾಕೆ ಹಿಂದುಗಳಾಗಿ ಇರಬೇಕು ಅಂತ ನಮ್ಮ ಯುವಕರು ಕೇಳ್ತಿದ್ದಾರೆ ? ಈ ಧರ್ಮದಲ್ಲಿದ್ದು ಎಷ್ಟರ ಮಟ್ಟಿಗೆ ಇವ್ರು ಅಪ್ಪಿಕೊಂಡಿದ್ದಾರೆ ನಮ್ಮನ್ನಾ ? ಹೀಗಂತ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಪ್ರಶ್ನೆ ಮಾಡಿದ್ದಾರೆ. 

ಮಂಗಳೂರಿನ ಸುಹಾಸ್ ಶೆಟ್ಟಿ ಕೊಲೆ ಘಟನೆ ಸಂಬಂಧಿಸಿ ಹೇಳಿಕೆ ನೀಡಿರುವ ಅವರು, ನಮ್ಮ ಜಾತಿ, ಶ್ರೇಣೀಕೃತ ವ್ಯವಸ್ಥೆ ಬಗ್ಗೆ ಇವ್ರು ಬಾಯಿ ಬಿಡ್ತಾರಾ ಯಾರಾದ್ರೂ? ಈ ನೋವು ಎಷ್ಟು ವರ್ಷಗಳಿಂದ ಅಡಗಿಸಿಕೊಂಡು ಇರಬೇಕು ಅಂತಿದ್ದಾರೆ ನಮ್ಮ ಜನಾಂಗ.?ಹಿಂದೂ ಧರ್ಮದ ಬಗ್ಗೆ ಹೇಳ್ತಿದ್ದೀನಿ, ಹಿಂದುತ್ವದ ಬಗ್ಗೆ ಹೇಳ್ತಿದ್ದಿನಿ. ಮುಸ್ಲಿಂ ಮುಸ್ಲಿಂ ಅಂತ ಹೇಳಿಕೊಂಡು ಅಡ್ಡಾಡ್ತಾರಲ್ಲಾ ಇವ್ರು. ಹಿಂದುತ್ವದಲ್ಲಿರುವ ಶ್ರೇಣೀಕೃತ ಜಾತಿ ಬಗ್ಗೆ ಏನ ಹೇಳ್ತಾರೆ ಇವ್ರು? ವರ್ಣಾಶ್ರಮ ಧರ್ಮದ ಬಗ್ಗೆ ಏನ ಮಾತಾಡ್ತಾರೆ ಇವ್ರು? 

ದಲಿತರ ಹತ್ಯೆ ಆಗ್ತವೆ, ಯಾರಾದ್ರೂ ಹಿಂದೂಗಳು ಹೋಗಿದ್ದಾರಾ ?ಇದೆಲ್ಲಾ ರಾಜಕಾರಣ ಅಷ್ಟೇ ಎಂದು ಕೋಮು ದಳ್ಳುರಿ ಬಗ್ಗೆ ಸಚಿವ ತಿಮ್ಮಾಪೂರ ಅಸಮಾಧಾನ ವ್ಯಕ್ತಪಡಿಸಿದರು. 

ಇವರಿಗೆ ಬೇರೆ ಕೆಲಸ ಇಲ್ಲ. ಬೆಳಿಗ್ಗೆ ಎದ್ದ ತಕ್ಷಣ ಮುಸ್ಲಿಂ, ಮುಸ್ಲಿಂ ಇಲ್ಲಾಂದ್ರೆ ಇವ್ರು(ಬಿಜೆಪಿ) ಅಧಿಕಾರಕ್ಕೆ ಬರಲ್ಲ‌.‌ ಕಾಂಗ್ರೆಸ್ ನವ್ರು ಮುಸ್ಲಿಂ ಹಿಡ್ಕೊಂಡಿದ್ದಾರೆ ಅಂತ ಬಿಜೆಪಿ ವೋಟ್ ತಗೊಳ್ತಾರೆ. ಬಹು ಸಂಖ್ಯಾತರನ್ನ ಒಂದುಗೂಡಿಸಲು ನಮ್ಮ ಮೇಲೆ ಎತ್ತಿ ಕಟ್ಟೋದು. ಹಿಂದೂ ಧರ್ಮದಲ್ಲಿರುವ ಮೌಢ್ಯತೆ ಬಗ್ಗೆ ದಲಿತರು ನೊಂದುಕೊಂಡಿದ್ದಾರೆ. ಇಷ್ಟು ವರ್ಷ ನಾವು ಹಿಂದು ಹಿಂದು ಅಂದರೂ, ನಮಗೆ ದೇವಸ್ಥಾನಗಳಲ್ಲಿ ಜಾಗವಿಲ್ಲ. ಬದುಕಿನಲ್ಲಿ ನಮ್ಮನ್ನ ಬೇರೆ ಇಟ್ಟಿದ್ದಾರೆ. ಅದಕ್ಕೆ ಹಿಂದುಗಳಲ್ಲಿ ಉತ್ತರ ಇದೆಯಾ ? ಬಹು ಸಂಖ್ಯಾತರ ವೋಟ್‌ಗಾಗಿ ರಾಜ್ಯಾದ್ಯಂತ ಘರ್ಷಣೆ ಇಳಿಸಿದ್ದಾರೆ.

ಮಂಗಳೂರಲ್ಲಿ ಏನಾಗಿತ್ತು? 

ಅವನೊಬ್ಬನ್ನ ಮರ್ಡರ್ ಮಾಡಿ ಜೈಲ್‌ನಲ್ಲಿದ್ದ. ಅವರು ಇವನ್ನ ಮರ್ಡರ್ ಮಾಡ್ಯಾರ, ಅದನ್ನ ಯಾಕೆ ಹಿಂದುತ್ವಕ್ಕೆ ಒಯ್ದು ಬೆಂಕಿ ಹಚ್ಚೋದು.? ಎಂದು ಪ್ರಶ್ನೆ ಮಾಡಿದ್ದಾರೆ. ‌

Murders Can Happen for Any Reason, Why Blame Religion? We Too Have Faced Much Despite Being Hindus, Minister Timmapur.