Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್ತಿ ; ದೇಶದಲ್ಲಿ 11.57 ಕೋಟಿ ಖಾತೆಗಳು ನಿಷ್ಕ್ರಿಯ, ಪ್ರತಿ ವರ್ಷ ನಿಷ್ಕ್ರಿಯ ಖಾತೆಗಳ ಹೆಚ್ಚಳ ! 

01-05-25 01:48 pm       Bangalore Correspondent   ಕರ್ನಾಟಕ

ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ತೆರೆಯಬೇಕೆಂಬ ಸದುದ್ದೇಶದಿಂದ ಜನಧನ್ ಖಾತೆಗಳನ್ನು ತೆರೆಯಲಾಗಿತ್ತು. ಬ್ಯಾಂಕ್ ಖಾತೆ ಹೊಂದಿರದ ಬಡ, ವೃದ್ಧರಿಗೂ ಖಾತೆ ಮಾಡಿಸಲಾಗಿತ್ತು. ಕೇಂದ್ರ ಸರ್ಕಾರದ ಈ ಯೋಜನೆ ಹತ್ತು ವರ್ಷಗಳ ಹಿಂದೆ ಆರಂಭಗೊಂಡಾಗ ಬಹಳಷ್ಟು ಸ್ಪಂದನೆ ಸಿಕ್ಕಿದ್ದರಿಂದ 50 ಕೋಟಿಗೂ ಹೆಚ್ಚು ಖಾತೆಗಳು ತೆರೆಯಲ್ಪಟ್ಟಿದ್ದವು.

ಬೆಂಗಳೂರು, ಮೇ 1 : ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ತೆರೆಯಬೇಕೆಂಬ ಸದುದ್ದೇಶದಿಂದ ಜನಧನ್ ಖಾತೆಗಳನ್ನು ತೆರೆಯಲಾಗಿತ್ತು. ಬ್ಯಾಂಕ್ ಖಾತೆ ಹೊಂದಿರದ ಬಡ, ವೃದ್ಧರಿಗೂ ಖಾತೆ ಮಾಡಿಸಲಾಗಿತ್ತು. ಕೇಂದ್ರ ಸರ್ಕಾರದ ಈ ಯೋಜನೆ ಹತ್ತು ವರ್ಷಗಳ ಹಿಂದೆ ಆರಂಭಗೊಂಡಾಗ ಬಹಳಷ್ಟು ಸ್ಪಂದನೆ ಸಿಕ್ಕಿದ್ದರಿಂದ 50 ಕೋಟಿಗೂ ಹೆಚ್ಚು ಖಾತೆಗಳು ತೆರೆಯಲ್ಪಟ್ಟಿದ್ದವು. ಆದರೆ ಈ ಖಾತೆಗಳೀಗ ಹೊಸತು ಆರಂಭಗೊಳ್ಳುವ ಬದಲು ನಿಷ್ಕ್ರಿಯಗೊಳ್ಳತೊಡಗಿವೆ. 

ಶಂಕಿತ ಆರ್ಥಿಕ ಅಪರಾಧಗಳು, ಖಾತೆದಾರರ ಸಾವು, ಆದಾಯ ತೆರಿಗೆ ಇಲಾಖೆ ಆದೇಶ, ಕೋರ್ಟ್‌ ಆದೇಶ ಸೇರಿ ನಾನಾ ಕಾರಣಕ್ಕೆ ಜನ್‌ಧನ್‌ ಖಾತೆಗಳು ಸ್ಥಗಿತಗೊಳ್ಳುತ್ತಿವೆ ಎಂದು ಕೇಂದ್ರ ಸರಕಾರವೇ ಸ್ಪಷ್ಟಪಡಿಸಿದೆ. ಸ್ಥಗಿತಗೊಳ್ಳುವ ಜನ್‌ಧನ್‌ ಖಾತೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪ್ರಸ್ತುತ ದೇಶದಲ್ಲಿ ಬರೋಬ್ಬರಿ 11.57 ಕೋಟಿ ಖಾತೆಗಳು ನಿಷ್ಕ್ರಿಯವಾಗಿದ್ದರೆ, ಕರ್ನಾಟಕದಲ್ಲಿ ಈ ರೀತಿಯ ಸುಮಾರು 50 ಸಾವಿರ ಖಾತೆಗಳಿವೆ ಎನ್ನುವ ಮಾಹಿತಿಯಿದೆ. 

ದೇಶದಲ್ಲಿ ಈವರೆಗೆ 55.17 ಕೋಟಿ ಜನಧನ್‌ ಖಾತೆಗಳನ್ನು ತೆರೆಯಲಾಗಿದೆ. ಸದ್ಯ ಈ ಖಾತೆಗಳಲ್ಲಿ ಒಟ್ಟು 2,61,461 ಕೋಟಿ ರೂ. ಹಣ ಇದೆ. ಅದರಲ್ಲಿ 11.57 ಕೋಟಿ ಖಾತೆಗಳು ನಿಷ್ಕ್ರಿವಾಗುವುದರಿಂದ ಪ್ರತಿ ಖಾತೆಯಲ್ಲಿ ಸರಾಸರಿ 10 ರೂ. ಎಂದರೂ ನಿಷ್ಕ್ರಿಯ ಖಾತೆಗಳ ಮೊತ್ತ 110 ಕೋಟಿ ರೂ. ದಾಟುತ್ತದೆ. ಅದರ ಹೊರತಾಗಿಯೂ ಜನ್‌ಧನ್‌ ಯೋಜನೆಯಡಿ ಹೊಸ ಖಾತೆಗಳಾಗುತ್ತಿದ್ದರೂ, ಅದರ ಪ್ರಮಾಣ ಕಡಿಮೆಯಾಗಿದೆ.

ಪ್ರತಿ ವರ್ಷ 15 ರಿಂದ 30 ಸಾವಿರ ನಿಷ್ಕ್ರಿಯ 

ಇದೇ ವೇಳೆ, ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗುವುದು, ಮರು ಚಾಲನೆಯಾಗುವುದು ನಿರಂತರ ಪ್ರಕ್ರಿಯೆ ಎಂದು ಹಣಕಾಸು ಇಲಾಖೆ ಸಮಜಾಯಿಷಿ ನೀಡಿದೆ. ಆದರೆ, ಆ ಸಂಖ್ಯೆ ದೊಡ್ಡದು ಎನ್ನುವುದೇ ಕುತೂಹಲಕಾರಿ. ಕರ್ನಾಟಕದಲ್ಲಿ ಪ್ರತಿ ವರ್ಷ 15-30 ಸಾವಿರ ಖಾತೆಗಳು ನಿಷ್ಕ್ರಿಯಗೊಳ್ಳುತ್ತಿವೆ. ಗ್ಯಾರಂಟಿ ಯೋಜನೆ ಬಳಿಕ ಅಂಚೆ ಬ್ಯಾಂಕ್‌ ಖಾತೆಗಳ ಸಂಖ್ಯೆ ಹೆಚ್ಚಾಗಿದೆ. ಜನ್‌ಧನ್‌ ಖಾತೆಯಲ್ಲಿ ಹಣ ಹಿಂಪಡೆಯುವುದಕ್ಕೆ ಮಿತಿ ಇರುವುದರಿಂದ ಖಾತೆ ನಿಷ್ಕ್ರಿಯಕ್ಕೆ ಕಾರಣವಾಗಿರಬಹುದು.

ಭಯೋತ್ಪಾದನೆ ಹೆಚ್ಚಿರುವ ಜಮ್ಮು ಕಾಶ್ಮೀರದಲ್ಲಿಯೂ ಜನಧನ್‌ ಖಾತೆಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದು ಕಂಡುಬಂದಿದೆ. ಸಕ್ರಿಯ ಖಾತೆಗಳ ಸಂಖ್ಯೆಯೂ ಕಡಿಮೆ ಇದೆ. 2020-21ರಲ್ಲಿ ಇದ್ದ 24.67 ಲಕ್ಷ ಜನಧನ್‌ ಖಾತೆಗಳ ಪೈಕಿ 14.92 ಲಕ್ಷ ಖಾತೆಗಳು ಸಕ್ರಿಯವಾಗಿದ್ದವು. 2023-24ರ ವೇಳೆಗೆ ಒಟ್ಟು ಖಾತೆಗಳು 27.36 ಲಕ್ಷ ಆಗಿದ್ದು, ಅದರಲ್ಲಿ 19.66 ಲಕ್ಷ ಖಾತೆಗಳಷ್ಟೇ ಸಕ್ರಿಯವಾಗಿವೆ. 2024-25ನೇ ಸಾಲಿನಲ್ಲಿ 22-1-2025 ವರೆಗಿನ ಮಾಹಿತಿ ಪ್ರಕಾರ, ಜಮ್ಮು ಕಾಶ್ಮೀರದಲ್ಲಿ ಒಟ್ಟು ಖಾತೆಗಳ ಸಂಖ್ಯೆ 23 ಲಕ್ಷಕ್ಕೆ ಇಳಿದಿದೆ. ಅದರಲ್ಲಿ 17.37 ಲಕ್ಷ ಖಾತೆಗಳಷ್ಟೇ ಚಾಲ್ತಿಯಲ್ಲಿವೆ ಎಂದು ಕೇಂದ್ರ ಆರ್ಥಿಕ ಇಲಾಖೆಯು ರಾಜ್ಯಸಭಾ ಸಂಸದರಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ. 

ಜನ್‌ಧನ್‌ ಖಾತೆಗಳು ಬಳಕೆಯಲ್ಲಿ ಇಲ್ಲದೇ ಇದ್ದರೆ, ಕಾಲ ಕಾಲಕ್ಕೆ ಕೆವೈಸಿ ಮಾಡದೆ ಇದ್ದರೆ ನಿಷ್ಕ್ರಿಯ ಆಗುತ್ತವೆ. ಗ್ರಾಹಕರು ಸಂಬಂಧಿಸಿದ ದಾಖಲೆ ಕೊಟ್ಟು ಮರು ಚಾಲನೆ ಮಾಡಿಸಬಹುದು. 10 ವರ್ಷ ನಿಷ್ಕ್ರಿಯವಾದರೆ ಖಾತೆಯ ಹಣ ಆರ್‌ಬಿಐಗೆ ಜಮಾ ಆಗುತ್ತದೆ ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಗಳು.

The Pradhan Mantri Jan Dhan Yojana (PMJDY), launched with the aim of promoting financial inclusion, is witnessing a sharp decline in active participation as over 11.57 crore Jan Dhan accounts across the country have turned inactive. According to the latest data from the Ministry of Finance, the number of dormant Jan Dhan accounts has been steadily increasing year after year. Analysts attribute this trend to a lack of regular transactions, limited banking literacy, and the perception among account holders that the scheme offers little long-term benefit beyond initial incentives.