ಬ್ರೇಕಿಂಗ್ ನ್ಯೂಸ್
19-04-25 03:04 pm HK Staff ಕರ್ನಾಟಕ
ಬೆಂಗಳೂರು, ಎ.19: ಹಿಂದೂಗಳ ರೀತಿಯಲ್ಲೇ ಮುಸ್ಲಿಮರಲ್ಲು 93 ಜಾತಿ, ಉಪ ಜಾತಿಗಳಿದ್ದು ಜಾತಿ ಸಮೀಕ್ಷೆ ಸಂದರ್ಭದಲ್ಲಿ ಪತ್ತೆ ಆಗಿರುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರ ಮನವಿಯಂತೆ ಅವುಗಳನ್ನು ಪರಿಶೀಲಿಸಿ ನಾವು ತೀರ್ಮಾನ ತಗೊಂಡಿದ್ದೇವೆ. ಮುಸ್ಲಿಮರ ಉಪ ಜಾತಿಗಳನ್ನು ಒಂದೇ ಕಡೆ ತೋರಿಸಲಾಗಿದೆ. ಹಿಂದೂಗಳನ್ನು ಬೇರೆ ಬೇರೆ ತೋರಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಮರನ್ನು ಒಂದೇ ಕಡೆಯಲ್ಲಿ ಸೇರಿಸಿದ್ದೇವೆ. ಆದಾಗ್ಯೂ, ಕೆಲವು ಬೇರೆ ಬೇರೆಯೂ ಇವೆ. ಕೆಲವರನ್ನು ಅಲೆಮಾರಿಯಲ್ಲೂ ಸೇರಿಸಲಾಗಿದೆ. ಈಗ ಪಿಂಜಾರ, ಪಿಂಜಾರ ಜಪ್ಪರ್ ಇವರೆಲ್ಲ ಇದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಸಿದ್ಧಪಡಿಸಲಾಗಿರುವ ಜಾತಿ ಗಣತಿ ವರದಿಯಲ್ಲಿ ಯಾವುದೇ ದೊಡ್ಡ ತಪ್ಪಿಲ್ಲ. ನನಗೆ ವರದಿ ಅಥವಾ ಸಂಗ್ರಹಿಸಲಾದ ಮಾಹಿತಿಯಲ್ಲಿ ಯಾವುದೇ ದೊಡ್ಡ ತಪ್ಪು ಇದೆ ಅನಿಸುತ್ತಿಲ್ಲ. ಸಣ್ಣ ಪುಟ್ಟ ತಪ್ಪುಗಳಿರಬಹುದು. ಇದರ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಇನ್ನು ಕೆಲವರು ವರದಿಯನ್ನು ಪರಿಶೀಲಿಸದೆ, ಓದದೆ ಜಾತಿ ಗಣತಿ ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿ ವರದಿಗೆ ಸಹಿ ಮಾಡಿದ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮೀಸಲಾತಿ ಮಿತಿ ಕುರಿತು ಮಾತನಾಡಿದ ಹೆಗ್ಡೆ, ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗದ ಮೀಸಲಾತಿಯನ್ನು ಶೇಕಡಾ 10 ರಷ್ಟು ಹೆಚ್ಚಿಸಿದೆ. ಸಾಂವಿಧಾನಿಕ ತಿದ್ದುಪಡಿಗೆ ನ್ಯಾಯಾಲಯವು ತನ್ನ ಸಮ್ಮತಿಯನ್ನು ನೀಡಿದೆ. ಭವಿಷ್ಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ. ಅದನ್ನು ನ್ಯಾಯಾಂಗದ ವಿವೇಚನೆಗೆ ಬಿಡಲಾಗಿದೆ ಎಂದರು.
Karnataka State Commission for Backward Classes chairman K Jayaprakash Hegde on Thursday asserted that there is no major mistake in the caste census report prepared by the state government. “I don’t think there is any mistake in the report or the data. There may be small mistakes, but there are no major mistakes in the report. It is with the Cabinet. They will discuss and then take a decision,” chairman Hegde told media persons.
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm