ಬ್ರೇಕಿಂಗ್ ನ್ಯೂಸ್
18-04-25 05:38 pm HK News Desk ಕರ್ನಾಟಕ
ಬೀದರ್, ಏ 18: ಜನಿವಾರ ಕಳಚಿಟ್ಟರಷ್ಟೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿ ತಾಕೀತು ಮಾಡಿದ್ದರಿಂದ ಮನನೊಂದ ವಿದ್ಯಾರ್ಥಿ ಪರೀಕ್ಷೆ ಬರೆಯದೇ ಮನೆಗೆ ಹಿಂತಿರುಗಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಚೌಬಾರ ನಿವಾಸಿ ಸುಚಿವ್ರತ್ ಬೆಳಿಗ್ಗೆ ಕೆ–ಸಿಇಟಿ ಗಣಿತ ವಿಷಯದ ಪರೀಕ್ಷೆ ಬರೆಯಲು ಗುಂಪಾ ಸಮೀಪದ ಸಾಯಿ ಸ್ಫೂರ್ತಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದರು. ಕೇಂದ್ರದ ಪ್ರವೇಶ ದ್ವಾರದಲ್ಲಿ ತಪಾಸಣೆ ನಡೆಸಿದ ಸಿಬ್ಬಂದಿ, ಸುಚಿವ್ರತ್ ಜನಿವಾರ ಕಳಚಿಟ್ಟು ಪರೀಕ್ಷಾ ಕೇಂದ್ರದೊಳಗೆ ಹೋಗಬೇಕೆಂದು ತಿಳಿಸಿದ್ದಾರೆ. ‘ಜನಿವಾರ ಪರಿಶೀಲಿಸಿ, ಇದರಲ್ಲಿ ಅಕ್ರಮ ಎಸಗುವ ಯಾವುದೇ ವಸ್ತುವಿಲ್ಲ. ಅದನ್ನು ತೆಗೆದಿಡಲು ಆಗುವುದಿಲ್ಲ’ ಎಂದು ಸುಚಿವ್ರತ್ ಹೇಳಿದ್ದಾರೆ. ಆದರೆ, ಅದಕ್ಕೆ ಸಿಬ್ಬಂದಿ ಕಿವಿಗೊಟ್ಟಿಲ್ಲ. ‘ಜನಿವಾರದ ಧಾರದಿಂದ ನೀವು ಏನಾದರೂ ಮಾಡಿಕೊಂಡರೆ ಯಾರು ಹೊಣೆಗಾರರು. ಅದನ್ನು ತೆಗೆದಿಟ್ಟು ಒಳಗೆ ಹೋಗಿ, ಇಲ್ಲವಾದರೆ ಇಲ್ಲಿಂದ ಮನೆಗೆ ಹೋಗಿ’ ಎಂದು ಸಿಬ್ಬಂದಿ ಹಾಗೂ ಪೊಲೀಸರು ಸೂಚಿಸಿದ್ದಾರೆ. ಇದರಿಂದ ತೀವ್ರ ಬೇಸರಗೊಂಡು ಗಣಿತ ವಿಷಯದ ಪರೀಕ್ಷೆ ಬರೆಯದೇ ಮನೆಗೆ ಹಿಂತಿರುಗಿದ್ದಾರೆ.
ಸುಚಿವ್ರತ್ ಸಾಯಿಸ್ಫೂರ್ತಿ ಕಾಲೇಜಿನಲ್ಲೇ ಬುಧವಾರ (ಏ.16) ಬೆಳಿಗ್ಗೆ ಹಾಗೂ ಮಧ್ಯಾಹ್ನ ಕ್ರಮವಾಗಿ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ಪರೀಕ್ಷೆಯನ್ನು ಜನಿವಾರ ಧರಿಸಿಕೊಂಡೇ ಬರೆದಿದ್ದರು. ಆಗ ಪರೀಕ್ಷಾ ಕೇಂದ್ರದ ಸಿಬ್ಬಂದಿ ಜನಿವಾರ ಧರಿಸಿದ್ದಕ್ಕೆ ಆಕ್ಷೇಪಿಸಿರಲಿಲ್ಲ. ಆದರೆ, ಗುರುವಾರ (ಏ.17) ಬೆಳಿಗ್ಗೆ ನಡೆದ ಗಣಿತ ವಿಷಯದ ಪರೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಸಿಬ್ಬಂದಿಯ ಪ್ರಮಾದಕ್ಕೆ ಸುಚಿವ್ರತ್ ತಾಯಿ, ಪ್ರಾಧ್ಯಾಪಕಿ ನೀತಾ ಕುಲಕರ್ಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಬೆಳಿಗ್ಗೆ 10.30ಕ್ಕೆ ಪರೀಕ್ಷೆ ನಿಗದಿಯಾಗಿತ್ತು. ನನ್ನ ಮಗ 15 ನಿಮಿಷ ಮುಂಚೆಯೇ ಕೇಂದ್ರಕ್ಕೆ ಹೋಗಿದ್ದ. ಘಟನೆ ನಡೆದ ನಂತರ ವಿಷಯ ತಿಳಿಸಲು ನನಗೆ ಹಲವು ಸಲ ಕರೆ ಮಾಡಿದ್ದ. ನಾನು ಬೇರೊಂದು ಊರಿನಲ್ಲಿ ದೇವಸ್ಥಾನದಲ್ಲಿ ಇದ್ದ ಕಾರಣ ಕರೆ ಸ್ವೀಕರಿಸಲು ಆಗಿರಲಿಲ್ಲ’ ಎಂದು ತಾಯಿ ನೀತಾ ಕುಲಕರ್ಣಿ' ತಿಳಿಸಿದ್ದಾರೆ.
ದೇವಸ್ಥಾನದಿಂದ ಹೊರಬಂದಾಗ ಮೊಬೈಲ್ನಲ್ಲಿದ್ದ ಮಿಸ್ಡ್ ಕಾಲ್ ನೋಡಿ ಮಗನೊಂದಿಗೆ ಮಾತನಾಡಿದಾಗ ವಿಷಯ ಗಮನಕ್ಕೆ ಬಂದಿದೆ. 11.15ರಿಂದ 11.30ರ ನಡುವೆ ಕಾಲೇಜಿನ ಪ್ರಾಂಶುಪಾಲರಿಗೆ ಕರೆ ಮಾಡಿ ಮಾತನಾಡಿದೆ. ನಮ್ಮವರಿಂದ ಪ್ರಮಾದವಾಗಿದೆ. ಪರೀಕ್ಷೆಗೆ ಮಗನನ್ನು ಕಳಿಸಿಕೊಡಿ ಎಂದು ಹೇಳಿದ್ದಾರೆ. ಅಷ್ಟರಲ್ಲಾಗಲೇ ಒಂದು ಗಂಟೆ ಕಳೆದು ಹೋಗಿತ್ತು. ಪರೀಕ್ಷೆ ಬರೆದರೂ ಏನೂ ಪ್ರಯೋಜನವಿಲ್ಲ ಎಂದು ಮಗನನ್ನು ಕಳಿಸಲಿಲ್ಲ. ಆದರೆ, ಮಧ್ಯಾಹ್ನ ನಿಗದಿಯಾಗಿದ್ದ ಜೀವಶಾಸ್ತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದಾರೆ ಎಂದು ಹೇಳಿದ್ದಾರೆ.
ಮೊದಲ ದಿನ ನಡೆದ ಎರಡು ವಿಷಯದ ಪರೀಕ್ಷೆಗಳನ್ನು ಜನಿವಾರ ಧರಿಸಿಕೊಂಡೇ ನನ್ನ ಮಗ ಬರೆದಿದ್ದ. ಆಗ ಯಾರೂ ಆಕ್ಷೇಪ ಎತ್ತಿರಲಿಲ್ಲ. ಆದರೆ, ಎರಡನೇ ದಿನ ಅದನ್ನು ತೆಗೆದು ಹೋಗಬೇಕೆಂದು ಹೇಳಿದ್ದರಿಂದ ಅವನಿಗೆ ತೀವ್ರ ಆಘಾತವಾಗಿದೆ. ನೊಂದುಕೊಂಡಿದ್ದಾನೆ. ಆತನಿಗೆ ಒಂದು ವಿಷಯದ ಪರೀಕ್ಷೆ ಬರೆಯಲು ಆಗಿಲ್ಲ. ಒಂದು ವರ್ಷದ ಶ್ರಮ ವ್ಯರ್ಥವಾಗಿದೆ. ಆತನ ಉನ್ನತ ಶಿಕ್ಷಣಕ್ಕೆ ತೀವ್ರ ಹಿನ್ನಡೆಯಾಗಿದೆ. ಆತನ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆ ಆಗದಂತೆ ಸರ್ಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮನೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಭೇಟಿ ;
ಇನ್ನು ಸುಚಿವ್ರತ್ ನಿವಾಸಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಶುಕ್ರವಾರ ಭೇಟಿ ನೀಡಿದರು.
ಸುಚಿವ್ರತ್ ಹಾಗೂ ಅವರ ಪೋಷಕರಿಗೆ ಧೈರ್ಯ ತುಂಬಿದ ಕೋಸಂಬೆ, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನ್ಯಾಯ ಒದಗಿಸುವ ಭರವಸೆ ನೀಡಿದರು.
ಭಾರತ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಸಮಾನತೆಯ ಹಕ್ಕಿನಡಿಯಲ್ಲಿ ಬರುವ ಕಲಂ 15ರಲ್ಲಿ ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವುದು ನಿಷೇಧಿಸಲಾಗಿದೆ ಎಂದು ಹೇಳಿದರು.
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ನವೆಂಬರ್ 20, 1989ರಲ್ಲಿ ಅಂಗೀಕಾರವಾದಂತೆ ಭಾರತ ಸರ್ಕಾರವು 1992 ಡಿಸೆಂಬರ್ 11ರಂದು ಸಹಿ ಮಾಡಿರುವಂತೆ ಪರಿಚ್ಛೇದ 14ರ ಅಡಿ ಆತ್ಮಸಾಕ್ಷಿ ಹಾಗೂ ಧರ್ಮದ ಅನುಸರಣೆಯ ಧಾರ್ಮಿಕ ಹಕ್ಕಿನ ಉಲ್ಲಂಘನೆ ಇದು. ಜನಿವಾರ ಕಾರಣಕ್ಕಾಗಿ ಪರೀಕ್ಷಾ ಕೇಂದ್ರದೊಳಗೆ ತೆರಳಲು ಬಿಡದೇ ಸಾಯಿಸ್ಫೂರ್ತಿ ಕಾಲೇಜಿನ ಸಿಬ್ಬಂದಿ ಪ್ರಮಾದ ಎಸಗಿದ್ದಾರೆ. ಅವರ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಬೇಕು. ಈ ಸಂಬಂಧ ಸಂಬಂಧಿಸಿದವರೊಂದಿಗೆ ಚರ್ಚಿಸುವೆ ಎಂದು ತಿಳಿಸಿದರು
In a troubling incident in Bidar, a student named Suchivrath was prevented from taking his mathematics examination for the Common Entrance Test (CET) due to his traditional attire, specifically the janivar, a sacred thread worn by boys of certain communities. The incident occurred when Suchivrath arrived at the examination center and was stopped by security personnel, who cited adherence to dress code policies as the reason for barring him from the exam. Frustrated and disheartened, the young student was forced to return home without being able to sit for the crucial test, which could significantly impact his academic future.
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm