ಬ್ರೇಕಿಂಗ್ ನ್ಯೂಸ್
03-03-25 08:11 pm HK News Desk ಕರ್ನಾಟಕ
ಕೊಪ್ಪಳ, ಮಾ 03: ರಾಜ್ಯ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಡಿಸಿಎಂ ಡಿಕೆ ದೆಹಲಿಗೆ ಹೋಗಿ ಬಂದ ಬಳಿಕ ನೀಡಿದ ಹೇಳಿಕೆಗಳು ಮತ್ತೊಂದು ಸಿಎಂ ಸಿದ್ದರಾಮಯ್ಯ ಆಪ್ತ ಬಣದಲ್ಲಿ ನಡುಕ ಹುಟ್ಟಿಸಿದೆ. ಅಷ್ಟೇ ಅಲ್ಲದೇ ಸಿಎಂ ಸ್ಥಾನ ನೀಡದಿದ್ರೆ ಬಿಜೆಪಿ ಸೇರುವ ಎಚ್ಚರಿಕೆಯ ಸಂದೇಶವನ್ನೂ ಡಿಕೆ ಶಿವಕುಮಾರ್ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರು ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದರೆ, ಡಿಕೆಶಿ ಪರವಾಗಿ ಬೆರಳೆಣಿಕೆಯಷ್ಟು ಜನರು ಮಾತ್ರ ಮಾತನಾಡುತ್ತಿದ್ದಾರೆ. ಈ ನಡುವೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಡಿಕೆ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಸಿದ್ದರಾಮಯ್ಯನವರಿಗೆ ವಯಸ್ಸಾಗಿದೆ, ಅವರಿಗೆ ಆರೋಗ್ಯದ ಸಮಸ್ಯೆ ಕೂಡ ಇದೆ ಹಾಗಾಗಿ ಅವರು ಸಿಎಂ ಸ್ಥಾನ ಬಿಟ್ಟು ಕೊಡಬಹುದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಡಿಕೆ ಶಿವಕುಮಾರ್ ಅವರು ತಾವು ಹಿಂದೂ ಎನ್ನುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ, ಡಿಕೆ ಹಿಂದೂವಾಗಿ ಹುಟ್ಟಿದ್ದಾರೆ. ಹಿಂದೂವಾಗಿಯೇ ಮುಂದುವರಿಯುತ್ತಾರೆ. ಅವರು ಮಾಡುತ್ತಿರುವ ಪೂಜೆ, ಹಿಂದೂ ಸಂಸ್ಕೃತಿ ಆಚರಣೆಯಾಗಿದೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅವರ ರಾಜಕೀಯ ಏನೇ ಆಗಿರಲಿ, ಅವರು ಸಾರ್ವಜನಿಕವಾಗಿ ಪೂಜೆ ಪುನಸ್ಕಾರ ಮಾಡುತ್ತಿರುವುದು ಇದೇ ಮೊದಲಲ್ಲ ಎಂದು ಹೇಳಿದ್ದಾರೆ.
ಇನ್ನು ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿ ಆಗಿದೆ. ಹಿಂದುಳಿದ ವರ್ಗಗಳ, ಎಸ್ಸಿಪಿ ಟಿಎಸ್ಪಿ ಹಣ ದುರ್ಬಳಕೆ ಮಾಲಾಗುತ್ತಿದೆ. ಪ್ರಾರಂಭಿಕ 6 ಪಂಚ ವಾರ್ಷಿಕ ಯೋಜನೆಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆ ತರಲಿಲ್ಲ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಇದರ ನಡುವೆ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ ಅವರು, ದಲಿತರಿಗೆ ಅನ್ಯಾಯ ಮಾಡಿ ಅಹಿಂದ ನಾಯಕ ಅಂತ ಹೇಳ್ತೀರಲ್ಲ, ನಿಮಗೆ ನಾಚಿಕೆ ಆಗೋದಿಲ್ವಾ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
ಖರ್ಗೆ ಅವರೇ, ನೀವಾದರೂ ಸಿದ್ದರಾಮಯ್ಯಗೆ ಬುದ್ದಿ ಹೇಳಬೇಕಿತ್ತು. ಖರ್ಗೆ ಅವರ ದಲಿತರ ವಿಚಾರದಲ್ಲಿ ಸುಮ್ಮನಾಗಿದ್ದಾರೆ. ಕಾಂಗ್ರೆಸ್ ಪಕ್ಷ ದಲಿತರಿಗೆ ಅನ್ಯಾಯ ಮಾಡಿದೆ, ಅದರೂ ದಲಿತ ನಾಯಕರು ಯಾರು ಅದನ್ನು ಕೇಳುತ್ತಿಲ್ಲ ಯಾಕೆ? ಎಂದು ಅವರು ಪ್ರಶ್ನೆ ಮಾಡಿದರು.
Siddaramaiah should resign due to health issues says Janardhana Reddy, indirectly supports DK Shivakumar. Karnataka Chief Minister Siddaramaiah is likely to step down from his position due to personal and health issues, which may lead to the collapse of the Congress government in the state, claimed Gangavathi MLA Gali Janardhan Reddy.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
18-04-26 11:39 pm
HK News Desk
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
ಹೊಟ್ಟೆನೋವೆಂದು ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಗೆ ಬಿ...
17-04-26 11:27 am
250 ರೋಹಿಂಗ್ಯಾಗಳಿದ್ದ ಬೋಟ್ ಅಂಡಮಾನ್ ಸಮುದ್ರದಲ್ಲಿ...
16-04-26 01:09 pm
18-04-26 11:31 pm
HK News Desk
ಕುಂಪಲದಲ್ಲಿ ಏಕಾಏಕಿ ಕುಸಿದು ಬಿದ್ದ ಭಾರೀ ಗಾತ್ರದ ಆವ...
18-04-26 11:09 pm
ದಾವಣಗೆರೆ ಫಲಿತಾಂಶ ಏನಾಗುತ್ತೆಂದು ಹೇಳಲು ನಾನು ಜ್ಯೋ...
18-04-26 08:10 pm
ಕೊಣಾಜೆ ; ಪೊಳಲಿ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲ...
17-04-26 10:32 pm
ಬಿ.ಸಿ.ರೋಡ್ - ಪುಂಜಾಲಕಟ್ಟೆ ಸೇರಿ ರಾಷ್ಟ್ರೀಯ ಹೆದ್...
17-04-26 08:56 pm
18-04-26 10:37 pm
HK News Staffer
180 ಅಪ್ರಾಪ್ತ ಬಾಲಕಿಯರ 350 ಅಶ್ಲೀಲ ವಿಡಿಯೋ ವೈರಲ್...
18-04-26 03:50 pm
ಟಿಸಿಎಸ್ ಕಂಪನಿಯಲ್ಲಿ ಕಾರ್ಪೊರೇಟ್ ಜಿಹಾದ್ ; ತಲೆಮರೆ...
17-04-26 06:48 pm
ದೂರವಾಣಿ ಮೂಲಕ ಕರೆ, ಬಾಡಿಗೆ ಮನೆಗಳಲ್ಲಿ ಮೀಟಿಂಗ್ ;...
16-04-26 10:36 pm
ಐಎಎಸ್ ಅಧಿಕಾರಿ ಎಂದು ನಂಬಿಸಿ ಸರ್ಕಾರಿ ವೈದ್ಯರಿಗೆ ವ...
16-04-26 07:35 pm