ಬ್ರೇಕಿಂಗ್ ನ್ಯೂಸ್
03-03-25 12:33 pm HK News Desk ಕರ್ನಾಟಕ
ಮೈಸೂರು, ಮಾ 03: "ನಟ-ನಟಿಯರು ಕನ್ನಡಿಗರಿಂದಲೇ ಕನ್ನಡ ನೆಲದಲ್ಲಿ ಸ್ಟಾರ್ ಆಗಿರುವುದು. ನಿಮಗೆ ಸಿನಿಮಾಗಳಿಗೆ ಸಬ್ಸಿಡಿ ಬೇಕು ಅಂದಾಗ, ನಮ್ಮ ಬಳಿ ಬರ್ತೀರ, ಆದ್ರೆ ಕನ್ನಡದ ನೆಲ, ಜಲ, ಭಾಷೆ ಬೇಡವೇ? ನಟ್ಟು, ಬೋಲ್ಟ್ ನಾಳೆ ಅಲ್ಲ, ಇವತ್ತೇ ಟೈಟ್ ಮಾಡ್ಬೇಕು" ಎಂದು ಡಿಕೆಶಿ ಹೇಳಿಕೆಯನ್ನ ಶಾಸಕ ಶಾಸಕ ರವಿಕುಮಾರ್ ಗಣಿಗ ಸಮರ್ಥಿಸಿಕೊಂಡರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಿ ನಟ್ ಬೋಲ್ಟ್ ಟೈಟ್ ಮಾಡಿ ರಿಪೇರಿ ಮಾಡಬೇಕೋ ಮಾಡುತ್ತೇವೆ ಎಂಬ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ತೆಲಂಗಾಣದಲ್ಲಿ ಸಿಎಂ ರೇವಂತ್ ರೆಡ್ಡಿ ಮಾಡಿರುವ ರೀತಿಯಲ್ಲೇ ನಾವೂ ಮಾಡಬೇಕು. ಕನ್ನಡದ ಕಾರ್ಯಕ್ರಮ ಎಂದರೆ ಕನ್ನಡದ ನಟರಿಗೆ ಏಕೆ ಅಸಡ್ಡೆ?. ವಿಧಾನಸೌಧದ ಮುಂದೆ ನಿಮಗಾಗಿ ಕಾರ್ಯಕ್ರಮ ಮಾಡಿದ್ದೇವೆ. ಮರ್ಯಾದೆಯಿಂದ ಆಹ್ವಾನ ಕಳುಹಿಸಿದ್ದರೆ ಏಕೆ ಬರುವುದಿಲ್ಲ?. ಕ್ಯಾನ್ಸರ್ ಕಾಯಿಲೆಗೆ ಶಸ್ತ್ರಚಿಕಿತ್ಸೆ ಆಗಿದ್ದರೂ ಶಿವರಾಜ್ ಕುಮಾರ್ ಬಂದಿದ್ದಾರೆ. ಇನ್ನುಳಿದವರಿಗೆ ಏನಾಗಿದೆ. ನಮ್ಮ ಸರ್ಕಾರ ಪ್ರಶಸ್ತಿ ಕೊಟ್ಟರೆ ಬೇಡ ಎನ್ನುತ್ತೀರಿ. ಅದೇ ಬಾಲಿವುಡ್ನವರು ಪ್ರಶಸ್ತಿ ಕೊಟ್ಟರೆ ಓಡಿ ಹೋಗಿ ತಗೆದುಕೊಳ್ಳುತ್ತೀರಿ" ಎಂದು ಕಿಡಿಕಾರಿದರು.
ಡಾ.ರಾಜಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರೆಲ್ಲ ರಾಜ್ಯೋತ್ಸವಕ್ಕೂ ಬರುತ್ತಿದ್ದರು. ಅಭಿಮಾನಿಗಳು ಅವರನ್ನು ಹೊತ್ತು ಮೆರೆಸಿದ್ದಕ್ಕೆ ಅವರು ಸ್ಟಾರ್ಗಳಾಗಿದ್ದು. ಈಗಿನ ನಟರಲ್ಲಿ ದರ್ಶನ್ ಹೊರತುಪಡಿಸಿ ಎಷ್ಟು ಜನ ರಾಜ್ಯೋತ್ಸವ ಸಮಾರಂಭಕ್ಕೆ ಬರುತ್ತಾರೆ?. ಇದೆಲ್ಲವನ್ನೂ ನಾವು ಪ್ರಶ್ನೆ ಮಾಡಬಾರದೇ?. ಕಾರ್ಯಕ್ರಮಕ್ಕೆ ಬರುವುದು ನಿಮ್ಮ ವಿವೇಚನೆಯಾದರೆ. ನಿಮ್ಮ ಸಿನಿಮಾ ನೋಡಬೇಕೇ ಬೇಡವೇ ಅನ್ನುವುದು ನಮ್ಮ ವಿವೇಚನೆ ಎಂದು ಶಾಸಕ ಗಣಿಕ ಎಚ್ಚರಿಕೆ ರವಾನಿಸಿದರು.
Mysuru Mla Ravi Kumar ganiga supports DK remarks on Kannada film industry. ‘I Know Where to Tighten the Nuts and Bolts’: DK Shivakumar Explodes Over Low Celebrity Turnout at Film Festival
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
18-10-26 10:36 am
Mangaluru Staffer
ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಘಟನೆ ; ತೀವ್ರ ಗಾಯಗೊ...
17-10-26 11:09 am
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am