ಬ್ರೇಕಿಂಗ್ ನ್ಯೂಸ್
30-01-25 11:09 pm Bangalore Correspondent ಕರ್ನಾಟಕ
ಬೆಂಗಳೂರು, ಜ.30: ಪಕ್ಷದ ವಿರುದ್ಧ ಮಾತಾಡುವ ಬದಲು ಸುಧಾಕರ್, ಯತ್ನಾಳ್ ಪಕ್ಷ ಬಿಟ್ಟು ಹೋಗಲಿ. ತಾಕತ್ತಿದ್ದರೆ ಪಕ್ಷ ಬಿಟ್ಟು ಹೋಗಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ಬರಲಿ. ಆಗ ನಿಮ್ಮ ಜನಪ್ರಿಯತೆ ಒಪ್ಪಿಕೊಳ್ಳುತ್ತೇವೆ ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬಿಜೆಪಿಗೆ ಬಂದು ವಾಪಸ್ ಹೋಗಿ ಉದ್ಧಾರ ಆದವರು ಇಲ್ಲ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರೂ ವಾಪಸ್ ಬಿಜೆಪಿಗೆ ಬಂದೇ ಸಿಎಂ ಆಗಿದ್ದರು. ಸುಧಾಕರ್ ಅವರೇ, ನೀವು ಪಕ್ಷದಲ್ಲಿ ಇರಿ ಅಂತ ನಾವಂತೂ ಹೇಳಲ್ಲ. ಹೋದರೆ ಸನ್ಮಾನ ಮಾಡಿ ಕಳುಹಿಸಿ ಕೊಡುತ್ತೇವೆ. ಆಮೇಲೆ ಪಕ್ಷ ಸಂಘಟನೆ ಮಾಡುತ್ತೇವೆ. ಮುಂದಿನ ಚುನಾವಣೆಗೆ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನಾನೇ ಪ್ರವಾಸ ಮಾಡುತ್ತೇನೆ ಎಂದು ಚಾಲೆಂಜ್ ಮಾಡಿದರು.
ವಿಧಾನಸೌಧದಲ್ಲಿ ಸುಧಾಕರ್ ಮೇಲೆ ಹಲ್ಲೆ ಆದಾಗ ರಕ್ಷಿಸಿ ಮನೆಗೆ ಕರೆದುಕೊಂಡು ಹೋಗಿದ್ದು ನಾನು. ಸಮರ್ಥ ಸಚಿವರಾಗಿದ್ದೂ ಸಾಕಷ್ಟು ಅನುದಾನ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹಾಕಿದರೂ ಯಾಕೆ ನೀವು ಸೋತಿರಿ? ನಿಮಗೆ ಅಸಮಾಧಾನ ಇರಬಹುದು. ಆದರೆ ವಿಜಯೇಂದ್ರ ಬಗ್ಗೆ ಬಹಿರಂಗವಾಗಿ ಮಾತಾಡಿದ್ರಿ? ನನಗೂ ವಿಜಯೇಂದ್ರ ಬಗ್ಗೆ ಸಣ್ಣ ಪುಟ್ಟ ಅಸಮಾಧಾನ ಇದ್ದರೂ ನಾನು ಎಲ್ಲೂ ಹೊರಗೆ ಮಾತಾಡಿಲ್ಲ. ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ನಿಲ್ಲುವ ಬಗ್ಗೆ ಮಾತಾಡಿದ್ದು ಸುಳ್ಳಾ? ಎಲ್ಲಿ ಪ್ರಮಾಣ ಮಾಡಬೇಕು ಹೇಳಿ, ನಾನು ಬರುತ್ತೇನೆ ಎಂದು ಸವಾಲು ಹಾಕಿದರು.
ಆಗ ನಾವು ವಿರೋಧ ಮಾಡಿದ್ದು ನಿಜ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನನ್ನ ಮಗನ ಹೆಸರು ಹೇಳಿದ್ದೆ ಅಷ್ಟೇ. ನೀನು ಎಷ್ಟು ಲೀಡ್ ತಗೊಂಡೆ? ಚಿಕ್ಕಬಳ್ಳಾಪುರದಲ್ಲಿ ಯಾಕೆ ಸೋತೆ ನೀನು? ಬಾಗೇಪಲ್ಲಿಯಲ್ಲಿ ಯಾಕೆ ಸೋತೆ? ಯಲಹಂಕ ಕ್ಷೇತ್ರದ ಕಾರ್ಯಕರ್ತರ ಬಗ್ಗೆ ನಿನ್ನೆ ಮಾತಾಡಿದ್ದೀರಿ. ಅಮಿತ್ ಶಾ ಕರೆದು ಮಾತಾಡಿದ ಮೇಲೆ ನಾನು ಚುನಾವಣೆಗೆ ಕೆಲಸ ಮಾಡಿದ್ದೇನೆ. ನಾನು ಯಲಹಂಕ ಕ್ಷೇತ್ರಕ್ಕೆ ಸುಧಾಕರ್ ಕರೆಸಿದ್ದು ಮೂರೇ ದಿನ. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದು ಸಾಬೀತು ಮಾಡಿದರೆ ರಾಜಕೀಯ ಬಿಟ್ಟು ಬಿಡುತ್ತೇನೆ ಎಂದು ವಿಶ್ವನಾಥ್ ಹೇಳಿದರು.
ನಿಮ್ಮಂತವರು ಪಕ್ಷ ಬಿಟ್ಟು ಹೋದರೇನೇ ಸರಿ, ನನಗೆ ರಾಜ್ಯಾಧ್ಯಕ್ಷರು ಜವಾಬ್ದಾರಿ ಕೊಡಲಿ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಸಂಘಟನೆ ಮಾಡಿ ತೋರಿಸುತ್ತೇನೆ, ಚಾಲೆಂಜ್ ಇದು. ನಾನು ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಸಿದ್ಧ. ನೂರಕ್ಕೆ ನೂರು ನೀನು ಪಕ್ಷದಲ್ಲಿ ಇರಲ್ಲ. ಒಂದು ಕಾಲು ಹೊರಗೆ ಇಟ್ಟೇ ರಾಜಕೀಯ ಮಾಡುತ್ತಿದ್ದಾರೆ. ಎಲ್ಲಿ ಅಧಿಕಾರ ಇರುತ್ತೋ ಅಲ್ಲಿ ಹೋಗುತ್ತಾರೆ. ಪಕ್ಷವನ್ನೇ ಅಲ್ಲಾಡಿಸಲು ಹೋದರೆ ಗತಿ ಅಷ್ಟೇ ಎಂದು ಟೀಕಿಸಿದರು.
SR Vishwanath open challenge to Yatnal and Sudhakar, stating that if they both have guts let them win the elections by standing as independent candidates
14-08-25 01:48 pm
Bangalore Correspondent
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
14-08-25 11:26 am
HK News Desk
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 11:51 am
HK Staff
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm