ಬ್ರೇಕಿಂಗ್ ನ್ಯೂಸ್
30-01-25 10:11 pm Bangalore Correspondent ಕರ್ನಾಟಕ
ಬೆಂಗಳೂರು, ಜ.30: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಮತ್ತೆ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಪಕ್ಷ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ? ಇವರ ಉದ್ದೇಶ ಪಕ್ಷ ಕಟ್ಟಬೇಕೋ ಅಂತನೋ ಕಂಪನಿ ಕಟ್ಟಬೇಕು ಅಂತಾನೋ ? ಇವರ ದುಡ್ಡು ಮಾತ್ರ ಈಗ ಮಾತನಾಡ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗುತ್ತೆ ಎಂಬ ವಿಚಾರದಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರಲ್ಲಿ ಒಂದು ಮನವಿ ಮಾಡ್ತೀನಿ. ಯಾಕೆ ಚುನಾವಣೆ ಸರ್ಕಸ್ ಮಾಡ್ತಿದ್ದೀರಾ? ನೇರವಾಗಿ ಅಧ್ಯಕ್ಷರನ್ನೇ ಘೋಷಣೆ ಮಾಡಿ ಕೈಬಿಟ್ಟುಬಿಡಿ. ಕಾರಜೋಳ ಅವರನ್ನ ಹೊಡೆಯಲು ಮುಂದಾದವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದೀರಾ. ಯಾವ ದಿಕ್ಕಿನಲ್ಲಿ ಪಕ್ಷ ಸಾಗುತ್ತಿದೆ ಎನ್ನುವುದನ್ನು ಇದು ಸೂಚಿಸ್ತಾ ಇದೆ ಎಂದರು.
ಅಣ್ಣಾ ಕೇಂದ್ರ ಮಂತ್ರಿಯಾಗಲಿ, ಅಪ್ಪ ಉಪ ರಾಷ್ಟ್ರಪತಿಯಾಗಲಿ ಎನ್ನುವ ರೀತಿ ಪಕ್ಷ ನಡೆಸಲು ಆಗೋದಿಲ್ಲ. ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷ ಮಾಡೋದಾದ್ರೆ ಮಾಡಿಬಿಡಿ, ಚುನಾವಣಾ ಪ್ರಕ್ರಿಯೆ ನಾಟಕ ಬೇಡ. ನಿಮಗೆ ಬೇಕಾದವರನ್ನ ಮತದಾರರನ್ನಾಗಿ ಮಾಡೋದಾದ್ರೆ ಮತದಾನ ಯಾಕೆ? ಎಂದು ಪ್ರಶ್ನಿಸಿದರು.
ಚುನಾವಣಾ ಪ್ರಕ್ರಿಯೆ ಸರಿಯಿದೆ ಎಂಬ ವಿಜಯೇಂದ್ರ ಹೇಳಿಕೆಗೆ ಯತ್ನಾಳ್ ತಿರುಗೇಟು ನೀಡಿದ್ದು, ಇವರು ಚಡ್ಡಿ ಹಾಕೋಕಿಂತ ಮುಂಚೆ ನಾನು ಜಿಲ್ಲಾಧ್ಯಕ್ಷ ಮತ್ತು ರಾಜ್ಯದ ಉಪಾಧ್ಯಕ್ಷನಾಗಿದ್ದೆ. ಯಡಿಯೂರಪ್ಪ ಒಬ್ಬರೇ ಪಕ್ಷ ಕಟ್ಟಿಲ್ಲ. ನಮ್ಮೆಲ್ಲರ ದುಡಿಮೆ ಇದೆ. ಈ ಬಚ್ಚಾನಿಂದ ಏನು ಕಲಿಯಬೇಕಾಗಿಲ್ಲ ಎಂದು ಕಿಡಿಕಾರಿದರು.
ಏನ್ ಮಾಡ್ತೀರಾ.. ಹೊರಗಡೆ ಹಾಗ್ತೀರಾ? ಅಪ್ಪನನ್ನ ಹೆದರಿಸಿರಬಹುದು. ಎಲ್ಲರನ್ನೂ ಹೆದರಿಸಲು ಆಗೋದಿಲ್ಲ. ನಾವು ಸತ್ಯದ ಪರವಾಗಿ ನಿಲ್ಲುತ್ತೇವೆ. ಈ ಹಿಂದೆ ಅರುಣ್ ಸಿಂಗ್ ಎಂಬ ರಾಜ್ಯ ಉಸ್ತುವಾರಿ ಇದ್ದಾಗ ವಿಜಯೇಂದ್ರರನ್ನು ಹೊಗಳಿ ಸಾಕಷ್ಟು ಅನುಕೂಲ ಮಾಡಿಕೊಂಡು ಹೋದ್ರು ಎಂದು ಆರೋಪಿಸಿದರು. ಪಕ್ಷ ಕಟ್ಟಲು ಎಲ್ಲರ ಸಲಹೆ ಬೇಕು. ಆದ್ರೆ ನಿಮಗೆ ಬೇಕಾದ ನಾಲ್ವರ ಸಲಹೆಗಳನ್ನಲ್ಲ. ಮಾಜಿ ಕೆಜೆಪಿಯಲ್ಲಿ ಅತಿನಿಷ್ಠರು ಯಾರು ಇದ್ರೋ ಅವರಿಗೆ ಮಾತ್ರ ಈಗ ಆದ್ಯತೆ ಸಿಗ್ತಿದೆ. ಹೊಂದಾಣಿಕೆಯಿಂದ ಪಕ್ಷವನ್ನು ಬಲಿ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Yatnal slams state president BY Vijayendra, says why election circus, directly announce the president. Yatnal expressed confidence of securing a win if he contested for the state BJP chief’s post. “My victory is imminent,” Yatnal announced to the media.
14-08-25 01:48 pm
Bangalore Correspondent
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
14-08-25 11:26 am
HK News Desk
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 11:51 am
HK Staff
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm