ಬ್ರೇಕಿಂಗ್ ನ್ಯೂಸ್
27-01-25 06:58 pm Bangalore Correspondent ಕರ್ನಾಟಕ
ಬೆಂಗಳೂರು, ಜ.27: ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮಕ್ಕೆ ಅದ್ಧೂರಿ ತೆರೆಬಿದ್ದಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಗ್ರ್ಯಾಂಡ್ ಫಿನಾಲೆ ಮುಕ್ತಾಯವಾಗಿದ್ದು, ವಿಜೇತರಾಗಿ ಹೊರಹೊಮ್ಮಿದ್ದಾರೆ ಕುರಿಗಾಹಿ ಹನುಮಂತ ಲಮಾಣಿ. ರೆಕ್ಕೆಗಳನ್ನೊಳಗೊಂಡ ಬಿಬಿಕೆ 11 ವಿನ್ನರ್ ಟ್ರೋಫಿ ಹಳ್ಳಿಹಕ್ಕಿ ಹನುಮಂತ ಲಮಾಣಿ ಪಾಲಾಗಿದೆ.
‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ವಿನ್ನರ್ ಆದ ಹನುಮಂತ ಲಮಾಣಿಗೆ ಒಟ್ಟು 5,23,89,318 ವೋಟ್ಸ್ ಬಿದ್ದಿವೆ. ‘ಬಿಗ್ ಬಾಸ್ ಕನ್ನಡ’ ಇತಿಹಾಸದ ಇಷ್ಟೂ ಸೀಸನ್‌ಗಳಲ್ಲಿ ವಿನ್ನರ್‌ಗೆ ಇಷ್ಟೊಂದು ವೋಟ್ಸ್ ಬಿದ್ದಿರೋದು ಇದೇ ಮೊದಲು!
ಹಾಗ್ನೋಡಿದ್ರೆ, ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ (ಮೈಲ್ಡ್ ಕಾರ್ಡ್ ಸ್ಪರ್ಧಿ) ಆಗಿ ಬಂದವರು ಹನುಮಂತ ಲಮಾಣಿ. ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿಯೇ ಓರ್ವ ವೈಲ್ಡ್ ಕಾರ್ಡ್ ಸ್ಪರ್ಧಿ ವಿನ್ನರ್ ಆಗಿರೋದು ಇದೇ ಮೊದಲು! ಆ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಹನುಮಂತ ಲಮಾಣಿ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದರೂ ವಿನ್ನರ್ ಆಗಬಹುದು ಅಂತ ಹನುಮಂತ ಲಮಾಣಿ ತೋರಿಸಿಕೊಟ್ಟಿದ್ದಾರೆ.
ಇನ್ನು ಗೆಲುವನ್ನು ಸಂಭ್ರಮಿಸಬೇಕಿದ್ದ ಕನ್ನಡ ಬಿಗ್ ಬಾಸ್ 11ರ ವಿಜೇತನ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಸವಣೂರು ತಾಲೂಕು ಚಿಲ್ಲೂರುಬಡ್ನಿಯಲ್ಲಿ ಹನುಮಂತನ ಮನೆ ಇದೆ. ಇಂದು ಇಲ್ಲಿ ಸಂತಸ ತುಂಬಿರಬೇಕಿತ್ತು. ಆದರೆ ಹನುಮಂತು ಬಿಗ್ ಬಾಸ್ ಟ್ರೋಫಿ ಎತ್ತಿಹಿಡಿಯುವ ಮುನ್ನವೇ ಅವರ ಚಿಕ್ಕಪ್ಪ ಇಹಲೋಕ ತ್ಯಜಿಸಿದ್ದಾರೆ. ಅವರ ಅಂತ್ಯಕ್ರಿಯೆ ಕೂಡ ಮುಗಿದಿದೆ. ಹನುಮಂತನ ನೋಡಲು ಊರಿಗೆ ಆಗಮಿಸುತ್ತಿರುವ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.
ಹನುಮಂತನ ಗೆಲುವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಮನೆ ಸದಸ್ಯರು ಬೆಂಗಳೂರಿಗೆ ಬಂದಿದ್ದರು. ಹೀಗಾಗಿ, ಮನೆಯಲ್ಲಿ ಹನುಮಂತನ ಮಾವ ಮತ್ತು ಅತ್ತಿಗೆ ಮಾತ್ರವಿದ್ದಾರೆ. ಸೂತಕ ಮುಗಿಯುವವರೆಗೆ ಯಾವುದೇ ಸಂಭ್ರಮಾಚರಣೆ ಮಾಡದಿರಲು ಹನುಮಂತನ ಸಂಬಂಧಿಕರು ನಿರ್ಧರಿಸಿದ್ದಾರೆ.
ಮೂರು ದಿನದ ಕಾರ್ಯ ಮುಗಿದ ಬಳಿಕ ಅಭಿಮಾನಿಗಳು ಭೇಟಿ ನೀಡಬಹುದು. ಸದ್ಯ ಬೆಂಗಳೂರಿನಲ್ಲಿ ಇರುವ ಹನುಮಂತನ ಕುಟುಂಬಸ್ಥರು ಇವತ್ತು ರಾತ್ರಿ ಅಥವಾ ನಾಳೆ ಬರುವ ಸಾಧ್ಯತೆ ಇದೆ.
ರನ್ನರ್ ಅಪ್ ತ್ರಿವಿಕ್ರಮ್! ;
‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಮೊದಲ ದಿನದಿಂದಲೂ ಇದ್ದು ಎಲ್ಲಾ ಪ್ರೆಶರ್‌ಗಳನ್ನ ಹ್ಯಾಂಡಲ್ ಮಾಡಿ, ಸವಾಲುಗಳನ್ನ ಎದುರಿಸಿದವರು ತ್ರಿವಿಕ್ರಮ್. ಟಾಸ್ಕ್‌ಗಳಲ್ಲಿ ಉತ್ತಮ ಪರ್ಫಾಮೆನ್ಸ್ ನೀಡುತ್ತಿದ್ದ ತ್ರಿವಿಕ್ರಮ್ ವಿನ್ನರ್ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ತ್ರಿವಿಕ್ರಮ್‌ಗೆ ಹೋಲಿಸಿದರೆ ಹನುಮಂತಗೆ ಹೆಚ್ಚು ವೋಟ್ಸ್ ಲಭಿಸಿವೆ. ಹೀಗಾಗಿ, ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಅಂದ್ಹಾಗೆ, ರನ್ನರ್ ಅಪ್ ತ್ರಿವಿಕ್ರಮ್‌ಗೆ 2 ಕೋಟಿಗೂ ಅಧಿಕ ವೋಟ್ಸ್ ಬಿದ್ದಿವೆ.
Hanumantha Lamani, a wildcard entrant, became the winner of the Bigg Boss Kannada 11 Grand Finale title. He also took home a cash prize of Rs 50 lakh. Trivikram was declared the first runner-up and Rajath the second runner-up of BB Season- 11.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 11:26 am
HK News Desk
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
14-08-25 01:12 pm
Mangaluru Staff
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
14-08-25 11:51 am
HK Staff
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm