ಬ್ರೇಕಿಂಗ್ ನ್ಯೂಸ್
20-01-25 04:24 pm HK News Desk ಕರ್ನಾಟಕ
ಹಾಸನ, ಜ.20: ಆನ್‌ಲೈನ್ ಗೇಮ್ ನಲ್ಲಿ ಹಣ ಕಳಕೊಂಡು ಬೇಸತ್ತ ಯುವಕನೊಬ್ಬ ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಲಾಡ್ಜ್‌ನಲ್ಲಿ ನಡೆದಿದೆ.
ಬೇಲೂರು ತಾಲ್ಲೂಕಿನ, ಚೀಕನಹಳ್ಳಿ ಗ್ರಾಮದ ಉಮೇಶ್ ಎಂಬುವವರ ಒಬ್ಬನೇ ಪುತ್ರ ರಾಕೇಶ್‌ಗೌಡ(25) ಆತ್ಮಹತ್ಯೆಗೆ ಶರಣಾದ ಯುವಕ. ತೀರ್ಥಹಳ್ಳಿಯ ಸ್ಪಂದನಾ ಸ್ಪೂರ್ತಿ ಫೈನಾನ್ಸ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಗೌಡ, ಕರ್ನಾಟಕ ರಕ್ಷಣಾ ವೇದಿಕೆ ಬೇಲೂರು ನಗರ ಘಟಕದ ಅಧ್ಯಕ್ಷನಾಗಿದ್ದ. ಎರಡು ವರ್ಷದಿಂದ ಆನ್‌ಲೈನ್ ಗೇಮ್ ಆಡಿ ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ. ಆ ಹಣವನ್ನು ತೀರಿಸಲು ನನ್ನಿಂದ ಆಗುತ್ತಿಲ್ಲ. ಕೊನೆಯದಾಗಿ ಈ ನಿರ್ಧಾರ ಮಾಡಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ, ಅಮ್ಮ ನನ್ನನ್ನು ಕ್ಷಮಿಸಿಬಿಡು. ಆನ್‌ಲೈನ್ ಗೇಮ್‌ನಿಂದಾಗಿ ಫೈನಾನ್ಸ್‌ನಲ್ಲಿ ಒಂದು ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡಿದ್ದೇನೆ ಎಂದು ಚೀಟಿ ಬರೆದಿಟ್ಟಿದ್ದಾನೆ.
ಆ ಹಣವನ್ನು ನಮ್ಮ ತಾಯಿಯ ಬಳಿ ಕೇಳಬಾರದು. ನನ್ನ ಸಾವಿನ ಸುದ್ದಿಯನ್ನು ನೇರವಾಗಿ ನನ್ನ ತಾಯಿಗೆ ಹೇಳಬೇಡಿ. ನಾನು ಸಾವಿನ ನಂತರ ನನ್ನ ಕಣ್ಣನ್ನು ದಾನ ಮಾಡಿ. ಬಸವರಾಜು ಅವರ ಹತ್ತಿರ ಐವತ್ತು ಸಾವಿರ ಸಾಲ ಮಾಡಿದ್ದೇನೆ, ನಿಮಗೆ ಕೊಡಲು ಆಗಲಿಲ್ಲ ಕ್ಷಮಿಸಿ. ನನ್ನ ಬೈಕ್ ಮಾರಟವಾದರೆ ಹಣ ತಲುಪುತ್ತದೆ. ನನ್ನ ಶವವನ್ನು ಚೀಕನಹಳ್ಳಿಗೆ ತೆಗೆದುಕೊಂಡು ಹೋಗಬೇಡಿ, ಬೇಲೂರು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ. ಅಮ್ಮ, ಕುಟುಂಬಸ್ಥರೇ ನನ್ನನ್ನು ಕ್ಷಮಿಸಿಬಿಡಿ I MISS YOU AMMA.. ನನ್ನ ಅಂತಿಮ ದರ್ಶನಕ್ಕೆ ಬೇಲೂರು ಶಾಸಕರು ಬರಬೇಕು. ಆನ್‌ಲೈನ್ ಗೇಮ್ ನನ್ನ ಜೀವನವನ್ನು ತೆಗೆದುಬಿಡ್ತು ಎಂದು ನೋವು ಹೇಳಿಕೊಂಡಿದ್ದಾನೆ.
25 year old youth commits suicide after losing money in online game after huge loan in Hassan. The Deceased has been identified as Ramesh Gowda. He was working at finance company.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
18-10-26 10:36 am
Mangaluru Staffer
ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಘಟನೆ ; ತೀವ್ರ ಗಾಯಗೊ...
17-10-26 11:09 am
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am