ಬ್ರೇಕಿಂಗ್ ನ್ಯೂಸ್
02-12-24 01:55 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.2: ಕನ್ನಡದ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಹೈದರಾಬಾದ್ನಗರದ ತನ್ನ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಶೋಭಿತಾ 'ಬ್ರಹ್ಮಗಂಟು' ಸೀರಿಯಲ್ ನಲ್ಲಿ ವಿಲನ್ ಪಾತ್ರ ಮಾಡಿ ರಾಜ್ಯದ ಗಮನ ಸೆಳೆದಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್ನ ಗಚ್ಚಿಬೌಲಿ ಪೊಲೀಸರು ತನಿಖೆ ನಡೆಸಿದ್ದು ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದೆ ಎನ್ನಲಾಗುತ್ತಿದೆ. ಹೈದರಾಬಾದ್ ಮೂಲದ ವ್ಯಕ್ತಿಯನ್ನು ಶೋಭಿತಾ ಮದುವೆಯಾಗಿದ್ದರು. ಹಾಗಾಗಿ, ಮದುವೆ ಬಳಿಕ ಅಲ್ಲಿಯೇ ನೆಲೆಸಿದ್ದರು. ಪೊಲೀಸರಿಗೆ ಶೋಭಿತಾ ಸಾವಿಗೂ ಮುನ್ನ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಸಿಕ್ಕಿದೆ. ‘ನೀನು ಸಾಯಬಹುದು ಅಂದ್ರೆ ನೀನು ಸಾಯಬಹುದು, ಜೀವನದಲ್ಲಿ ಎಲ್ಲವೂ ಪೆರ್ಫೆಕ್ಟ್ ಆಗಿದೆ’ ಎಂದು ಬರೆಯಲಾಗಿದೆ. ಇದರ ಅರ್ಥ ಏನೆಂದು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ‘ಶೋಭಿತಾ ಸಾವಿಗೆ ಖಿನ್ನತೆ ಕಾರಣವೇ? ಪತಿಯೊಂದಿಗೆ ಭಿನ್ನಾಭಿಪ್ರಾಯ ಇತ್ತೇ’ ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.
ನಟಿ ಶೋಭಿತಾ ಮೂಲತಃ ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೆರೂರು ಗ್ರಾಮದ ನಿವಾಸಿಯಾಗಿದ್ದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರು. ರೈತ ಶಿವಣ್ಣ -ದೇವಮ್ಮ ದಂಪತಿಯ ನಾಲ್ಕನೇ ಪುತ್ರಿಯಾಗಿದ್ದು ಸಕಲೇಶಪುರ ಪದವಿ ಪೂರ್ವ ಕಾಲೇಜಿನಲ್ಲಿ 8, 9, 10 ನೇ ತರಗತಿ ಮುಗಿಸಿದ್ದರು. ಪಿಯುಸಿ ಓದಲು ಬೆಂಗಳೂರಿಗೆ ತೆರಳಿದ್ದು ಅಲ್ಲಿರುವಾಗಲೇ ನಟನೆ, ಮಾಡೆಲಿಂಗ್ ಸಂಪರ್ಕ ಸಿಕ್ಕಿತ್ತು. ನಂತರ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸತೊಡಗಿದ್ದರು.
ಶೋಭಿತಾ ಮದುವೆ ಬಳಿಕ ಧಾರಾವಾಹಿ ಹಾಗೂ ಸಿನಿಮಾಗಳಿಂದ ದೂರ ಉಳಿದಿದ್ದರು. ಸಾವಿನ ಬಗ್ಗೆ ಪೊಲೀಸರು ಪತಿ ಸುಧೀರ್ ರೆಡ್ಡಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸುಧೀರ್ ರೆಡ್ಡಿ ಮೂರು ದಿನಗಳ ಹಿಂದೆ ಗೋವಾಕ್ಕೆ ತೆರಳಿದ್ದರು. ಈ ನಡುವೆ, ಶೋಭಿತಾ ತನ್ನ ಸೋದರಿಯೊಂದಿಗೆ ಮಾತುಕತೆ ಮಾಡಿದ್ದರು. 'ತುಂಬ ಖುಷಿಯಲ್ಲಿದ್ದೇನೆ. ಎರಡು ವಾರದ ನಂತರ ಊರಿಗೆ ಬರುತ್ತೇನೆ’ ಎಂದು ಸಹೋದರಿ ಬಳಿ ಹೇಳಿಕೊಂಡಿದ್ದರು.
ಈಗಾಗಲೇ ಶೋಭಿತಾ ಅವರ ಪೋಷಕರು ಹೈದರಾಬಾದ್‌ಗೆ ತೆರಳಿದ್ದು, ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತದೇಹವನ್ನು ಬೆಂಗಳೂರಿಗೆ ತರುವ ಸಾಧ್ಯತೆಗಳಿವೆ. ಶನಿವಾರ (ನ.30) ರಾತ್ರಿ ಶೋಭಿತಾ ಶಿವಣ್ಣ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ಇದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಶೋಭಿತಾ ಶಿವಣ್ಣ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ಅದಕ್ಕೂ ಮುನ್ನ ಶೋಭಿತಾ ಅವರು ಕೋಗಿಲೆ, ಗಾಳಿಪಟ, ದೀಪವೂ ನಿನ್ನದೇ ಗಾಳಿಯು ನಿನ್ನದೇ, ಮೀನಾಕ್ಷಿ ಮದುವೆ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಕಿರುತೆರೆಗೆ ಕಾಲಿಡುವುದಕ್ಕೂ ಮುನ್ನ ಖಾಸಗಿ ವಾಹಿನಿಗಳಲ್ಲಿ ನಿರೂಪಕಿಯಾಗಿಯೂ ಶೋಭಿತಾ ಕೆಲಸ ಮಾಡಿದ್ದಾರೆ. 'ಎರಡೊಂದ್ಲಾ ಎರಡು', 'ವಂದನಾ', 'ಅಟೆಂಪ್ಟ್ ಟು ಮರ್ಡರ್' ಸಿನಿಮಾಗಳಲ್ಲಿ ಶೋಭಿತಾ ನಟಿಸಿದ್ದಾರೆ. 'ಫಸ್ಟ್ ಡೇ ಫಸ್ಟ್ ಶೋ' ಅನ್ನೋ ಹೊಸ ಕನ್ನಡ ಸಿನಿಮಾದಲ್ಲೂ ಶೋಭಿತಾ ನಟಿಸಿದ್ದು, ಈ ಸಿನಿಮಾ ಇನ್ನಷ್ಟೇ ತೆರೆಗೆ ಬರಬೇಕಿದೆ.
"Kannada actress Shobhitha Shivanna found dead in apartment. She allegedly committed suicide by hanging herself at her residence in Kondapur, within the limits of PS Gachibowli. The police have registered a case,"
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm