ಬ್ರೇಕಿಂಗ್ ನ್ಯೂಸ್
03-11-24 09:54 pm HK News Desk ಕರ್ನಾಟಕ
ಮೈಸೂರು, ನ.3: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮತ್ತೊಂದು ಮಹಾ ಗೋಲ್ಮಾಲ್ ಪ್ರಕರಣ ಎಂಟು ತಿಂಗಳ ನಂತರ ಬೆಳಕಿಗೆ ಬಂದಿದೆ. ಜನರು ವಿವಿಧ ಸೇವೆಗಳಿಗಾಗಿ ಪ್ರಾಧಿಕಾರಕ್ಕೆ ಕಟ್ಟಿದ ಹಣವನ್ನ ಮುಡಾ ನೌಕರರು ಮತ್ತು ಬ್ಯಾಂಕ್‌ನ ಕೆಲ ನೌಕರರು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ಹೀಗೆ ಜೇಬು ಸೇರಿದ ಹಣದ ಪ್ರಮಾಣ ಕೋಟಿ ದಾಟಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ತನ್ನ ವಿವಿಧ ಸೇವೆಗಳನ್ನು ನೀಡಲು ಹಣ ನಿಗದಿ ಮಾಡಿದೆ. ಇದಕ್ಕಾಗಿ ಬ್ಯಾಂಕ್ ಆಫ್ ಬರೋಡಾದಲ್ಲಿ ಪ್ರಾಧಿಕಾರದ ಬ್ಯಾಂಕ್ ಖಾತೆಯನ್ನು ಮಾಡಿದೆ. ಜನರು ಅಲ್ಲಿ ಹಣ ಕಟ್ಟಿ ಚಲನ್ ಪಡೆದು ಅದನ್ನು ಪ್ರಾಧಿಕಾರದ ಸಂಬಂಧಪಟ್ಟ ಶಾಖೆಗೆ ನೀಡಿದರೆ ಅವರಿಗೆ ಆ ಸೇವೆಯನ್ನು ನೀಡಲಾಗುತ್ತದೆ.
ಕಳೆದ ವರ್ಷ ಹೀಗೆ ಚಲನ್ ಕಟ್ಟಿ ಸೇವೆ ಪಡೆದ ಒಟ್ಟು 93 ಜನರ ಹಣ ಪ್ರಾಧಿಕಾರಕ್ಕೆ ಬಂದಿಲ್ಲ. ಇದರ ಮೊತ್ತ 1 ಕೋಟಿ ರೂ.ಗೂ ಹೆಚ್ಚಿದೆ. ಪ್ರಾಧಿಕಾರದ ಹಣಕಾಸು ಶಾಖೆಯವರು ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕರಿಗೆ ಪತ್ರ ಬರೆದು 93 ಜನರು ಕಟ್ಟಿರುವ ಹಣ ನಮಗೆ ಡೆಪಾಸಿಟ್ ಮಾಡಿ ಎಂದು ಕೇಳಿದ್ದಾರೆ.
ಈ ಪತ್ರಕ್ಕೆ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕರು ಉತ್ತರ ನೀಡಿದ್ದು ನೀವು ಕೇಳಿರುವ 93 ಜನರ ಹಣ ಬ್ಯಾಂಕ್‌ಗೆ ಸಂದಾಯವೇ ಆಗಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಅಲ್ಲಿಗೆ ಬ್ಯಾಂಕ್ ಚಲನ್ ಹಾಗೂ ಬ್ಯಾಂಕ್ ಸ್ಹೀಲ್ ಎರಡೂ ನಕಲಿ ಮಾಡಿ ಹಣ ವಂಚಿಸಿರುವ ಶಂಕೆ ವ್ಯಕ್ತವಾಗಿದೆ. ಬ್ಯಾಂಕ್‌ನ ಕೆಲವು ಸಿಬ್ಬಂದಿ ಹಾಗೂ ಮೂಡಾದ ನೌಕರರು ಸೇರಿ ಗ್ರಾಹಕರಿಂದ ಹಣ ಪಡೆದು ಅವರಿಗೆ ನಕಲಿ ಸ್ಹೀಲ್ ಹಾಕಿರುವ ಚಲನ್ ಕೊಟ್ಟು ವಂಚಿಸಿದ್ದಾರೆ. ಆಮೂಲಕ ನಿರ್ದಿಷ್ಟ ಸೇವೆಯನ್ನು ಗ್ರಾಹಕನಿಗೆ ನೀಡದೇ ಮೂಡಾಗೆ ಸೇರಬೇಕಾದ ಹಣವನ್ನು ತಮ್ಮ ಜೇಬಿಗೆ ಇಳಿಸಿದ್ದಾರೆ ಎನ್ನುವ ಶಂಕೆಯಿದೆ.
Muda scam, another muda scam exposed, challan money misused in Mysuru.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
18-10-26 10:36 am
Mangaluru Staffer
ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಘಟನೆ ; ತೀವ್ರ ಗಾಯಗೊ...
17-10-26 11:09 am
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am