ಬ್ರೇಕಿಂಗ್ ನ್ಯೂಸ್
10-10-24 08:19 pm HK News Desk ಕರ್ನಾಟಕ
ಮೈಸೂರು, ಅ.10: ಬೈಕ್ ಗ್ಯಾರೇಜ್ ನಡೆಸುತ್ತಿದ್ದ ಮೆಕ್ಯಾನಿಕ್ ಒಬ್ಬನಿಗೆ ಕೇರಳದ ಲಾಟರಿ ಹೊಡೆದಿದ್ದು ರಾತ್ರೋರಾತ್ರಿ ಸಾಮಾನ್ಯ ಮನುಷ್ಯ ಕೋಟ್ಯಾಧಿಪತಿ ಆಗಿದ್ದಾನೆ. ಕೇರಳ ಲಾಟರಿಯಲ್ಲಿ ಪಾಂಡವಪುರ ಮೂಲದ ಅಲ್ತಾಫ್ ಪಾಷಾ ಎಂಬ ಯುವಕ 25 ಕೋಟಿ ರೂ. ಬಹುಮಾನ ಗೆದ್ದಿದ್ದು ಎಲ್ಲರ ಗಮನಸೆಳೆದಿದೆ.
ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಅಲ್ತಾಫ್, 15 ವರ್ಷಗಳಿಂದ ಲಾಟರಿ ಖರೀದಿಸುವ ಖಯಾಲಿ ಹೊಂದಿದ್ದ. ಇತ್ತೀಚೆಗೆ ಕೇರಳಕ್ಕೆ ಹೋಗಿದ್ದಾಗ ಓಣಂ ಬಂಪರ್ ಲಾಟರಿಯನ್ನು 500 ರೂ. ಕೊಟ್ಟು ಖರೀದಿ ಮಾಡಿದ್ದ. ಬಹುಮಾನ ಬಂದಿರುವ ವಿಚಾರವನ್ನು ಮೊದಲಿಗೆ ನಂಬುವುದಕ್ಕೂ ಅಲ್ತಾಫ್ ಕುಟುಂಬ ತಯಾರಿರಲಿಲ್ಲ. ಮಾಧ್ಯಮದ ಜೊತೆಗೆ ಅಲ್ತಾಫ್ ಪತ್ನಿ ಸೀಮಾ ಬಾನು ಮತ್ತು ಮಗಳು ತನಲ್ ಸಂತಸ ಹಂಚಿಕೊಂಡಿದ್ದಾರೆ.
ಮೊದಲಿಗೆ ನಾವು ಲಾಟರಿಯಲ್ಲಿ ಬಹುಮಾನ ಬಂದಿದೆ ಎಂದು ನಂಬಿರಲಿಲ್ಲ. ಇಂದು ಬೆಳಗ್ಗೆ ಪರಿಶೀಲನೆ ಬಳಿಕ ನಮಗೆ ನಂಬಿಕೆ ಬಂದಿತ್ತು. 15 ವರ್ಷದಿಂದ ಲಾಟರಿ ತೆಗೆದುಕೊಳ್ಳುತ್ತಿದ್ದರು. ಲಾಟರಿ ತೆಗೆದುಕೊಳ್ಳುವುದಕ್ಕೇ ಕೇರಳಕ್ಕೆ ಹೋಗುತ್ತಿದ್ದರು. 15 ವರ್ಷದಿಂದ ಯಾವುದೇ ಲಾಟರಿ ಗೆದ್ದಿರಲಿಲ್ಲ. ಈಗಲು ಅಷ್ಟೇ ನಮಗೆ ಬಂದಿಲ್ಲ ಅಂತನೇ ಅಂದುಕೊಂಡಿದ್ದೆವು. ಈ ಸಲ ಎರಡು ಲಾಟರಿ ಟಿಕೆಟ್ ತಂದಿದ್ದರು. ಒಂದನ್ನು ಯಾರಿಗಾದ್ರು ಕೊಟ್ಟುಬಿಡುತ್ತೇನೆ ಅಂದಿದ್ರು. ಆದ್ರೆ ಅದೇ ಗೆದ್ದುಬಿಟ್ಟರೆ ಅಂತ ಹೇಳಿದ್ದಕ್ಕೆ ಆ ಲಾಟರಿಯನ್ನೂ ಇಟ್ಟುಕೊಂಡಿದ್ದರು. ನೋಡಿದ್ರೆ ಅದೇ ಲಾಟರಿಗೆ 25 ಕೋಟಿ ಬಹುಮಾನ ಬಂದಿದೆ ಎಂದು ಸೀಮಾ ಬಾನು ಹೇಳಿದ್ದಾರೆ.
ಮೊದಲಿಗೆ ನಮಗೆ ನಂಬಿಕೆಯೆ ಇರಲಿಲ್ಲ. ಇಷ್ಟು ವರ್ಷ ಲಾಟರಿ ತೆಗೆದುಕೊಳ್ಳುವ ವಿಚಾರಕ್ಕೆ ಮನೆಯಲ್ಲಿ ಗಲಾಟೆಯೂ ಆಗಿತ್ತು. ಲಾಟರಿ ತೆಗೆದುಕೊಳ್ಳುವುದು ಬೇಡ ಅಂತ ಹೇಳುತ್ತಿದ್ದೆವು. ಇದೀಗ ಲಾಟರಿ ಗೆದ್ದಿರುವುದು ಖುಷಿಯಾಗಿದೆ. ಸ್ವಲ್ಪ ಸಾಲ ಇದೆ, ಅದನ್ನು ತೀರಿಸಿ ಮನೆ ತೆಗೆದುಕೊಳ್ಳಬೇಕೆಂಬ ಆಸೆ ಇದೆ ಎಂದು ಸೀಮಾ ಹೇಳಿದ್ದಾರೆ. ಅಲ್ತಾಫ್ ಲಾಟರಿ ಬಹುಮಾನ ಪಡೆಯುವುದಕ್ಕಾಗಿ ಕೇರಳಕ್ಕೆ ತೆರಳಿದ್ದಾರೆ. 25 ಕೋಟಿ ಮೊತ್ತದಲ್ಲಿ ತೆರಿಗೆ ಕಳೆದು 17.5 ಕೋಟಿ ಮೊತ್ತ ಅಲ್ತಾಫ್ ಕೈಸೇರಲಿದೆ.
Mandya youth gets bumper lottery of 25 crores, gets 12 crore after tax deduction. Altaf who had been to kerala had purchased two lotteries out of which he has been found the winner of 25 crores.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 11:04 pm
Mangaluru Staffer
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
18-10-26 09:45 pm
HK News Staffer
Kokkada Fight, Mangalore: ಕೊಕ್ಕಡ ; ಹೂವಿನ ವ್ಯಾ...
18-10-26 09:32 pm
Fr Cyprian Pinto Arrest, POCSO: ಬಾಲಕರಿಗೆ ಲೈಂಗ...
18-10-26 10:36 am
ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಘಟನೆ ; ತೀವ್ರ ಗಾಯಗೊ...
17-10-26 11:09 am
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm