ಬ್ರೇಕಿಂಗ್ ನ್ಯೂಸ್
28-09-24 10:46 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.28: ಕರಾವಳಿಯ ಹಿಂದೂ ಫೈರ್ ಬ್ರ್ಯಾಂಡ್ ಎಂದು ಖ್ಯಾತಿ ಪಡೆದಿದ್ದ, ಕಳೆದ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುತ್ತೇನೆಂದು ಹೇಳಿ ಉದ್ಯಮಿಯೊಬ್ಬರನ್ನು ವಂಚಿಸಿ ಜೈಲು ಸೇರಿದ್ದ ಚೈತ್ರಾ ಕುಂದಾಪುರ ಈ ಬಾರಿ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ.
ಚೈತ್ರಾ ಅವರು ಉಡುಪಿ ಜಿಲ್ಲೆಯ ಕುಂದಾಪುರದವರು. ಹಿಂದು ಸಂಘಟನೆಗಳ ಪರವಾಗಿ ಪ್ರಖರ ಭಾಷಣಕಾರರಾಗಿಯೂ ಗಮನ ಸೆಳೆದಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸ್ತೇನೆ ಎಂದು ಉದ್ಯಮಿಯೊಬ್ಬರಿಂದ ಐದು ಕೋಟಿ ಪಡೆದು ವಂಚಿಸಿದ ಪ್ರಕರಣದಲ್ಲಿ ಜೈಲು ಸೇರಿದ್ದರು.
ಸೆಪ್ಟೆಂಬರ್ 29 ರಂದು ಬಿಗ್ ಬಾಸ್ ಸೀಸನ್ 11ರ ಪ್ರಸಾರ ಪ್ರಾರಂಭವಾಗಲಿದೆ. ಸೆಪ್ಟೆಂಬರ್ 28ರಂದು ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲು ಕಲರ್ಸ್ ಕನ್ನಡ ಮುಂದಾಗಿದೆ. ಈ ನಡುವೆ, ‘ರಾಜಾ ರಾಣಿ’ ಶೋ ಫಿನಾಲೆಯಲ್ಲಿ ಕೆಲವು ಕಂಟೆಸ್ಟ್ಗಳನ್ನು ರಿವೀಲ್ ಮಾಡಲಾಗುತ್ತಿದೆ. ಈ ರೀತಿ ಮಾಡುತ್ತಿರುವುದು ಇದೇ ಮೊದಲು. ಅದಕ್ಕೂ ಮೊದಲು ಪ್ರೋಮೋ ರಿಲೀಸ್ ಆಗಿದ್ದು, ಸ್ಪರ್ಧಿಗಳ ಮುಖವನ್ನು ತೋರಿಸಲಾಗಿದೆ. ಕಲರ್ಸ್ ಕನ್ನಡದಲ್ಲಿ ‘ಬಿಗ್ ಬಾಸ್’ಗೆ ಸಂಬಂಧಿಸಿದ ಹೊಸ ಪ್ರೋಮೋ ರಿಲೀಸ್ ಆಗಿದೆ. ಕೆಂಪು ಲೈಟಿನ ಕತ್ತಲಿನ ಪ್ರೋಮೊದಲ್ಲಿ ಕೆಲ ಸ್ಪರ್ಧಿಗಳ ಮುಖವನ್ನು ಅಸ್ಪಷ್ಟವಾಗಿ ತೋರಿಸಲಾಗಿದೆ.
ರೀಲ್ಸ್ ಮೂಲಕ ಖ್ಯಾತಿ ಆಗಿರುವ ಭೂಮಿಕಾ ಬಸವರಾಜ್, ʼಸತ್ಯʼ ಧಾರವಾಹಿ ಖ್ಯಾತಿಯ ಗೌತಮಿ ಜಾಧವ್, ‘ಕನ್ನಡತಿ’ ಸೀರಿಯಲ್ ಖ್ಯಾತಿಯ ಕಿರಣ್ ರಾಜ್, ‘ಒಲವಿನ ನಿಲ್ದಾಣ’ ಸೀರಿಯಲ್ ನಟ ಅಕ್ಷಯ್ ನಾಯಕ್, ಎಸ್ ನಾರಾಯಣ್ ಅವರ ಪುತ್ರ ಪಂಕಜ್, ನಟಿ ಭಾವನಾ ಮೆನನ್, ನಟಿ ಪ್ರೇಮಾ ಈ ಪ್ರೋಮೊದಲ್ಲಿ ಇದ್ದಾರೆ ಎಂದು ನೆಟ್ಟಿಗರು ಅಂದಾಜಿಸಿದ್ದಾರೆ.
Chaitra Kundapur, who was known as the Hindu firebrand of the coast, who cheated a businessman by saying that he would give him BJP ticket from Byndur during the last assembly election and went to jail, has entered the Bigg Boss house as a contestant in Bigg Boss season 11 this time.
15-08-25 03:20 pm
Bangalore Correspondent
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
Home Minister Parameshwar: ದ್ವೇಷ ಭಾಷಣ ಮಾಡುವವರ...
14-08-25 03:51 pm
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
15-08-25 01:32 pm
HK News Desk
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm