ಬ್ರೇಕಿಂಗ್ ನ್ಯೂಸ್
15-09-24 05:33 pm Bengaluru Correspondent ಕರ್ನಾಟಕ
ಬೆಂಗಳೂರು, ಸೆ.15: ದಲಿತರನ್ನು ಅವಮಾನಿಸಿ ಜಾತಿ ನಿಂದನೆ, ಲಂಚಕ್ಕಾಗಿ ಗುತ್ತಿಗೆದಾರನನ್ನು ಪೀಡಿಸಿದ ಆರ್.ಆರ್. ನಗರ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇಷ್ಟಕ್ಕೂ ಪ್ರಭಾವಿ ಶಾಸಕರ ಬಂಧನಕ್ಕೆ ಕಾರಣವಾಗಿದ್ದೇ ದಲಿತರ ಮೇಲಿನ ನಿಂದನೆ ಕೇಸು.
ಲಂಚಕ್ಕಾಗಿ ಬಿಬಿಎಂಪಿ ಗುತ್ತಿಗೆದಾರರೊಬ್ಬರ ಜೊತೆಗೆ ಅಶ್ಲೀಲವಾಗಿ ಮಾತನಾಡಿದ್ದಲ್ಲದೆ, ನಿನ್ನ ಪತ್ನಿಯನ್ನು ನನ್ನೊಂದಿಗೆ ಮಂಚಕ್ಕೆ ಕಳಿಸು, ನಿನ್ನ ತಾಯಿ ಯಾರು ಹೊಲೆಯನ ಜೊತೆಗೆ ಹೋಗಿದ್ದಾಳೆಯೇ ಎಂದು ಅವಾಚ್ಯ ಪದಗಳಿಂದ ಶಾಸಕ ಮುನಿರತ್ನ ನಿಂದಿಸಿರುವ ಆಡಿಯೋ ವೈರಲ್ ಆಗಿತ್ತು. ಗುತ್ತಿಗೆದಾರನ ಜೊತೆಗೆ ಅಹಂಕಾರದಲ್ಲಿ ಮಾತನಾಡಿದ್ದ ಶಾಸಕನ ಫೋನ್ ರೆಕಾರ್ಡ್ ಆಗಿತ್ತು. ಇದರಲ್ಲಿ ಗುತ್ತಿಗೆಗಾರನಿಗೆ ನಿಂದಿಸುವುದು, ಆತನ ಪತ್ನಿಗೆ ಬೈಯುವುದರ ಜೊತೆಗೆ ಪರಿಶಿಷ್ಟ ಸಮುದಾಯವನ್ನು ಕೆಟ್ಟದಾಗಿ ಅವಹೇಳನ ಮಾಡಿದ್ದು ದಾಖಲಾಗಿತ್ತು.
ಪರಿಶಿಷ್ಟ ಜಾತಿ, ಪಂಗಡದವರನ್ನು ಹೆಸರೆತ್ತಿ ಬೈಯುವುದು, ಅವರ ಬಗ್ಗೆ ಹೀನಾಯವಾಗಿ ಮಾತನಾಡುವುದು ಶಿಕ್ಷಾರ್ಹ ಅಪರಾಧ. ಇದೇ ವಿಚಾರದಲ್ಲಿ ವಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಅಂಬೇಡ್ಕರ್ ಸೇನೆಯವರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದು ಶಾಸಕ ಮುನಿರತ್ನ ಪಾಲಿಗೆ ಬಿಸಿತುಪ್ಪವಾಗಿತ್ತು. ಅಂಬೇಡ್ಕರ್ ಸೇನೆಯ ಪಿ.ಮೂರ್ತಿಯವರ ದೂರನ್ನು ಆಧರಿಸಿ ಪೊಲೀಸರು ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದರು. ನೀನು ಗೌಡ ಅಲ್ವಾ.. ನಿನ್ನ ತಾಯಿಯನ್ನು ಯಾಕೆ ಹೊಲೆಯನ ಜೊತೆಗೆ ಕಳಿಸಿದ್ದೀಯಾ, ನನ್ನ ಜೊತೆಗೆ ಕಳಿಸು ಎಂದು ಶಾಸಕ ಮುನಿರತ್ನ ಮಾತಾಡಿದ್ದಾರೆ ಎನ್ನಲಾದ ಆಡಿಯೋ ಮುಂದಿಟ್ಟು ದಲಿತ ಸಂಘಟನೆಯವರು ಕೇಸು ದಾಖಲಿಸಿದ್ದರು. ಇದಲ್ಲದೆ, ಪೊಲೀಸ್ ಠಾಣೆಯ ಮುಂದೆ ಸೇರಿ ಪ್ರತಿಭಟನೆಯನ್ನೂ ಮಾಡಿದ್ದರು.
ಇದರಿಂದ ಪೊಲೀಸರು ಪ್ರಭಾವಿ ಶಾಸಕನಾಗಿದ್ದರೂ ಮುನಿರತ್ನನನ್ನು ಅರೆಸ್ಟ್ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು. ದಲಿತ ಸಮುದಾಯದವರೇ ಗೃಹ ಸಚಿವರಾಗಿರುವುದರಿಂದಲೂ ಪೊಲೀಸರಿಗೆ ಸ್ಪಷ್ಟ ಸೂಚನೆ ಹೋಗಿರಬಹುದು. ಈ ಬಗ್ಗೆ ಅಂಬೇಡ್ಕರ್ ಸೇನೆಯ ಪಿ. ಮೂರ್ತಿಯವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಶಾಸಕನನ್ನು ಬಂಧಿಸಿದ್ದಕ್ಕೆ ಬೆಂಗಳೂರು ಪೊಲೀಸ್ ಕಮಿಷನರ್ ಮತ್ತು ಪೊಲೀಸ್ ಇಲಾಖೆಗೆ ಅಭಿನಂದನೆ ಹೇಳಿದ್ದಾರೆ. ಅಲ್ಲದೆ, ಆರ್.ಆರ್. ನಗರ ಕ್ಷೇತ್ರದಲ್ಲಿ 70 ಸಾವಿರದಷ್ಟು ದಲಿತ ವರ್ಗದ ಮತದಾರರಿದ್ದಾರೆ. ಈತ ತನ್ನ ಕ್ಷೇತ್ರದ ಮತದಾರರಿಗೆ ಅವಹೇಳನ ಮಾಡಿದ್ದಾರೆ. ಪರಿಶಿಷ್ಟ ಸಮುದಾಯದವರ ಬಗ್ಗೆ ನಿಕೃಷ್ಟವಾಗಿ ಮಾತನಾಡಿದ್ದಾರೆ. ಅಂಬೇಡ್ಕರ್ ಸಂವಿಧಾನವೇ ಈತನನ್ನು ಜೈಲಿಗಟ್ಟಿದೆ. ಇಂಥ ಮನಸ್ಥಿತಿಯ ವ್ಯಕ್ತಿ ಶಾಸಕನಾಗಿರಬಾರದು. ಈ ರೀತಿ ಯಾರೇ ಮಾತಾಡಿದ್ರೂ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
P Murthy president of ambedkar sena Dss reason behind the arrest of RR Nagar BJP MLA Munirathna. The first FIR was registered by BBMP contractor K Cheluvaraju, accusing Naidu of demanding a bribe of Rs 30 lakh, cheating him of Rs 20 lakh under the pretext of getting him 10 autorickshaws for garbage disposal, and issuing threats to his life.
04-05-25 09:55 pm
HK News Desk
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
04-05-25 11:26 pm
Mangalore Correspondent
Mangalore, Hate speech, BJP MLA Harish Poonja...
04-05-25 08:49 pm
Minister Gundu Rao, Mangalore: ಮುಸ್ಲಿಂ ಮುಖಂಡರ...
04-05-25 08:39 pm
Mp Brijesh Chowta, Suhas Shetty Murder: ಆ್ಯಂಟ...
03-05-25 10:57 pm
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm